ಆಗಸ್ಟ್ 25, 2020

ಕೀನ್ಯಾ ದೇಶದಲ್ಲಿದೆ ಅತ್ಯಂತ ಪ್ರಾಚೀನ ಗುಹಾಂತರ ಶಿವಲಿಂಗ


 ಕಾಲಾಂತರದಲ್ಲಿ ಮಣ್ಣಲ್ಲಿ ಹೂತು ಹೋಗಿದ್ದ ಗುಹೆ ಮತ್ತು ಶಿವಲಿಂಗದ ಇರುವಿಕೆಯನ್ನು ಅಲ್ಲಿನ ಹಸು ಅರಿತಿತ್ತು. ಹಸುವಿನ ಮೂಲಕ ಪ್ರದೇಶದ ಉತ್ಖನನ ಮಾಡಿದ್ದು ಅಲ್ಲಿನ ಭಾರತ ಮೂಲದ ಒಂದು ಹಿಂದು ಕುಟುಂಬ.


ಭಾರತದಿಂದ 5000 ಕಿಲೋ ಮೀಟರ್ ದೂರದಲ್ಲಿರುವ ಆಫ್ರಿಕಾ ಖಂಡದ ಒಂದು ದೇಶ ಕೀನ್ಯಾ. ದೇಶದಲ್ಲಿ ಅತ್ಯಂತ ಪ್ರಾಚೀನವಾದ ಶಿವಲಿಂಗವೊಂದು ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಶಿವಲಿಂಗವು ಹಿಂದೂ ಮಹಾಸಾಗರದ ದಡದಲ್ಲಿ ಇರುವ ಒಂದು ಗುಹೆಯಲ್ಲಿದೆ. ಗುಹೆ ಅದೆಷ್ಟೋ ವರ್ಷಗಳ ವರೆಗೆ ಅಗೋಚರವಾಗಿಯೇ ಇತ್ತು. ಅಂದರೆ ಮಣ್ಣಲ್ಲಿ ಹೂತು ಹೋಗಿತ್ತು. ಆದರೆ ಅಲ್ಲಿನ ಸ್ಥಳೀಯ ಗೋಮಾತೆಯಿಂದ ಗೋಚರಗೊಂಡು ಈಗ ಎಲ್ಲರ ದರ್ಶನಕ್ಕೆ ಲಭ್ಯವಾಗಿದೆ. ಗುಹಾಂತರ ಶಿವಲಿಂಗ ದೇವಾಲಯವೇಗೊಂಬೇಶ್ವರ ಶಿವಲಿಂಗ. ಗುಹಾಂತರ ಗೊಂಬೇಶ್ವರ ಶಿವಲಿಂಗ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಾಹಿಲಿ ಭಾಷೆಯಲ್ಲಿ ಗೊಂಬೆ ಎಂದರೆಹಸು. ಗೊಂಬೇಶ್ವರ ಎಂದರೆ ಹಸುಗಳ ಪ್ರಭು ಎಂದರ್ಥ. ಗುಹಾಂತರ ಶಿವಲಿಂಗಕ್ಕೆ ಹೆಸರು ಬರಲು ಕಾರಣ ತುಂಬಾ ಸ್ವಾರಸ್ಯಕರವಾಗಿದೆ. ಮುಂದೆ ಓದಿ.

ಮೊಂಬಾಸಾ ಹಿಂದೂ ಮಹಾಸಾಗರದ ದಡದಲ್ಲಿರುವ ಕೀನ್ಯಾ ದೇಶದ ಕರಾವಳಿ ಪ್ರದೇಶದ ನಗರವಾಗಿದೆ. ಮೊಂಬಾಸಾ ನಗರವನ್ನು ಕೀನ್ಯಾದಲ್ಲಿ ಬಿಳಿ ಮತ್ತು ನೀಲಿ ನಗರ ಎಂದು ಕರೆಯಲಾಗುತ್ತದೆ. ಇದು ಕೀನ್ಯಾ ದೇಶದ ಅತ್ಯಂತ ಹಳೆಯ (ಸಿರ್ಕಾ 900 ಕ್ರಿ..) ಮತ್ತು ಎರಡನೇ ಅತಿದೊಡ್ಡ ನಗರ (ರಾಜಧಾನಿ ನೈರೋಬಿಯ ನಂತರ) ಆಗಿದೆ. ಮೊಂಬಾಸಾ ನಗರದ ಸಮೀಪದಲ್ಲಿಯೇ ಹಿಂದು ಮಹಾಸಾಗರದ ದಡದಲ್ಲಿ ಗುಹೆಯೊಂದರಲ್ಲಿ ಗೊಂಬೇಶ್ವರ ಶಿವಲಿಂಗವಿದೆ.

ಹಿನ್ನೆಲೆ: ಗುಹಾಂತರ ದೇವಾಲಯದ ಹಿಂದಿನ ಕಥೆ ತುಂಬಾ ಸ್ವಾರಸ್ಯಕರವಾಗಿದೆ. ಬಹಳ ಹಿಂದೆಯೇ ಅಲ್ಲಿನ ಸ್ಥಳೀಯ ಗೋಪಾಲಕನೊಬ್ಬ ತನ್ನ ಹಸುಗಳನ್ನು ಪ್ರದೇಶದಲ್ಲಿ ಮೇಯಿಸಲು ಕರೆದೊಯ್ಯುತ್ತಿದ್ದ. ಅದರಲ್ಲಿ ಒಂದು ನಿರ್ದಿಷ್ಟ ಹಸು ಪ್ರತಿಸಲವು ಒಂದು ನಿರ್ದಿಷ್ಟ ಸ್ಥಳದಲ್ಲಿ ತನ್ನ ಕೆಚ್ಚಲಿನ ಎಲ್ಲಾ ಹಾಲನ್ನು  ಸುರಿಸುತ್ತಿತ್ತಂತೆ. ಸ್ಥಳೀಯ ಗೋಪಾಲಕನಿಗೆ ಹಸುವಿನ ನಡೆ ಕುತೂಹಲ ತರಿಸಿ ಅಲ್ಲಿಯೇ ಹತ್ತಿರದಲ್ಲಿದ್ದ ಭಾರತೀಯ ಹಿಂದೂ ಕುಟುಂಬವನ್ನು ಸಂಪರ್ಕಿಸಿ ಸಂಗತಿಯನ್ನು ತಿಳಿಸುತ್ತಾನೆ. ಆಗ ಕುಟುಂಬ ಸ್ಥಳದ ಉತ್ಖನನ ಮಾಡಲು ತಿಳಿಸುತ್ತಾರೆ. ಅವರ ಮಾತಿನಂತೆ ಸ್ಥಳೀಯರು ಪ್ರದೇಶದ ಕೆಳಗೆ ಅಗೆಯಲು ಪ್ರಾರಂಭ ಮಾಡುತ್ತಾರೆ. ಜಾಗವನ್ನು ಸಂಪೂರ್ಣವಾಗಿ ಅಗೆದು ನೋಡಿದಾಗ ಅಲ್ಲಿ ಆಶ್ಚರ್ಯವೇ ಕಾದಿತ್ತು. ಒಂದು ಕಾಲದಲ್ಲಿ ಭವ್ಯಾವಾಗಿದ್ದ ಗುಹಾಂತರ ದೇವಾಲಯವೊಂದು ಸುರಕ್ಷಿತ ಸ್ಥತಿಯಲ್ಲಿಯೆ ಇತ್ತು. ಅದರಲ್ಲಿ ಶಿವ ಲಿಂಗ ಮತ್ತು ಸುಂದರವಾದ ಗುಹೆಯ ದರ್ಶನವಾಯಿತು.


ಸುಂದರವಾದ ಗುಹೆ ಮತ್ತು ಶಿವಲಿಂಗದ ದರ್ಶನಕ್ಕೆ ಕಾರಣವಾದ ಹಸುವಿಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಸ್ಥಳವನ್ನು ಗೊಂಬೇಶ್ವರ ಗುಹಾಂತರ ಶಿವಲಿಂಗವೆಂದು ಕರೆಯಲಾಯಿತು. ಈಗ ಇದು ಅಲ್ಲಿನ ಅತ್ಯಂತ ಆಕರ್ಷಣೀಯ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲಿ ದಿನಾಲು ಪೂಜೆ-ಪುನಸ್ಕಾರ ನಡೆಯುತ್ತದೆ. ಆನರು ಭಕ್ತಿಯಿಂದ ಕಾಯಿ-ಕರ್ಪೂರದೊಂದಿಗೆ ಆಗಮಿಸಿ ಗೊಂಬೇಶ್ವರನ ದರ್ಶನ ಪಡೆಯುತ್ತಾರೆ. ಅಲ್ಲದೆ ಗುಹೆಯಲ್ಲಿ ನಿಂತು ಹಿಂದು ಮಹಾಸಾಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಾರೆ.

ನಮಗಂತು ಕಿನ್ಯಾ ದೇಶದ ಮೊಂಬಾಸಾ ನಗರಕ್ಕೆ ಹೋಗಿ ಗೊಂಬೇಶ್ವರ ಶಿವಲಿಂಗದ ದರ್ಶನ ಪಡೆಯುವುದು ಆಗಲಿಕ್ಕಿಲ್ಲ. ಆದರೆ ಇಲ್ಲಿಂದನೆ ವಿಡಿಯೋ ನೋಡಿ ದರ್ಶನ ಪಡೆದು ಧನ್ಯರಾಗಿ.


ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ


ಫೇಸ್‍ಬುಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ