ಸೆಪ್ಟೆಂಬರ್ 10, 2020

ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಎಂಥದ್ದು ಗೊತ್ತೆ !- ಪಂಡಿತ ಭೀಮಸೇನ ಜೋಶಿ


“ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ

ಭಜತಾಂ ಕಲ್ಪವೃಕ್ಷಾಯನಮತಾಂ ಕಾಮಧೇನುವೆ...”

ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಕೊಂಡಾಡದ ನಾಲಿಗೆಯೇಇಲ್ಲ. ಅವರ ಸನ್ನಿಧಾನದಲ್ಲಿ ಸಕಲವೆಲ್ಲವನ್ನು ಮರೆತು ತನ್ಮಯನಾಗಿಬಿಡುತ್ತಾನೆ. ಬೇಡಿ ಬಂದವರಿಗೆ ಹರಿಸಿನೊಂದುಬಂದವರಿಗೆ ಸಂತೈಸಿ ಕಲಿಯುಗದಲ್ಲಿ ಎಲ್ಲರ ಪಾಲಿನ  ಕಾಮಧೇನು ಕಲ್ಪವೃಕ್ಷವಾಗಿದ್ದಾರೆ.


ಭಕ್ತರನ್ನು
ಉದ್ಧರಿಸಿ ಪಾವನಗೊಳಿಸಿದ ಮಂತ್ರಾಲಯದ ಮಹಾಮಹೀಮ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳು. ನೆನದವರ ಮನದಲ್ಲಿ, ಕರೆದವರ ಬಳಿಯಲ್ಲಿ ಓಡೋಡಿ ಬರುತ್ತಾರೆ. ಅವರ ಸಾಮಿಪ್ಯದ ಅನುಭೂತಿಯಾದವರು, ಅವರ ಆಶೀರ್ವಾದದಿಂದ ಕಷ್ಟ ಕಳೆದುಕೊಂಡವರು ಹೇಳಿರುವ ಅದೆಷ್ಟೋ ಕಥೆಗಳನ್ನು ಕೇಳಿದ್ದೀವಿ. ಅದರ ಅನುಭವ ಪಡೆದವರು ಇದ್ದೀವಿ.

ಪ್ರತಿಯೊಬ್ಬರು ಗುರು ರಾಯರ ಸನ್ನಿಧಾನಕ್ಕೆ ಒಂದಿಲ್ಲ ಒಂದು ಬಾರಿ ಬಂದೆ ಬರುತ್ತಾರೆ. ಅವರೆಷ್ಟೆ ದೊಡ್ಡ ವ್ಯಕ್ತಿಯಾಗಿರಲಿ, ಚಿಕ್ಕ ವ್ಯಕ್ತಿಯೇ ಆಗಿರಲಿ. ಎಲ್ಲರನ್ನು ಸಮನಾಗಿ ನೋಡಿ ಅವರ ಮನೊಕಾಮನೆಗಳನ್ನು ಗುರು ರಾಘವೇಂದ್ರರು ಈಡೇರಿಸಿದ್ದಾರೆ.


ತುಂಗಾತೀರದಿ ನಿಂತ ಸುಯತಿವರನಾರೆ ಕೇಳಮ್ಮಯ್ಯ ಎನ್ನುವ ಅಭಿನವ ಜನಾರ್ಧನ ವಿಠಲರ ಕೀರ್ತನೆಯನ್ನು ಅತ್ಯಮೋಘವಾಗಿ ಹಾಡಿದ ಮಹಾನ್ ಗಾಯಕ ಪಂಡಿತ ಭೀಮಸೇನ ಜೋಶಿ ಅವರು ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಅಪ್ಪಟ ಭಕ್ತರುರಾಯರ ಕೃಪಾಕಟಾಕ್ಷಕ್ಕೆ ಒಳಗಾದ ಮೇಲೆಯೇ ಸಂಗೀತ ಲೋಕದಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳುವಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ.

ಪಂಡಿತ ಭೀಮಸೇನ ಜೋಶಿ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಕುರಿತು ಮಾತನಾಡಿರುವ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಪಂಡಿತ ಭೀಮಸೇನ ಜೋಶಿ ಅವರ ಜೀವನದಲ್ಲಿ ಒಂದು ಸಮಯ ಅವರು ತುಂಬಾ ಕಷ್ಟ ನೋಡಬೇಕಾಯಿತು. ಅವರು ಅಂದು ಕೊಂಡದ್ದು ಯಾವುದೂ ಸುಸೂತ್ರವಾಗಿ ನಡೆಯುತ್ತಿರಲಿಲ್ಲ. ಅಂಥ ವಿಷಮ ಪರಿಸ್ಥಿತಿಯಲ್ಲಿದ್ದಾಗ ಪಂಡಿತರು ಗುರು ರಾಯರನ್ನು ನೆನೆಸಿಕೊಳ್ಳುತ್ತಾರೆ. ತಕ್ಷಣವೆ ಅವರ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಅವರ ದರ್ಶನಾಶೀರ್ವಾದ ಪಡೆಯುತ್ತಾರೆ. ರಾಯರ ಮಡಿಲಲ್ಲಿ ತುಂಗಾ ತೀರದಲ್ಲಿ ತಮ್ಮ ಸಂಗೀತ ರಸಧಾರೆಯ ಸೇವೆಗೈಯುತ್ತಾರೆ. ರಾಯರ ಕೃಪೆ ಪಂಡಿತರಿಗಾಗುತ್ತದೆ.

ಅದಾದ ಮೇಲೆ ಪಂಡಿತ ಭೀಮಸೇನ ಜೋಶಿ ಅವರ ಜೀವನದಲ್ಲಿ ಬಂದೊದಗಿದ ಎಲ್ಲಾ ಕಷ್ಟಗಳು ವಿಮುಖವಾಗುತ್ತವೆ. ಮರಳಿ ವೈಭವದ ದಿನಗಳÀನ್ನು ನೋಡುತ್ತಾರೆ.

ಅವರು ಆಗ ರಾಯರ ಸನ್ನಿಧಾನದಲ್ಲಿದ್ದಾಗ ನಡೆದ ಒಂದು ಘಟನೆ ತುಂಬಾ ಸ್ವಾರಸ್ಯವಾಗಿದೆ. ಪಂಡಿತ ಭೀಮಸೇನ ಜೋಶಿ ಅವರು ತುಂಗಾ ತೀರದಲ್ಲಿ ಸಂಗೀತಾರಾಧನೆ ಮಾಡುವ ಸಂದರ್ಭದಲ್ಲಿ ಎಲ್ಲಿಂದಲೋ ಒಂದು ಶ್ವಾನ ಬಂದು ಇವರ ಸಂಗೀತವನ್ನು ತದೇಕ ಚಿತ್ತದಿಂದ ಆಸ್ವಾದಿಸುತಿತ್ತು. ಸಂಗೀತ ಮುಗಿದ ಕೂಡಲೆ ಹೊರಟು ಹೋಗುತಿತ್ತು. ಆಮೇಲೆ ಹುಡುಕಿದರೆ ಶ್ವಾನ ಎಲ್ಲಿಯು ಕಾಣುತ್ತಿರಲಿಲ್ಲ. ಇದು ಪಂಡಿತರು ಅಲ್ಲಿ ಸಂಗೀತ ತಾಲಿಮು ಮಾಡಿದಷ್ಟು ದಿನ ಪುನರಾವರ್ತನೆ ಆಗುತಿತ್ತಂತೆ.

ಇದು ಗುರು ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿಯ ಶಕ್ತಿಯೋ ಅಥವಾ ಸ್ವತಃ ರಾಯರೇ ಪಂಡಿತ ಭೀಮಸೇನ ಜೋಶಿ ಅವರಿಗೆ ದರ್ಶನ ನೀಡಲು ಆಗಮಿಸುತಿದ್ದ ರೀತಿಯೋ ಗೊತ್ತಿಲ್ಲ. ಆದರೆ ಭಕ್ತಿಯಿಂದ ಗುರು ರಾಯರನ್ನು ನೆನದರೆ ಅವರ ಅಭಯವಂತು ನಮ್ಮ ಮೇಲೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ