ಮೇ 31, 2021

ನಾ ಕಂಡಂತೆ ಮಾರುತಿ ಬೊಗಲೆ-ಶಶಿಕಲಾ ಎಸ್. ಪಾಟೀಲ


ಜೂನ್ 1 ನನ್ನ ತಂದೆ, ನನ್ನ ದೇವರು ಮಾರುತಿ ಬೊಗಲೆ ಅವರ 62ನೇ ಜನ್ಮದಿನ. ಈ ಸಂದರ್ಭದಲ್ಲಿ ಒಂದು ಅಪರೂಪದ ಲೇಖನವಿದು. ನನ್ನ ತಂದೆಯ ಜೊತೆ ಕಾರ್ಯ ನಿರ್ವಹಿಸಿದ್ದ ಶ್ರೀಮತಿ ಶಶಿಕಲಾ ಎಸ್. ಪಾಟೀಲ ಅವರು ಬರೆದು ಕಳುಹಿಸಿದ್ದು. ನಮ್ಮ ತಂದೆಯವರ ಪ್ರಥಮ ಪುಣ್ಯಸ್ಮರಣೆಯ ಪ್ರಯುಕ್ತ ದಿನಾಂಕ 24-01-2021 ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಗ್ಗೆ ಗೊತ್ತಾಗಿ ಅಂದು ತಮ್ಮ ಮನದಲ್ಲಿ ಮೂಡಿದ ಭಾವನೆಗಳನ್ನು ಈ ಬರಹದಲ್ಲಿ ವ್ಯಕ್ತಪಡಿಸಿದ್ದಾರೆ.


ದಿನಾಂಕ 24-01-2021 ರಂದು ಬೆಳಿಗ್ಗೆ 9.30 ಗಂಟೆಗೆ ನನ್ನ ಮಗಳು ಮೇಘಾಳ ಫೋನ್ ರಿಂಗಣಿಸಿತು. ಕರೆ ಸ್ವೀಕರಿಸಿದಾಗ " ದಿನ ರಾಘವೇಂದ್ರ ಬೊಗಲೆ ಅವರ ತಂದೆ ಶ್ರೀ ಮಾರುತಿ ಬೊಗಲೆ ಅವರ ಪುಣ್ಯಸ್ಮರಣೋತ್ಸವಇರೋದು ಗೊತ್ತಾಯಿತು. ತಕ್ಷಣ ನಾನು 2012 ವರ್ಷಕ್ಕೆ ವಾಪಸ್ ಹೋದೆ. ದಿನಗಳ ಚಿತ್ರಗಳು ಒಂದು ಕ್ಷಣ ನನ್ನ ಮನಃ ಪಟಲದ ಮೇಲೆ ಮೂಡಿದವು. ಅವು ನನ್ನ ಬದುಕಿನಲ್ಲಿ ಎಂಥ ಅದ್ಭುತ ದಿನಗಳಾಗಿದ್ದವು ! ಎನಿಸಿತು.

ಹುಮನಾಬಾದ ತಾಲೂಕಿನ ಸೀತಾಳಗೇರಾ ವಲಯದ ಸಿಆರ್ಪಿ ಕೆಲಸಕ್ಕೆ ನಾನು ಹಾಜರಾಗಿದ್ದೆ, ಶ್ರೀ ಮಾರುತಿ ಬೊಗಲೆಯವರು ಸೀತಾಳಗೇರಾ ಮಾದರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಲವದು. ಅವರ ಶಾಂತ ಮುಖ ನನ್ನ ಕಣ್ಣ ಮುಂದೆ ಬಂದುನಮಸ್ಕಾರ ಮೇಡಂ ಬರಿಎಂದಂತೆ ಭಾಸವಾಗಿ ಕಣ್ಣು ತೇವಗೊಂಡವು.

ಹೌದಲ್ವೇ... ಮನುಷ್ಯ ಶರೀರ ನಶ್ವರ... ಆದರೆ ಅವರ ಆದರ್ಶಗಳು ಮಾತ್ರ ಶಾಶ್ವತ.

ಅವರು ಪ್ರತಿಯೊಂದು ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡುವ ರೀತಿಯೇ ಅದ್ಭುತ ! ಒಂದೊಂದು ಅಂಶ ನೆನಪಿಟ್ಟುಕೊಳ್ಳಲು ಒಂದೊಂದು ಸೂತ್ರವೇ ಹೇಳಿಕೊಡುವವರು. ಹೀಗೆ ಒಂದು ಸಲ ಅವರ ತರಗತಿ ವೀಕ್ಷಣೆಗೆ ಹೋಗಿದ್ದೆ. ಅವರು ಮಕ್ಕಳಿಗೆದಿಕ್ಕುಗಳುಪರಿಚಯ ಮಾಡಿಕೊಡುತಿದ್ದರು. ಕೆಲವೊಂದು ಪಾಠೋಪಕರಣಗಳನ್ನು ಬಳಸಿಕೊಳ್ಳುತ್ತ ಮಕ್ಕಳೊಳಗೆ ಒಂದಾಗಿದ್ದರು. ಕಪ್ಪು ಹಲಗೆ ಮೇಲೆ ಕೆಳಗಿನ ಚಿತ್ರ ಬರೆದು...

ಇದನ್ನು ಅವರು ಮೊದಲು ರಾಗವಾಗಿ ಹಾಡಿನ ರೂಪದಲ್ಲಿ ಹೇಳಿ ನಂತರ ಮಕ್ಕಳಿಂದ ಹೇಳಿಸುತ್ತಿದ್ದರು. ವಾ ಹೂ... ನೈ . ಇದು ಅವರ ಸೂತ್ರ. ನನಗೆ ಮೈ ರೋಮಾಂಚನಗೊಂಡಿತು. ಎಂಥ ಉತ್ತಮ ತಂತ್ರ ! ಮಕ್ಕಳು ಅವರ ರಾಗಕ್ಕೆ ತಾಳ ಹಾಕುತ್ತ ದಿಕ್ಕುಗಳ ರಾಗ ಮೆಲಕು ಹಾಕುತ್ತ ಸಂತೋಷವಾಗಿ ಕುಣಿಯುತ್ತಿದ್ದರು.

ಎಷ್ಟು ಜನ ಶಿಕ್ಷಕರಿದ್ದಾರೆ ಹೇಳಿ, ರೀತಿಯ ಕಲಿಕೆ ಉಂಟು ಮಾಡುವಲ್ಲಿ ಕಾಯಾ ವಾಚಾ ಮನಸಾ ದುಡಿಯುವವರು ? ದಿನ ನಾನು ಅವರಿಗೆ ಏನೂ ಹೇಳಲಿಲ್ಲ. ಬದಲಿಗೆ ನನ್ನ ಡೈರಿಯಲ್ಲಿ ಅವರ ಸೂತ್ರದ ಚಿತ್ರವನ್ನು ಬಿಡಿಸಿಕೊಂಡಿದ್ದೆ . ವಾ ಹೂ... ನೈ ... ಎಂಬ ರಾಗ ಬಾಯಲ್ಲಿ ಗುನುಗಿದ್ದೆ.

ಅಂದು ನಾನು ಶ್ರೀ ಮಾರುತಿ ಬೊಗಲೆ ಅವರಿಂದ ಒಂದು ಹೊಸ ಪಾಠ ಕಲಿತೆ. ಅಂದಿನಿಂದ ನನಗೆ ಕಠಿಣ ಎನಿಸಿದ ವಿಷಯಗಳ ಕುರಿತು ಅವರೊಂದಿಗೆ ಚರ್ಚಿಸುತ್ತಿದ್ದೆ. ಇದು ಒಂದು ಉದಾಹರಣೆ ಮಾತ್ರ ಅವರಲ್ಲಿ ಅಗಾಧ ವಿದ್ವತ್ ಶಕ್ತಿ ಇತ್ತು. ಆದರೆ ಅವರು ಯಾವತ್ತೂ ಅದನ್ನು ಪ್ರದರ್ಶನ ಮಾಡುತ್ತಿರಲಿಲ್ಲ. ಅವರ ಸಂಪರ್ಕಕ್ಕೆ ಬಂದಾಗ ಮಾತ್ರ ಅವರ ವಿದ್ವತ್ಥರ್ಶನವಾಗಿತ್ತು.

ನನಗೂ ಅಂದು ವೀಕ್ಷಣೆಗೆ ಹೋದಾಗಲೇ ಅರಿವಿಗೆ ಬಂದಿದ್ದು , ಅವರ ಪಾಠದ ಪರಿ ಅವರಿಗರಿವಿಲ್ಲದೆ ವೀಕ್ಷಿಸುತಿದ್ದೆ. ಅವರ ಪಾಠ ಮುಗಿದ ನಂತರವೇ ಅವರು ನನ್ನ ಬರುವು 'ಅರಿತದ್ದು. ಕೈಮುಗಿದುಏನು ಹೇಳಿ ಮೇಡಂ, ಎಲ್ಲಿ ತಿದ್ದಿಕೊಳ್ಳಲಿಎಂದರು ಶಾಂತಮೂರ್ತಿಯಾಗಿ. ಅದಕ್ಕೆ ನಾನುಸರ್ ನಾನು ತುಂಬಾ ಅದೃಷ್ಟವಂತೆ. ತಮ್ಮಿಂದ ಒಂದು ಹೊಸ ನೀತಿ ಕಲಿತೆ. ತಮ್ಮ ಕಲಿಕಾ ತಾಂತ್ರಿಕತೆ ನನ್ನನ್ನು ಮಂತ್ರಮುಗ್ಧಳನ್ನಾಗಿಸಿತು. ಧನ್ಯಳಾದೆಎಂದೆ. ಇದು ಶ್ರೀ ಮಾರುತಿ ಬೊಗಲೆ ಅವರ ಬೋಧನೆಯ ಒಂದು ಪಕ್ಷಿನೋಟ.

ವಲಯಅಂದ ಮೇಲೆ ವಾರದಲ್ಲಿ ಒಂದಾದರೂ ಕಾರ್ಯಕ್ರಮ ನಡಿಯಲೇ ಬೇಕು. “ಸರ್ವಶಿಕ್ಷಣ ಅಭಿಯಾನಶೈಕ್ಷಣಿಕ ಕಾರ್ಯಕ್ರಮಗಳ ಮೂಟೆಯ ಹೊತ್ತು ತಂದಿತು. ಶಿಕ್ಷಕ ವೃಂದಕ್ಕೆ ದಿನಗಳಲ್ಲಿ ನಿದ್ರಿಸುವಂತಿರಲಿಲ್ಲ. ಅಷ್ಟೊಂದು ಕೆಲಸ.

ಕಾರ್ಯಕ್ರಮ ಎಂದಾಕ್ಷಣ ಕಾರ್ಯಕ್ರಮದ ರೂಪರೇಷೆ ತಯಾರಿಸುವ ಶ್ರೀ ಮಡೆಪ್ಪ ಕುಂಬಾರ, ವೇದಿಕೆ ನಿರ್ಮಾಣ ಹಾಗೂ ನಿರೂಪಣೆ ಮಾಡುವ ಶ್ರೀ ಸುಭಾಷ ಗಂಗಾ, ಶ್ರೀ ಮಲ್ಲಿಕಾರ್ಜುನ ಶಕ್ಕರಗಂಜ  ಬಂದವರಿಗೆ ಊಟದ ವ್ಯವಸ್ಥೆಗೆ ಅಣಿಗೊಳಿಸುವ ಶ್ರೀ ಮಲ್ಲಿಕಾರ್ಜುನ ಹೆಜ್ಜೆ, ಬೋಧನೆಗೆ ಬೇಕಾಗುವ ಡ್ರಾಯಿಂಗ್ ಶೀಟ್ - ಚಾರ್ಟ್ಗಳನ್ನೆಲ್ಲ ತಯ್ಯಾರಿಸುವ ಶ್ರೀ ರಾಮನಗೌಡ್ರು, ಮಂಜುನಾಥ, ಯೂಸೂಫ್, ಸುದರ್ಶನ್, ಶೇಖರ್, ರಾಜೇಂದ್ರ, ಅಲ್ಲದೇ ವಲಯದಲ್ಲಿ ಏನು ನಡೆದಿದೆ ಎಂಬುದನ್ನು ಜನತೆಗೆ ಪರಿಚಯಿಸುವ 'ವಾರ್ತಾ ಮತ್ತು ಪ್ರಚಾರ ಇಲಾಖೆ' ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕುಪೇಂದ್ರ ಶಾಸ್ತ್ರೀ.

ಇದರೊಂದಿಗೆ ಕಾರ್ಯಕ್ರಮದ ದಿನ ಕಪ್ಪು ಹಲಗೆಯ ಮೇಲೆ ತಮ್ಮ ಮುದ್ದಾದ ದುಂಡಾದ ಅಕ್ಷರಗಳಿಂದ ಬರೆದ...

ಶಿಕ್ಷಕರ ಅಂತರ್ ಸಮಾಲೋಚನಾ ಸಭೆ

ವಲಯದ ಅರ್ಧ ಶಿಕ್ಷಕರ ಅನುಭವ ಹಂಚಿಕೆ ಕಾರ್ಯಾಗಾರ

ಸರ್ವರಿಗೂ ಆದರದ ಸ್ವಾಗತ

ಎಂಬ ಶ್ರೀ ಮಾರುತಿ ಬೊಗಲೆ ಅವರ ಬರವಣಿಗೆ ಸಾಲುಗಳು ಎಲ್ಲಾ ಗುರು ವೃಂದಕ್ಕೆ ಕೈಬೀಸಿ ಕರೆಯುತ್ತಿತ್ತು. ಇದು ಅವರ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತಿತ್ತು.

ಎಲ್ಲವೂ ಒಂದು ಕ್ಷಣದಲ್ಲಿ ನನ್ನ ಮನದ ಪರದೆಯ ಮೇಲೆ ತೇಲಿ ಹೋಯಿತು. ಎಂಥಾ ಕ್ರಿಯಾಶೀಲ ಶಿಕ್ಷಕರು ! ಎಷ್ಟೊಂದು ಆತ್ಮೀಯತೆ !! ಹೃದಯ ಧನ್ಯತೆಯಿಂದ ಬಾಗಿತು. ಎಲ್ಲಾ ಶಿಕ್ಷಕರು ಮಾರುತಿ ಸರ್ ತರಹ ಆದರೆ ಎಷ್ಟೊಂದು ಚೆನ್ನ ! ನಮಗೆ ಮಾದರಿ. ಅವರ ಬದುಕಿನ ಒಂದೊಂದು ಹೆಜ್ಜೆಯೂ ನಮಗೆ ದಾರಿದೀಪ, ಮಾರ್ಗದರ್ಶಿ.

ಎಷ್ಟೋ ಸಲ ಬಸ್ಸುಗಳು ಬರದೆ ಹೋದಾಗ ಸುಮಾರು 10 ಕಿ.ಮೀ. ದೂರದ ಸೀತಾಳಗೇರಾಕ್ಕೆ ನಡೆದುಕೊಂಡು ಹೋಗಿಯೇ ಸಮಯ ಪಾಲನೆ ಮಾಡಿದ ಮಹಾನ್ ಶಿಕ್ಷಕರು ಶ್ರೀ ಮಾರುತಿ ಬೊಗಲೆಯವರು. 2013-14 ರಲ್ಲಿವಲಯದ ಕ್ರೀಯಾಶೀಲ ಶಿಕ್ಷಕರುಎಂಬ ಪ್ರಶಸ್ತಿಗೆ ಭಾಜನರಾದವರು ಕೂಡಾ.

ತನ್ನ ಬದುಕಿನ ಜಂಜಾಟ ಏನೇ ಇದ್ದರೂ ಅದನ್ನು ತನ್ನ ಸರಕಾರಿ ಕೆಲಸದಲ್ಲಿ ತಂದವರೇ ಅಲ್ಲ. ಬದುಕು ಭಗವಂತ ನಮಗಿತ್ತ ಅಮೂಲ್ಯ ಕಾಣಿಕೆ. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದು ಅತ್ಯಂತ ಮುಖ್ಯ. ನಾವು ಎಷ್ಟು ದಿನ ಬದುಕಿದೇವು ಎನ್ನುವುದಕ್ಕಿಂತ 'ಹೇಗೆ' ಬದುಕಿದೇವು ಎಂಬುದು ಅತ್ಯಂತ ಚಿಂತನಾಶೀಲ ವಿಷಯ.

ಬಡತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದು ಅತ್ಯಂತ ಪ್ರಾಮಾಣಿಕವಾಗಿ ಬದುಕಿಏಜ್ ವಿಥ್ ಮೆರಿಟ್ನಲ್ಲಿ ಶಿಕ್ಷಕ ವೃತ್ತಿಗೆ ಸೇರಿಕೊಂಡು ತಮಗೆ ಸಿಕ್ಕ ಅಲ್ಪ ಸಮಯದಲ್ಲಿಯೇ ಶರೀರ ಅಳಿದರೂ ನೆನಪು ಶಾಶ್ವತವಾಗಿ ಉಳಿಯುವಂಥಹ ಕೆಲಸವನ್ನು ಮಾಡಿದವರು ಶ್ರೀ ಮಾರುತಿ ಬೊಗಲೆಯವರು.

ಗುರು' ಯಾವತ್ತೂ ಮಾಜಿಯಾಗುವುದಿಲ್ಲ . ‘ಗುರುಸಾಯುವುದೂ ಇಲ್ಲ. ಆತ ನಿತ್ಯ ನೂತನ. ಸದಾ ಚೇತನ.

ನಾನು ಕಂಡಂತೆ ಶ್ರೀ ಮಾರುತಿ ಬೊಗಲೆಯವರು ಒಬ್ಬ ಆದರ್ಶ ಹಾಗು ತತ್ವಜ್ಞಾನಿ ಶಿಕ್ಷಕ, ಸದಾ ತಾತ್ವಿಕವಾಗಿ ಯೋಚಿಸುವವರು. ಎಂದೂ 'ಸಾವು' ಕಾಣದ ನಿತ್ಯ ಚೈತನ್ಯ ಶಕ್ತಿ ಎಂದೇ ಭಾವಿಸಿದ್ದೇನೆ. ಏಕೆಂದರೇ ರಾಘವೇಂದ್ರ ಬೊಗಲೆಯಂಥಹ ಮಕ್ಕಳನ್ನು ಸಮಾಜಕ್ಕೆ ಕಾಣಿಕೆಯಾಗಿ ಕೊಟ್ಟದ್ದು ಅವರ ವೃತ್ತಿ ಬದುಕಿನ ಸಾರ್ಥಕತೆ ಎಂದೇ ತಿಳಿದಿದ್ದೇನೆ. ಮಕ್ಕಳು ಸೇರಿ ತಂದೆಯ ನೆನಪಿಗೋಸ್ಕರ ಆಯೋಜಿಸುತ್ತಿರುವ ಇಂಥ ಕಾರ್ಯಕ್ರಮ ಅವರ ನಿಸ್ವಾರ್ಥ ಸೇವೆಗೆ ಹಿಡಿದ ಕನ್ನಡಿ. ಚೈತನ್ಯದ ಹೊಳಪಿನ ಮಹಾ ಬೆಳಕಿನೊಳಗೆ ಇಂಥ ಚಟುವಟಿಕೆಗಳು ಸದಾ ನಡೆಯುತ್ತಿರಲಿ . ಶ್ರೀ ಮಾರುತಿ ಬೊಗಲೆಯವರ ಆತ್ಮಜ್ಯೋತಿ ಸದಾ ಬೆಳಗುತ್ತಿರಲಿ ಎಂಬ ಪದ ಪುಷ್ಪಗಳನ್ನು ಅವರ ಅಡಿದಾವರೆಗೆ ಅರ್ಪಿಸಬಯಸುತ್ತೇನೆ. ಓಂ ಶಾಂತಿ



ಶ್ರೀಮತಿ ಶಶಿಕಲಾ ಎಸ್ . ಪಾಟೀಲ

ಬಿಆರ್ಪಿ ಹುಮನಾಬಾದ,

ಸಮೂಹ ಸಂಪನ್ಮೂಲ ವ್ಯಕ್ತಿಗಳು,

ಸೀತಾಳಗೇರಾ, ತಾ. ಹುಮನಾಬಾದ ಜಿ. ಬೀದರ