ಸೆಪ್ಟೆಂಬರ್ 22, 2020

ಇಂದಿನ ಚಲನಚಿತ್ರಗಳು ಭಾರತಿಯ ಸಂಸ್ಕೃತಿಯ ಮೇಲೆ ವಿಕೃತ ಪರಿಣಾಮ ಬೀರುತ್ತಿವೆಯೆ ?

ಹೌದು ಬೀರುತ್ತಿವೆ ಎಂದು ಬೇಸರದಿಂದಲೇ ಹೇಳಬಹುದೇನೋ? ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಒಂದು ಕಡೆಯಾದರೆ; ಅಂಡರ್ ವರ್ಲ್ಡ ಕಥಾವಸ್ತುವಿನ ಚಲನಚಿತ್ರಗಳಲ್ಲಿ ಡಾನ್ ಗಳನ್ನು ವೈಭವೀಕರಿಸುವುದು, ಪುರಾಣ ಪ್ರಸಿದ್ಧ ಮತ್ತು ಇತಿಹಾಸದ ನೆಗೆಟಿವ್ ಪಾತ್ರಗಳನ್ನೆ ಕೇಂದ್ರವಾಗಿಟ್ಟುಕೊಂಡು ಕೆಟ್ಟತನವನ್ನೆ ವೈಭವೀಕರಿಸಿ ತೋರಿಸುವುದರಿಂದ ಪ್ರೇಕ್ಷಕರ ಮೇಲೆ ಆ ಪಾತ್ರಗಳು ಪರಿಣಾಮ ಬೀರದೆ ಇರಲಾರವು.

ಅತ್ಯುತ್ತಮ ಕಥಾವಸ್ತುವುಳ್ಳ ಚಲನಚಿತ್ರಗಳು ಬಂದರು ಇಂಥ ಚಿತ್ರಗಳೇ ಜಯಭೇರಿ ಬಾರಿಸಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಕಮರ್ಷಿಯಲ್ ಮತ್ತು ಮಾಸ್ ಸಿನಿಮಾಗಳು ಎಂಬ ಪದ್ದತಿಗಳಲ್ಲಿ ಪ್ರೇಕ್ಷಕ ಸುತ್ತುವರೆದುಕೊಂಡಿದ್ದಾನೆ.

ಉತ್ತಮ ಕಥಾವಸ್ತುವುಳ್ಳ, ಈ ನೆಲದ ಈ ಸಂಸ್ಕೃತಿ  ಬಿಂಬಿಸುವ ಸಿನಿಮಾ ಎಂದಾಗ ಅದಕ್ಕೆ ಕಲಾತ್ಮಕ ಚಿತ್ರ ಎನ್ನುವ ಹಣೆಪಟ್ಟಿ ಅಂಟಿಸಿ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಹೀಗಾಗಿ ಇಂಥ ಅತ್ಯುತ್ತಮ ಕಥಾಹಂದರದ, ಈ ಸಂಸ್ಕೃತಿಯ ಚಲನಚಿತ್ರಗಳು ಎಲ್ಲಾ ಪ್ರೇಕ್ಷಕರಿಗೆ ಮುಟ್ಟದೆ, ತನ್ನ ಉದ್ದೇಶ ಸಾಕಾರಗೊಳಿಸದೆ ಸೋಲೊಪ್ಪಿಕೋಳ್ಳುತ್ತದೆ.

ಆದರೆ ಕಮರ್ಷಿಯಲ್ ಮತ್ತು ಮಾಸ್ ಚಲನಚಿತ್ರ ಎನ್ನುವ ಹಣೆಪಟ್ಟಿಯಲ್ಲಿ ಬರುವ ನೆಗೆಟಿವ್ ಕಥೆ ಇರುವ ಚಿತ್ರಗಳೇ ಜಯಭೇರಿ ಬಾರಿಸುತ್ತವೆ. ನಿಜಕ್ಕೂ ಇದು ವಿಪರ್ಯಾಸವೆ ಸರಿ. ಹೀಗಾದಾಗ ಅಂಥ ಚಲನಚಿತ್ರಗಳು ನಮ್ಮ ಬಾರತೀಯ ಸಂಸ್ಕೃತಿಯ ಮೇಲೆ ವಿಕೃತ ಪರಿಣಾಮ ಬೀರದೆ ಇರಲು ಸಾಧ್ಯವೇ ? 

ಈ ನಿಟ್ಟಿನಲ್ಲಿ ನಮ್ಮ ಚಿತ್ರೋದ್ಯಮ, ನಾಯಕ ನಟರು ಮತ್ತು ಪ್ರೇಕ್ಷಕರು ಯೋಚಿಸುವ ಅನಿವಾರ್ಯತೆ ಇದೆ. ನಾಯಕನನ್ನೆ ಆರಾಧಿಸುವ ಪ್ರೇಕ್ಷಕನನ್ನು ನಾಯಕ ಅಥವಾ ಖಳನಾಯಕನನ್ನಾಗಿ ರೂಪಿಸಬಲ್ಲ ಶಕ್ತಿ ಈ ಚಲನಚಿತ್ರಗಳಿಗಿದೆ. ಬದಲಾವಣೆ ಬರಬೇಕಷ್ಟೆ.

ಈ ಲೇಖನ ಹಿಂದಿ ಮ್ಯಾಗಜೀನ್ "ಮೂವಿ ಮೂವ್ಮೆಂಟ್" ಸೆಪ್ಟೆಂಬರ್ ಆವೃತಿಯಲ್ಲಿ ಪ್ರಕಟಗೊಂಡಿದ್ದು, ಅದನ್ನು ಆತ್ಮೀಯ ಗೆಳೆಯ ಗೋವಿಂದರಾವ್ ಎನ್. ರಾಠೋರ್ ಹಿಂದಿಗೆ ತುರ್ಜುಮೆಗೊಳಿಸಿದ್ದಾರೆ.


ಹಿಂದಿ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ

ಸೆಪ್ಟೆಂಬರ್ 19, 2020

ಬಿಸಿಲು ನಗರಿಯ ಬಿರುಸು ಪ್ರತಿಭೆ "ಸಿಂಗರ್" ಬಸವ

         2020ನೇ ವರ್ಷ ಪ್ರಾರಂಭವಾಗುತ್ತಲೆ ಆಪತ್ತು ಆಘಾತಗಳು ಜೊತೆಯಲ್ಲಿಯೇ ಬಂದಂತಿದೆ. ವರ್ಷದ ಅರಂಭವೇ ಕೆಟ್ಟದಾಗಿತ್ತು. ಕೊರೋನಾ ಎಂಬ ಮಹಾಮಾರಿಯನ್ನು ಹೊತ್ತುಕೊಂಡು ಬಂತು. ಒಂಭತ್ತನೇ ತಿಂಗಳಲ್ಲುಅದರ ಆರ್ಭಟ ಹೆಚ್ಚೆ ಇದೆಇಂಥಹ ಆತಂಕದ ಧ್ಯೆ ಪ್ರತಿಭೆಗಳ ಕ್ರಿಯಾಶೀಲ ಚಟುವಟಿಕೆಗೆನೂ ಅಡ್ಡಿಯಾಗಿಲ್ಲ. ಕಲಬುರಗಿಯ ಯುವ ಗಾಯಕ "ಸಿಂಗರ್" ಬಸವ ತನ್ನ ಪ್ರಯತ್ನಶೀಲತೆಯ ಮೂಲಕ ಬೆಳಕಿಗೆ ಬರುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಬಾರಿಯ ಐಪಿಎಲ್ ಟೂರ್ನಿಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

        ತನ್ನ ಗೆಳೆಯರೊಂದಿಗೆ ಸೇರಿ ಕರ್ನಾಟಕದ ಐಪಿಎಲ್ ತಂಡವನ್ನು ಬೆಂಬಲಿಸಿ ಹುರಿದುಂಬಿಸುವ ನಿಟ್ಟಿನಲ್ಲಿ ಒಂದು ಲವಲವಿಕೆಯ ವಿಡಿಯೋ ಸಾಂಗನ್ನು ಹೊರತಂದಿದ್ದಾರೆ. ಅದುವೆ "ಹೆಮ್ಮೆಯ ಆರ್ಸಿಬಿಯನ್". ಇದರಲ್ಲಿ ಸೊಗಸಾಗಿ ಹಾಡಿ ಕುಣಿದು ಕುಪ್ಪಳಿಸುತ್ತಾ ಆರ್ಸಿಬಿ ತಂಡಕ್ಕೆ ಜಯಕಾರ ಹಾಕಿದ್ದಾರೆ. ಸಲ ಕಪ್ ನಮ್ದೆ‌ ! ಎಂದು ಕೂಗಿ ಹೇಳಿದ್ದಾರೆಇದು ವರೆಗೂ ಐಪಿಎಲ್ ಕಿರೀಟ ಎತ್ತಿ ಹಿಡಿಯಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಾರಿಯಾದರು ಕಪ್ ಎತ್ತಿ ಪಡೆಯುತ್ತಾರಾ ಎಂದು ಕಾದು ನೋಡಬೇಕು.

"ಹೆಮ್ಮೆಯ ಆರ್ಸಿಬಿಯನ್" ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

        ಆದರೆ ಸಿಂಗರ್ ಬಸವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವ ನಿಟ್ಟಿನಲ್ಲಿ ತಮ್ಮ ಪ್ರತಿಭೆಯ ಅನಾವರಣವಂತೂ ಚೆನ್ನಾಗಿಯೇ ಮಾಡಲು ಪ್ರಯತ್ನಿಸಿದ್ದಾರೆ. ಚಿಕ್ಕಂದಿನಲ್ಲೆ ಹಾಡುವ ಗೀಳು ಅಂಟಿಸಿಕೊಂಡು ಬೆಳೆದವರು, ಮುಂದೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಓದು ನಂತರ ವೃತ್ತಿ ಎಲ್ಲವನ್ನು ಸರಿದೂಗಿಸಿಕೊಂಡು ಬಂದವರು.


        ತನ್ನತಾಯಿಯ ಪ್ರೋತ್ಸಾಹ, ಗೆಳೆಯರ ಬೆಂಬಲದಿಂದ ಎನನ್ನಾದರು ಹೊಸದನ್ನು ಮಾಡಲು ಬಯಸಿ, ವಿಡಿಯೋ ಸಾಂಗನ್ನು ಹೊರತಂದಿದ್ದಾರೆ. ಉತ್ತಮ ಪ್ರತಿಕ್ರಿಯೆ ಎಲ್ಲರಿಂದ ಬರುತ್ತಿದೆ. ಇದುವೇ ಇಂತಹ ಬೆಳೆಯುವ ಪ್ರತಿಭೆಗಳಗೆ ಶ್ರೀರಕ್ಷೆ. ನೀವೂ ವಿಡಿಯೋ ಸಾಂಗನ್ನು ನೋಡಿ ಬೆಂಬಲಿಸಿ. ಹಾಗೆಯೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.

ಸೆಪ್ಟೆಂಬರ್ 10, 2020

ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಎಂಥದ್ದು ಗೊತ್ತೆ !- ಪಂಡಿತ ಭೀಮಸೇನ ಜೋಶಿ


“ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ

ಭಜತಾಂ ಕಲ್ಪವೃಕ್ಷಾಯನಮತಾಂ ಕಾಮಧೇನುವೆ...”

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಕೊಂಡಾಡದ ನಾಲಿಗೆಯೇಇಲ್ಲ. ಅವರ ಸನ್ನಿಧಾನದಲ್ಲಿ ಸಕಲವೆಲ್ಲವನ್ನು ಮರೆತು ತನ್ಮಯನಾಗಿಬಿಡುತ್ತಾನೆ. ಬೇಡಿ ಬಂದವರಿಗೆ ಹರಿಸಿನೊಂದುಬಂದವರಿಗೆ ಸಂತೈಸಿ ಕಲಿಯುಗದಲ್ಲಿ ಎಲ್ಲರ ಪಾಲಿನ  ಕಾಮಧೇನು ಕಲ್ಪವೃಕ್ಷವಾಗಿದ್ದಾರೆ.


ಭಕ್ತರನ್ನು
ಉದ್ಧರಿಸಿ ಪಾವನಗೊಳಿಸಿದ ಮಂತ್ರಾಲಯದ ಮಹಾಮಹೀಮ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳು. ನೆನದವರ ಮನದಲ್ಲಿ, ಕರೆದವರ ಬಳಿಯಲ್ಲಿ ಓಡೋಡಿ ಬರುತ್ತಾರೆ. ಅವರ ಸಾಮಿಪ್ಯದ ಅನುಭೂತಿಯಾದವರು, ಅವರ ಆಶೀರ್ವಾದದಿಂದ ಕಷ್ಟ ಕಳೆದುಕೊಂಡವರು ಹೇಳಿರುವ ಅದೆಷ್ಟೋ ಕಥೆಗಳನ್ನು ಕೇಳಿದ್ದೀವಿ. ಅದರ ಅನುಭವ ಪಡೆದವರು ಇದ್ದೀವಿ.

ಪ್ರತಿಯೊಬ್ಬರು ಗುರು ರಾಯರ ಸನ್ನಿಧಾನಕ್ಕೆ ಒಂದಿಲ್ಲ ಒಂದು ಬಾರಿ ಬಂದೆ ಬರುತ್ತಾರೆ. ಅವರೆಷ್ಟೆ ದೊಡ್ಡ ವ್ಯಕ್ತಿಯಾಗಿರಲಿ, ಚಿಕ್ಕ ವ್ಯಕ್ತಿಯೇ ಆಗಿರಲಿ. ಎಲ್ಲರನ್ನು ಸಮನಾಗಿ ನೋಡಿ ಅವರ ಮನೊಕಾಮನೆಗಳನ್ನು ಗುರು ರಾಘವೇಂದ್ರರು ಈಡೇರಿಸಿದ್ದಾರೆ.


ತುಂಗಾತೀರದಿ ನಿಂತ ಸುಯತಿವರನಾರೆ ಕೇಳಮ್ಮಯ್ಯ ಎನ್ನುವ ಅಭಿನವ ಜನಾರ್ಧನ ವಿಠಲರ ಕೀರ್ತನೆಯನ್ನು ಅತ್ಯಮೋಘವಾಗಿ ಹಾಡಿದ ಮಹಾನ್ ಗಾಯಕ ಪಂಡಿತ ಭೀಮಸೇನ ಜೋಶಿ ಅವರು ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಅಪ್ಪಟ ಭಕ್ತರುರಾಯರ ಕೃಪಾಕಟಾಕ್ಷಕ್ಕೆ ಒಳಗಾದ ಮೇಲೆಯೇ ಸಂಗೀತ ಲೋಕದಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳುವಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ.

ಪಂಡಿತ ಭೀಮಸೇನ ಜೋಶಿ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಕುರಿತು ಮಾತನಾಡಿರುವ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಪಂಡಿತ ಭೀಮಸೇನ ಜೋಶಿ ಅವರ ಜೀವನದಲ್ಲಿ ಒಂದು ಸಮಯ ಅವರು ತುಂಬಾ ಕಷ್ಟ ನೋಡಬೇಕಾಯಿತು. ಅವರು ಅಂದು ಕೊಂಡದ್ದು ಯಾವುದೂ ಸುಸೂತ್ರವಾಗಿ ನಡೆಯುತ್ತಿರಲಿಲ್ಲ. ಅಂಥ ವಿಷಮ ಪರಿಸ್ಥಿತಿಯಲ್ಲಿದ್ದಾಗ ಪಂಡಿತರು ಗುರು ರಾಯರನ್ನು ನೆನೆಸಿಕೊಳ್ಳುತ್ತಾರೆ. ತಕ್ಷಣವೆ ಅವರ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಅವರ ದರ್ಶನಾಶೀರ್ವಾದ ಪಡೆಯುತ್ತಾರೆ. ರಾಯರ ಮಡಿಲಲ್ಲಿ ತುಂಗಾ ತೀರದಲ್ಲಿ ತಮ್ಮ ಸಂಗೀತ ರಸಧಾರೆಯ ಸೇವೆಗೈಯುತ್ತಾರೆ. ರಾಯರ ಕೃಪೆ ಪಂಡಿತರಿಗಾಗುತ್ತದೆ.

ಅದಾದ ಮೇಲೆ ಪಂಡಿತ ಭೀಮಸೇನ ಜೋಶಿ ಅವರ ಜೀವನದಲ್ಲಿ ಬಂದೊದಗಿದ ಎಲ್ಲಾ ಕಷ್ಟಗಳು ವಿಮುಖವಾಗುತ್ತವೆ. ಮರಳಿ ವೈಭವದ ದಿನಗಳÀನ್ನು ನೋಡುತ್ತಾರೆ.

ಅವರು ಆಗ ರಾಯರ ಸನ್ನಿಧಾನದಲ್ಲಿದ್ದಾಗ ನಡೆದ ಒಂದು ಘಟನೆ ತುಂಬಾ ಸ್ವಾರಸ್ಯವಾಗಿದೆ. ಪಂಡಿತ ಭೀಮಸೇನ ಜೋಶಿ ಅವರು ತುಂಗಾ ತೀರದಲ್ಲಿ ಸಂಗೀತಾರಾಧನೆ ಮಾಡುವ ಸಂದರ್ಭದಲ್ಲಿ ಎಲ್ಲಿಂದಲೋ ಒಂದು ಶ್ವಾನ ಬಂದು ಇವರ ಸಂಗೀತವನ್ನು ತದೇಕ ಚಿತ್ತದಿಂದ ಆಸ್ವಾದಿಸುತಿತ್ತು. ಸಂಗೀತ ಮುಗಿದ ಕೂಡಲೆ ಹೊರಟು ಹೋಗುತಿತ್ತು. ಆಮೇಲೆ ಹುಡುಕಿದರೆ ಶ್ವಾನ ಎಲ್ಲಿಯು ಕಾಣುತ್ತಿರಲಿಲ್ಲ. ಇದು ಪಂಡಿತರು ಅಲ್ಲಿ ಸಂಗೀತ ತಾಲಿಮು ಮಾಡಿದಷ್ಟು ದಿನ ಪುನರಾವರ್ತನೆ ಆಗುತಿತ್ತಂತೆ.

ಇದು ಗುರು ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿಯ ಶಕ್ತಿಯೋ ಅಥವಾ ಸ್ವತಃ ರಾಯರೇ ಪಂಡಿತ ಭೀಮಸೇನ ಜೋಶಿ ಅವರಿಗೆ ದರ್ಶನ ನೀಡಲು ಆಗಮಿಸುತಿದ್ದ ರೀತಿಯೋ ಗೊತ್ತಿಲ್ಲ. ಆದರೆ ಭಕ್ತಿಯಿಂದ ಗುರು ರಾಯರನ್ನು ನೆನದರೆ ಅವರ ಅಭಯವಂತು ನಮ್ಮ ಮೇಲೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ.

ಸೆಪ್ಟೆಂಬರ್ 03, 2020

ದಿನದಲ್ಲಿ ಮೂರು ಬಣ್ಣ ತಾಳುವ ಧೋಲ್ಪುರ ಕಣಿವೆಯ ಚಮತ್ಕಾರಿ ಶಿವಲಿಂಗ


ಇತ್ತೀಚೆಗೆ ಮಹಾರಾಷ್ಟ್ರದ ಅಪೂರ್ಣ ಶಿವಲಿಂಗದ ಸ್ವಾರಸ್ಯ ಓದಿದ್ದಿವಿ. ಇಂಥ ಅದೆಷ್ಟೋ ಸ್ವಾರಸ್ಯಕರ ಸಂಗತಿಗಳು ನಮ್ಮ ದೇಶದ ತುಂಬಾ ಹುಡುಕಿದಷ್ಟು, ತಿಳಿಯಲು ಹೊರಟಷ್ಟು ಸಿಗುತ್ತಲೆ ಹೋಗುತ್ತವೆ. ಅಂಥದ್ದೆ ಇನ್ನೊಂದು ಸ್ವಾರಸ್ಯಕರ ಮತ್ತು ರಹಸ್ಯಮಯ ಶಿವಲಿಂಗದ ಕಥೆಯೊಂದನ್ನು ಇಂದು ಹೇಳುತ್ತೇನೆ.

ರಾಜಸ್ಥಾನದ ಧೋಲ್ಪುರದಲ್ಲಿ ಶಿವಲಿಂಗ ದೇವಾಲಯವಿದ್ದು ಅಲ್ಲಿನ ಶಿವಲಿಂಗದ ಹಿನ್ನೆಲೆ ನಿಜಕ್ಕೂ ಸ್ವಾರಸ್ಯಕರವಾಗಿದೆ. ಸ್ವಾರಸ್ಯಕ್ಕೆ ಕಾರಣವೇನು ಎಂಬುದು ಇದುವರೆಗೆ ರಹಸ್ಯಮಯವಾಗಿಯೇ ಇದೆ. ಇಲ್ಲಿನ ಶಿವಲಿಂಗವು ದಿನದ ಮೂರು ಗಳಿಗೆಯಲ್ಲಿ 3 ಬಣ್ಣಗಳನ್ನು ಬದಲಾಯಿಸುತ್ತದೆ.


ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಅದೆಷ್ಟೋ ರಹಸ್ಯಮಯ ಶಿವ ದೇವಾಲಯಗಳಿದ್ದರೂ ಇಲ್ಲಿರುವ ಶಿವನ ರಹಸ್ಯ ಅಪರೂಪದ್ದಾಗಿದೆ. ದಿನದ ಮೂರು ಗಳಿಗೆಗೊಂದರಂತೆÉ ಮೂರು ರೀತಿಯಲ್ಲಿ ತನ್ನ ಮೈಬಣ್ಣವನ್ನು ಇಲ್ಲಿನ ಶಿವಲಿಂಗವು ಬದಲಾಯಿಸುವ ಕಥೆ ಅಪರೂಪದಲ್ಲೆ ತೀರಾ ಅಪರೂಪ ಎನ್ನಬಹುದು.

ಶಿವಲಿಂಗದ ಬಣ್ಣವು ಬೆಳಗ್ಗಿನ ಆರರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಲಘು ಕೆಂಪು ಬಣ್ಣ, ಮೂರು ಗಂಟೆಯಿಂದ ಅದರ ಬಣ್ಣ ಕೇಸರಿ ಆಗಲು ಪ್ರಾರಂಭವಾಗಿ ನಂತರ ರಾತ್ರಿಯಲ್ಲಿ ಅದೇ ಶಿವಲಿಂಗ ತಿಳಿ ಕಪ್ಪು ಬಣ್ಣಕ್ಕೆ ಬದಲಾಗುತ್ತದೆಯಂತೆ.

ಇಂಥ ರಹಸ್ಯಮಯ ಶಿವಲಿಂಗವನ್ನು ಇಲ್ಲಿನ ಸ್ಥಳೀಯರುಅಚಲೇಶ್ವರ ಮಹಾದೇವ ದೇವಾಲಯವೆಂದು ಕರೆಯುತ್ತಾರೆ. ಇದು ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಚಂಬಲ್ ಕಣಿವೆಯ ತೀರದಲ್ಲಿದೆ. ಧೋಲ್ಪುರ ಜಿಲ್ಲೆಯ ಕೊನೆಯ ಗಡಿಯಲ್ಲಿರುವ ಚಂಬಲ್ ಕಣಿವೆಗೆ ಸ್ವಲ್ಪ ಮೊದಲು ನಿರ್ಜನ ಮಾರ್ಗವೊಂದರ ಕಂದಕಗಳಲ್ಲಿ ಇಳಿದು ಇಲ್ಲಿಂದ ಒಂದೂವರೆ ಕಿಲೋಮೀಟರ್ ದೂರ ಸಾಗಿದರೆ ಅಚಲೇಶ್ವರ ಮಹಾದೇವ ದೇವಾಲಯದ ದರ್ಶನವಾಗುತ್ತದೆ.

ಪ್ರದೇಶ ಮರಭೂಮಿಯಿಂದ ಕೂಡಿದ್ದು, ಕಣಿವೆ ಪ್ರದೇಶವಾಗಿದ್ದರಿಂದ ದಾರಿ ತುಂಬಾ ಕಠಿಣ. ಹೀಗಾಗಿ ಇಲ್ಲಿಗೆ ಬರುವವರ ಸಂಖ್ಯೆ ತೀರಾ ವಿರಳ. ಆದರೂ ದೇವಸ್ಥಾನದ ವಿಶೇಷತೆ ತಿಳಿದವರು ಆಸಕ್ತಿಯಿಂದ ಬರುತ್ತಾರೆ. ಇಲ್ಲಿನ ರಹಸ್ಯದ ಚಮತ್ಕಾರತೆಯ ಅನುಭವವನ್ನು ಪಡೆದುಕೊಳ್ಳುತ್ತಾರೆ.

ಹಿನ್ನೆಲೆ: ದೇವಾಲಯವನ್ನು 1875 ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅದಕ್ಕಿಂತಲೂ ನೂರಾರು ವರ್ಷಗಳಷ್ಟು ಹಳೆಯದು ಎಂದು ಕೆಲವರು ನಂಬಿದ್ದರೂ, ಸ್ಥಳೀಯ ಜನರ ಪ್ರಕಾರ ಇದು ಸುಮಾರು 1875 ಸುಮಾರಿನಲ್ಲಿ ನಿರ್ಮಾಣವಾಗಿರಬಹುದು ಎಂದು ಹೇಳಲಾಗುತ್ತದೆ.

ದೇವಾಲಯದ ಸ್ಥಾಪನೆಯ ಬಗ್ಗೆ ಅಲ್ಲಿ ಒಂದು ಜನಪ್ರಿಯ ಕಥೆ ಇದೆ. ಅದರ ಪ್ರಕಾರ ಸಮಯದಲ್ಲಿ ಕೆಲವು ಋಷಿಮುನಿಗಳು ಶಿವಲಿಂಗವನ್ನು ಚಂಬಲ್ ಕಣಿವೆಯಿಂದ ಗ್ವಾಲಿಯರ್ಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ದಾರಿಯಲ್ಲಿ ಸಾಗುತ್ತ ಸ್ಥಳಕ್ಕೆ ಬಂದಾಗ ರಾತ್ರಿಯಾಗುತ್ತದೆ. ಆಗ ಸ್ಥಳದಲ್ಲಿ ಎರಡು ಹುಣಸೆ ಮರಗಳು ಮತ್ತು ಬಾವಿಯನ್ನು ನೋಡಿದ ಸಾಧುಗಳು ಇಲ್ಲಿಯೇ ವಿಶ್ರಾಂತಿ ಪಡೆಯಲು ನಿರ್ಧರಿಸಿದರು.

ಮರುದಿನ ಬೆಳಿಗ್ಗೆ ಸಾಧುಗಳು ಗ್ವಾಲಿಯರ್ಗೆ ಹೋಗಲು ಸಿದ್ಧರಾಗುತ್ತಾರೆ. ಆದರೆ ಶಿವಲಿಂಗವನ್ನು ಎತ್ತಿಕೊಳ್ಳಲು ಹೋದಾಗ ಅದು ಇಟ್ಟ ಸ್ಥಳದಿಂದ ಸ್ವಲ್ಪವು ಕದಲಲಿಲ್ಲ. ಇದರಿಂದ ವಿಚಲಿತರಾದ ಸಾಧುಗಳು ಸ್ಥಳೀಯ ಜನರನ್ನು ಕರೆದು ಅಲ್ಲಿಂದ ಶಿವಲಿಂಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ಅವರೆಲ್ಲರ ಪ್ರಯತ್ನವೂ ವ್ಯರ್ಥವಾಯಿತು. ಆಗ ಸಾಧುಗಳು ಸ್ಥಳಿಯರ ಜೊತೆ ಸೇರಿ ಶಿವಲಿಂಗ ಇಟ್ಟ ಸ್ಥಳವನ್ನು ಅಗೆಯಲು ಪ್ರಾರಂಭಿಸುತ್ತಾರೆ. ಆಗಲಾದರು ಶಿವಲಿಂಗವನ್ನು ಎತ್ತಿಕೊಳ್ಳಬಹುದು ಎಂದು. ಆದರೆÀ ಹೇಗೆ ಇವರು ಅಗೆಯುತ್ತಾರೋ ಹಾಗೆ ಶಿವಲಿಂಗವು ಸಹ ಆಳಕ್ಕೆ ಇಳಿಯುತ್ತಲೆ ಹೊಗುತ್ತದೆ. ಮೇಲೆತ್ತಲು ಹೋದರೆ ಸ್ವಲ್ಪವೂ ಕದಲುತಿಲ್ಲ. ಹೀಗೆ ಐವತ್ತು ಅಡಿಗಳ ವರೆಗೆ ಅಗೆದು ಎಲ್ಲರು ಸುಸ್ತಾಗಿ ಕುಳಿತುಬಿಟ್ಟರು. ಕೊನೆಗೆ ಸಾಧುಗಳು ಒಂದು ನಿರ್ಧಾರಕ್ಕೆ ಬರುತ್ತಾರೆ. ಶಿವನ ಇಚ್ಛೆ ಇಲ್ಲೆ ಇರಬೇಕೆಂದಿದೆ. ಗ್ವಾಲಿಯರ್ಗೆ ಒಯ್ಯುವುದು ಬೇಡ ಎಂದು.

ನೋಡಿ ಗ್ವಾಲಿಯರ್ನಲ್ಲಿ ಇರಬೇಕಿದ್ದ ಶಿವಲಿಂಗ ತನ್ನ ಇಚ್ಛೆಯಂತೆ ಇಲ್ಲೆ ಅಚಲವಾಗಿ ಉಳಿದಿಬಿಟ್ಟಿತು. ಹೀಗಾಗಿ ತನ್ನ ಅಚಲ ನಿರ್ಧಾರದಿಂದ ಇಲ್ಲಿ ಉಳಿದ ಮತ್ತು ಸ್ಥಾಪನೆಗೊಂಡ ಶಿವಲಿಂಗಕ್ಕೆ ಅಚಲೇಶ್ವರ ಶಿವಲಿಂಗ ದೇವಸ್ಥಾನವೆಂದು ಕರೆಯಲಾಯಿತು.ರಾಜಸ್ಥಾನದ ಧೋಲ್ಪುರದಲ್ಲಿನ ಶಿವಲಿಂಗದ ಬಗ್ಗೆ ಮಾಹಿತಿ ಕಲೆ ಹಾಕುವಾಗ ಇಂಥದ್ದೆ ವಿಶೇಷತೆಯ ಇನ್ನೊಂದು ಶಿವಲಿಂಗದ ಬಗ್ಗೆಯು ಮಾಹಿತಿ ಲಭ್ಯವಾಯಿತು. ಅದು ದೇಶದ ರಾಜಧಾನಿ ದೆಹಲಿಯಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿ ಅಂದರೆ ಉತ್ತರ ಪ್ರದೇಶದ ಹಾಪು ಜಿಲ್ಲೆಯ ಧನತೊಲಾ ಗ್ರಾಮದಲ್ಲಿ ದಿನಕ್ಕೆ 3 ಬಣ್ಣದಲ್ಲಿ ಬದಲಾಗುವು ಇನ್ನೊಂದು ಶಿವಲಿಂಗವಿದೆ. ಇದು ಪ್ರರಂಭದಲ್ಲಿ 4 ಸೆ.ಮೀ. ಮಾತ್ರ ಇದ್ದದ್ದು ಈಗ ದಿನೆ ದಿನೇ ಬೇಳೆಯುತ್ತಿದೆಯಂತೆ.

ನಮ್ಮ ದೇಶದಲ್ಲಿ ಇಂಥ ಅದೇಷ್ಟು ರಹಸ್ಯಗಳು ಅಡಗಿವೆಯೋ ಗೊತ್ತಿಲ್ಲ. ಹುಡುಕುತ್ತ ಹೋದಂತೆಲ್ಲ ಲೆಕ್ಕವಿಲ್ಲದಷ್ಟು ರಹಸ್ಯ ಸಂಗತಿಗಳು ಎದುರಾಗುತ್ತವೆ. ಆದರೆ ಅದರ ಹಿಂದಿನ ಸತ್ಯ ಮಾತ್ರ ನಮ್ಮ ಬುದ್ಧಿಗೆ ಅಗೋಚರ.

ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಚಂಬಲ್ ಕಣಿವೆಯಲ್ಲಿರುವ ಈ ಅಚಲೇಶ್ವರ ಶಿವಲಿಂಗ ದೇವಸ್ಥಾನದ ದರ್ಶನ ಪಡೆಯಲು ಇಲ್ಲಿ ಕ್ಲಿಕ್ಕಿಸಿ

ಇಂಥ ಇನ್ನಷ್ಟು ಸ್ವಾರಸ್ಯಕರ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ