ಮಾರ್ಚ್ 29, 2021

ಆಕಾಶವಾಣಿ ವಾರ್ತೆಗಳು ಓದುತ್ತಿರುವವರು ಎ.ವಿ. ಚಿತ್ತರಂಜನದಾಸ

 


ಅಜ್ಜನಗದ್ದೆ ವೆಂಕಟಸುಬ್ಬರಾಯ ಚಿತ್ತರಂಜನದಾಸ ಇದು ಇವರ ಪೂರ್ಣ ಹೆಸರು. ಆಕಾಶವಾಣಿ ಕೇಳುತಿದ್ದವರಿಗೆಲ್ಲ ಇವರು .ವಿ. ಚಿತ್ತರಂಜನದಾಸ ಎಂತಲೇ ಚಿರಪರಿಚಿತರು. ಪತ್ರಿಕೆಗಳು ಕಾಲಿಡದ ಕುಗ್ರಾಮದಿಂದ ಹಿಡಿದು ನಗರದ ವರೆಗೆ, ಓದು ಬರಹ ಗೊತ್ತಿರದವರಿಂದ ಹಿಡಿದು ಪಂಡಿತರ ವರೆಗೆ ದೇಶ ವಿದೇಶದ ತಾಜಾ ಸುದ್ದಿಗಳನ್ನು ಸ್ಪುಟವಾಗಿ ಮುಟ್ಟಿಸುತ್ತಿದ್ದವರಲ್ಲಿ ಇವರೂ ಒಬ್ಬರು .ವಿ. ಚಿತ್ತರಂಜನದಾಸ.

ಆಕಾಶವಾಣಿಯಲ್ಲಿ ದೆಹಲಿ ಕೇಂದ್ರದಿಂದ ಕನ್ನಡ ವಾರ್ತೆಗಳು ಬರುತಿದ್ದ ದಿನಗಳಲ್ಲಿ ವಾರ್ತೆಗಳನ್ನು ಓದುತ್ತಿರುವವರಲ್ಲಿ .ವಿ. ಚಿತ್ತರಂಜನದಾಸ ಅವರೂ ಒಬ್ಬರಾಗಿದ್ದರು. ಗಂಭೀರ ಮತ್ತು ಆಕರ್ಷಕ ಶೈಲಿಯಲ್ಲಿ ಕನ್ನಡ ವಾರ್ತಾ ವಾಚನ ಮಾಡುವ ಮೂಲಕ ಮನೆ ಮಾತಾಗಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆಮ್ರಾಜೆ ಗ್ರಾಮದವರಾಗಿದ್ದ ಚಿತ್ತರಂಜನದಾಸ ಅವರು ಕೆಲವು ದಿನಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ದೆಹಲಿಯಲ್ಲಿ ಆಕಾಶವಾಣಿ ಉದ್ಘೋಷಕರಾಗಿ, ವಾರ್ತಾವಾಚಕರಾಗಿ, ಜಾಹಿರಾತು ಕ್ಷೇತ್ರದಲ್ಲಿ ಅನುವಾದಕರಾಗಿ, ಕೆಲಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ ಬಹಳ ಬೇಗ ಅಂದರೆ ತಮ್ಮ 61ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಇಂದು (29-03-2021) ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ನಮ್ಮೆಲ್ಲರ ವತಿಯಿಂದ ಭಾವಪೂರ್ಣ ಶೃದ್ಧಾಂಜಲಿ.

ಎ.ವಿ. ಚಿತ್ತರಂಜನದಾಸ ಅವರ ಜೀವನದ ಅತ್ಯಮೂಲ್ಯ ನೆನಪುಗಳು ಮತ್ತು ಸ್ವಾರಸ್ಯ ಸಂಗತಿಗಳನ್ನು ಅವರ ಧ್ವನಿಯಲ್ಲಿಯೇ ಕೇಳಲು ಈ ಲಿಂಕನ್ನು ಕ್ಲಿಕ್ಕಿಸಿ