ಜೂನ್ 11, 2021

ಕೊರೋನಾ ಎದುರು ಸೋತ "ದಲಿತ ಕವಿ"

 

ಕನ್ನಡದ ಖ್ಯಾತ ಸಾಹಿತಿ 'ದಲಿತ ಕವಿ' ಎಂದೇ ಪ್ರಸಿದ್ಧರಾಗಿದ್ದ ಸಿದ್ಧಲಿಂಗಯ್ಯನವರು ಇಂದು ಸಂಜೆ (ಶುಕ್ರವಾರ ದಿನಾಂಕ ೧೧ ಜೂನ್ ೨೦೨೧ ರಂದು) ನಿಧನರಾಗಿದ್ದಾರೆ. ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ರಚಿಸಿದ ಸಿದ್ದಲಿಂಗಯ್ಯ ಅವರು ಕಾವ್ಯನಾಟಕ, ಪ್ರಬಂಧ, ವಿಮರ್ಶೆಸಂಶೋಧನೆಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.

ಮೇ ರಂದು ಕೊರೊನಾ ಸೋಂಕಿತರಾಗಿದ್ದ ಕವಿ ಸಿದ್ದಲಿಂಗಯ್ಯ ಅವರು ಅಸ್ಪತ್ರೆಗೆ ದಾಖಲಾಗಿದ್ದರು. ಮೇ ರಂದು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆಯೇ ಮೃತಪಟ್ಟಿದ್ದಾರೆ. ಓರ್ವ ಪುತ್ರಿ, ಪುತ್ರ ಹಾಗು ಪತ್ನಿಯನ್ನು ಅಗಲಿದ್ದಾರೆ. ಇದ್ದಾರೆ. ಅವರ ಪತ್ನಿಗೂ ಕೂಡ ಕೊರೋನಾ ಸೋಂಕು ತಗುಲಿತ್ತು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

೧೯೫೪ ರ ಫೆಬ್ರವರಿ ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿ ಪಡೆದಿದ್ದರು. ೧೯೭೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ವರ್ಣಪದಕದೊಂದಿಗೆ ಎಂ.ಎ. ಪದವಿ, ಪ್ರೊ.ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ಪ್ರೌಢ ಪ್ರಬಂಧದ ಮೇಲೆ ೧೯೮೯ ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಲಾಗಿಯೂ ಕಾರ್ಯನಿರ್ವಹಿಸಿದ್ದರು. ೧೯೭೫ ರಲ್ಲಿ ಅವರ 'ಹೊಲೆಮಾದಿಗರ ಹಾಡು' ಕವ ಸಂಕಲನ ಪ್ರಕಟಗೊಂಡಿತು. ಬಳಿಕ 'ಸಾವಿರಾರು ನದಿಗಳು' , 'ಕಪ್ಪು ಕಾಡಿನ ಹಾಡು', 'ಮೆರವಣಿಗೆ', 'ನನ್ನ ಜನಗಳು ಮತ್ತು ಇತರ ಕವಿತೆಗಳು', 'ಆಯ್ದ ಕವನಗಳು' ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ. 'ಪಂಚಮ' , 'ನೆಲಸಮ' , 'ಏಕಲವ್ಯ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. 'ಅವತಾರಗಳು' ಪ್ರಬಂಧ ಕೃತಿಯು ೧೯೯೧ ರಲ್ಲಿ ಪ್ರಕಟಗೊಂಡಿದೆ. 'ರಸಗಳಿಗೆಗಳು' , 'ಎಡಬಲ, 'ಹಕ್ಕಿನೋಟ', 'ಜನಸಂಸ್ಕೃತಿ' ಮುಂತಾದ ಲೇಖನ ಸಂಗ್ರಹಗಳು, 'ಸದನದಲ್ಲಿ ಸಿದ್ದಲಿಂಗಯ್ಯ ಭಾಗ ಮತ್ತು ಸೇರಿದಂತೆ ವಿವಿಧ ಕೃತಿಗಳು ಪ್ರಕಟಗೊಂಡಿವೆ.

'ಊರು ಕೇರಿ' ಇದು ಸಿದ್ದಲಿಂಗಯ್ಯ ಅವರ ಆತ್ಮಕಥೆ. ಎರಡು ಭಾಗದಲ್ಲಿ ಪ್ರಕಟಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗಕ್ಕಾಗಿ ಅವರು 'ಸಮಕಾಲೀನ ಕನ್ನಡ ಕವಿತೆಗಳು' ಭಾಗ-ಮತ್ತು ಭಾಗ-ನ್ನು ಸಂಪಾದಿಸಿಕೊಟ್ಟಿದ್ದಾರೆ. ಅವರ 'ಊರು ಕೇರಿ' ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದ್ದು, ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಅವಳ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.

ಸಿದ್ದಲಿಂಗಯ್ಯ ಅವರು ಚಲನಚಿತ್ರಗಳಿಗೂ ಗೀತೆಗಳನ್ನು ಬರೆದಿದ್ದಾರೆ. ಅದರಲ್ಲಿ ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ 'ಧರಣಿಮಂಡಲ ಮಧ್ಯದೊಳಗೆ' ಚಿತ್ರಕ್ಕೆ ಬರೆದ “ಗೆಳತಿ ಓ ಗೆಳತಿ” ಗೀತೆಗೆ ರಾಜ್ಯಪ್ರಶಸ್ತಿ ಲಭಿಸಿತ್ತು.

ಕನ್ನಡ ಸಾಹಿತ್ಯಲೋಕದಲ್ಲಿ ಬಂಡಾಯದ ಅಲೆ ಎಬ್ಬಿಸಿ ಹಲವರ ದನಿಯಾಗಿ ತಮ್ಮ ಲೇಖನಿಯನ್ನು ಬಳಸಿಕೊಂಡಿದ್ದವರು ಸಿದ್ದಲಿಂಗಯ್ಯ. ಇವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವೇ ಸರಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

1 ಕಾಮೆಂಟ್‌:

  1. ಸಾಹಿತ್ಯ ಕೃಷಿಯು ಸಮಾಜಕ್ಕೆ ಬೇಕಾಗಿರುವ ಸಂಧರ್ಭದಲ್ಲಿ ಇಂಥ ಸಾಹಿತ್ಯ ರತ್ನಗಳು ಕಣ್ಮರೆಯಾಗುತ್ಇರುವದ, ನಮ್ಮ ದೌರ್ಭಾಗ್ಯವೇ ಸರಿ, ಕೋರೋನಾ,ದಂಥ ಹೆಮ್ಮಾರಿಯನ್ನು ಓಡಿಸಲು ಎಲ್ಲರಿಗೂ ಆತ್ಮಸ್ಥೈರ್ಯ,ತುಂಬಿ ಬದುಕನ್ನು ಮುನ್ನಡೆಸುವ ಮಾರ್ಗದಲ್ಲಿ, ಅನುಭವಿಕ, ಸಾಹಿತಿಗಳು, ಅವರ ಸಾಹಿತ್ಯವನ್ನು ಕೂಡಾ ನಾವು ಕಳೆದುಕೊಂಡಿರುವೆವು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು, ನೀಡಲಿ.. ಅವರ ಕುಟುಂಬಕ್ಕೆ, ದುಖಃವನ್ನು ಭರಿಸುವ ಶಕ್ಇಯನ್ನು ನೀಡಲಿ..🙏🙏💐💐💐💐

    ಪ್ರತ್ಯುತ್ತರಅಳಿಸಿ