2020ನೇ ವರ್ಷ ಪ್ರಾರಂಭವಾಗುತ್ತಲೆ ಆಪತ್ತು ಆಘಾತಗಳು ಜೊತೆಯಲ್ಲಿಯೇ ಬಂದಂತಿದೆ. ವರ್ಷದ ಅರಂಭವೇ ಕೆಟ್ಟದಾಗಿತ್ತು. ಕೊರೋನಾ ಎಂಬ ಮಹಾಮಾರಿಯನ್ನು ಹೊತ್ತುಕೊಂಡು ಬಂತು. ಒಂಭತ್ತನೇ ತಿಂಗಳಲ್ಲು ಅದರ ಆರ್ಭಟ ಹೆಚ್ಚೆ ಇದೆ. ಇಂಥಹ ಆತಂಕದ ಮಧ್ಯೆ ಪ್ರತಿಭೆಗಳ ಕ್ರಿಯಾಶೀಲ ಚಟುವಟಿಕೆಗೆನೂ ಅಡ್ಡಿಯಾಗಿಲ್ಲ. ಕಲಬುರಗಿಯ ಯುವ ಗಾಯಕ "ಸಿಂಗರ್" ಬಸವ ತನ್ನ ಪ್ರಯತ್ನಶೀಲತೆಯ ಮೂಲಕ ಬೆಳಕಿಗೆ ಬರುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.
ತನ್ನ ಗೆಳೆಯರೊಂದಿಗೆ ಸೇರಿ ಕರ್ನಾಟಕದ ಐಪಿಎಲ್ ತಂಡವನ್ನು ಬೆಂಬಲಿಸಿ ಹುರಿದುಂಬಿಸುವ ನಿಟ್ಟಿನಲ್ಲಿ ಒಂದು ಲವಲವಿಕೆಯ ವಿಡಿಯೋ ಸಾಂಗನ್ನು ಹೊರತಂದಿದ್ದಾರೆ. ಅದುವೆ "ಹೆಮ್ಮೆಯ ಆರ್ಸಿಬಿಯನ್". ಇದರಲ್ಲಿ ಸೊಗಸಾಗಿ ಹಾಡಿ ಕುಣಿದು ಕುಪ್ಪಳಿಸುತ್ತಾ ಆರ್ಸಿಬಿ ತಂಡಕ್ಕೆ ಜಯಕಾರ ಹಾಕಿದ್ದಾರೆ. ಈ ಸಲ ಕಪ್ ನಮ್ದೆ ! ಎಂದು ಕೂಗಿ ಹೇಳಿದ್ದಾರೆ. ಇದು ವರೆಗೂ ಐಪಿಎಲ್ ಕಿರೀಟ ಎತ್ತಿ ಹಿಡಿಯಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದರು ಕಪ್ ಎತ್ತಿ ಪಡೆಯುತ್ತಾರಾ ಎಂದು ಕಾದು ನೋಡಬೇಕು.
ಆದರೆ ಸಿಂಗರ್ ಬಸವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವ ನಿಟ್ಟಿನಲ್ಲಿ ತಮ್ಮ ಪ್ರತಿಭೆಯ ಅನಾವರಣವಂತೂ ಚೆನ್ನಾಗಿಯೇ ಮಾಡಲು ಪ್ರಯತ್ನಿಸಿದ್ದಾರೆ. ಚಿಕ್ಕಂದಿನಲ್ಲೆ ಹಾಡುವ ಗೀಳು ಅಂಟಿಸಿಕೊಂಡು ಬೆಳೆದವರು, ಮುಂದೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ, ಓದು ನಂತರ ವೃತ್ತಿ ಎಲ್ಲವನ್ನು ಸರಿದೂಗಿಸಿಕೊಂಡು ಬಂದವರು.
ತನ್ನತಾಯಿಯ ಪ್ರೋತ್ಸಾಹ, ಗೆಳೆಯರ ಬೆಂಬಲದಿಂದ ಎನನ್ನಾದರು ಹೊಸದನ್ನು ಮಾಡಲು ಬಯಸಿ, ಈ ವಿಡಿಯೋ ಸಾಂಗನ್ನು ಹೊರತಂದಿದ್ದಾರೆ. ಉತ್ತಮ ಪ್ರತಿಕ್ರಿಯೆ ಎಲ್ಲರಿಂದ ಬರುತ್ತಿದೆ. ಇದುವೇ ಇಂತಹ ಬೆಳೆಯುವ ಪ್ರತಿಭೆಗಳಗೆ ಶ್ರೀರಕ್ಷೆ. ನೀವೂ ಆ ವಿಡಿಯೋ ಸಾಂಗನ್ನು ನೋಡಿ ಬೆಂಬಲಿಸಿ. ಹಾಗೆಯೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ