ಸೆಪ್ಟೆಂಬರ್ 03, 2020

ದಿನದಲ್ಲಿ ಮೂರು ಬಣ್ಣ ತಾಳುವ ಧೋಲ್ಪುರ ಕಣಿವೆಯ ಚಮತ್ಕಾರಿ ಶಿವಲಿಂಗ


ಇತ್ತೀಚೆಗೆ ಮಹಾರಾಷ್ಟ್ರದ ಅಪೂರ್ಣ ಶಿವಲಿಂಗದ ಸ್ವಾರಸ್ಯ ಓದಿದ್ದಿವಿ. ಇಂಥ ಅದೆಷ್ಟೋ ಸ್ವಾರಸ್ಯಕರ ಸಂಗತಿಗಳು ನಮ್ಮ ದೇಶದ ತುಂಬಾ ಹುಡುಕಿದಷ್ಟು, ತಿಳಿಯಲು ಹೊರಟಷ್ಟು ಸಿಗುತ್ತಲೆ ಹೋಗುತ್ತವೆ. ಅಂಥದ್ದೆ ಇನ್ನೊಂದು ಸ್ವಾರಸ್ಯಕರ ಮತ್ತು ರಹಸ್ಯಮಯ ಶಿವಲಿಂಗದ ಕಥೆಯೊಂದನ್ನು ಇಂದು ಹೇಳುತ್ತೇನೆ.

ರಾಜಸ್ಥಾನದ ಧೋಲ್ಪುರದಲ್ಲಿ ಶಿವಲಿಂಗ ದೇವಾಲಯವಿದ್ದು ಅಲ್ಲಿನ ಶಿವಲಿಂಗದ ಹಿನ್ನೆಲೆ ನಿಜಕ್ಕೂ ಸ್ವಾರಸ್ಯಕರವಾಗಿದೆ. ಸ್ವಾರಸ್ಯಕ್ಕೆ ಕಾರಣವೇನು ಎಂಬುದು ಇದುವರೆಗೆ ರಹಸ್ಯಮಯವಾಗಿಯೇ ಇದೆ. ಇಲ್ಲಿನ ಶಿವಲಿಂಗವು ದಿನದ ಮೂರು ಗಳಿಗೆಯಲ್ಲಿ 3 ಬಣ್ಣಗಳನ್ನು ಬದಲಾಯಿಸುತ್ತದೆ.


ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಅದೆಷ್ಟೋ ರಹಸ್ಯಮಯ ಶಿವ ದೇವಾಲಯಗಳಿದ್ದರೂ ಇಲ್ಲಿರುವ ಶಿವನ ರಹಸ್ಯ ಅಪರೂಪದ್ದಾಗಿದೆ. ದಿನದ ಮೂರು ಗಳಿಗೆಗೊಂದರಂತೆÉ ಮೂರು ರೀತಿಯಲ್ಲಿ ತನ್ನ ಮೈಬಣ್ಣವನ್ನು ಇಲ್ಲಿನ ಶಿವಲಿಂಗವು ಬದಲಾಯಿಸುವ ಕಥೆ ಅಪರೂಪದಲ್ಲೆ ತೀರಾ ಅಪರೂಪ ಎನ್ನಬಹುದು.

ಶಿವಲಿಂಗದ ಬಣ್ಣವು ಬೆಳಗ್ಗಿನ ಆರರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಲಘು ಕೆಂಪು ಬಣ್ಣ, ಮೂರು ಗಂಟೆಯಿಂದ ಅದರ ಬಣ್ಣ ಕೇಸರಿ ಆಗಲು ಪ್ರಾರಂಭವಾಗಿ ನಂತರ ರಾತ್ರಿಯಲ್ಲಿ ಅದೇ ಶಿವಲಿಂಗ ತಿಳಿ ಕಪ್ಪು ಬಣ್ಣಕ್ಕೆ ಬದಲಾಗುತ್ತದೆಯಂತೆ.

ಇಂಥ ರಹಸ್ಯಮಯ ಶಿವಲಿಂಗವನ್ನು ಇಲ್ಲಿನ ಸ್ಥಳೀಯರುಅಚಲೇಶ್ವರ ಮಹಾದೇವ ದೇವಾಲಯವೆಂದು ಕರೆಯುತ್ತಾರೆ. ಇದು ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಚಂಬಲ್ ಕಣಿವೆಯ ತೀರದಲ್ಲಿದೆ. ಧೋಲ್ಪುರ ಜಿಲ್ಲೆಯ ಕೊನೆಯ ಗಡಿಯಲ್ಲಿರುವ ಚಂಬಲ್ ಕಣಿವೆಗೆ ಸ್ವಲ್ಪ ಮೊದಲು ನಿರ್ಜನ ಮಾರ್ಗವೊಂದರ ಕಂದಕಗಳಲ್ಲಿ ಇಳಿದು ಇಲ್ಲಿಂದ ಒಂದೂವರೆ ಕಿಲೋಮೀಟರ್ ದೂರ ಸಾಗಿದರೆ ಅಚಲೇಶ್ವರ ಮಹಾದೇವ ದೇವಾಲಯದ ದರ್ಶನವಾಗುತ್ತದೆ.

ಪ್ರದೇಶ ಮರಭೂಮಿಯಿಂದ ಕೂಡಿದ್ದು, ಕಣಿವೆ ಪ್ರದೇಶವಾಗಿದ್ದರಿಂದ ದಾರಿ ತುಂಬಾ ಕಠಿಣ. ಹೀಗಾಗಿ ಇಲ್ಲಿಗೆ ಬರುವವರ ಸಂಖ್ಯೆ ತೀರಾ ವಿರಳ. ಆದರೂ ದೇವಸ್ಥಾನದ ವಿಶೇಷತೆ ತಿಳಿದವರು ಆಸಕ್ತಿಯಿಂದ ಬರುತ್ತಾರೆ. ಇಲ್ಲಿನ ರಹಸ್ಯದ ಚಮತ್ಕಾರತೆಯ ಅನುಭವವನ್ನು ಪಡೆದುಕೊಳ್ಳುತ್ತಾರೆ.

ಹಿನ್ನೆಲೆ: ದೇವಾಲಯವನ್ನು 1875 ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅದಕ್ಕಿಂತಲೂ ನೂರಾರು ವರ್ಷಗಳಷ್ಟು ಹಳೆಯದು ಎಂದು ಕೆಲವರು ನಂಬಿದ್ದರೂ, ಸ್ಥಳೀಯ ಜನರ ಪ್ರಕಾರ ಇದು ಸುಮಾರು 1875 ಸುಮಾರಿನಲ್ಲಿ ನಿರ್ಮಾಣವಾಗಿರಬಹುದು ಎಂದು ಹೇಳಲಾಗುತ್ತದೆ.

ದೇವಾಲಯದ ಸ್ಥಾಪನೆಯ ಬಗ್ಗೆ ಅಲ್ಲಿ ಒಂದು ಜನಪ್ರಿಯ ಕಥೆ ಇದೆ. ಅದರ ಪ್ರಕಾರ ಸಮಯದಲ್ಲಿ ಕೆಲವು ಋಷಿಮುನಿಗಳು ಶಿವಲಿಂಗವನ್ನು ಚಂಬಲ್ ಕಣಿವೆಯಿಂದ ಗ್ವಾಲಿಯರ್ಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ದಾರಿಯಲ್ಲಿ ಸಾಗುತ್ತ ಸ್ಥಳಕ್ಕೆ ಬಂದಾಗ ರಾತ್ರಿಯಾಗುತ್ತದೆ. ಆಗ ಸ್ಥಳದಲ್ಲಿ ಎರಡು ಹುಣಸೆ ಮರಗಳು ಮತ್ತು ಬಾವಿಯನ್ನು ನೋಡಿದ ಸಾಧುಗಳು ಇಲ್ಲಿಯೇ ವಿಶ್ರಾಂತಿ ಪಡೆಯಲು ನಿರ್ಧರಿಸಿದರು.

ಮರುದಿನ ಬೆಳಿಗ್ಗೆ ಸಾಧುಗಳು ಗ್ವಾಲಿಯರ್ಗೆ ಹೋಗಲು ಸಿದ್ಧರಾಗುತ್ತಾರೆ. ಆದರೆ ಶಿವಲಿಂಗವನ್ನು ಎತ್ತಿಕೊಳ್ಳಲು ಹೋದಾಗ ಅದು ಇಟ್ಟ ಸ್ಥಳದಿಂದ ಸ್ವಲ್ಪವು ಕದಲಲಿಲ್ಲ. ಇದರಿಂದ ವಿಚಲಿತರಾದ ಸಾಧುಗಳು ಸ್ಥಳೀಯ ಜನರನ್ನು ಕರೆದು ಅಲ್ಲಿಂದ ಶಿವಲಿಂಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ಅವರೆಲ್ಲರ ಪ್ರಯತ್ನವೂ ವ್ಯರ್ಥವಾಯಿತು. ಆಗ ಸಾಧುಗಳು ಸ್ಥಳಿಯರ ಜೊತೆ ಸೇರಿ ಶಿವಲಿಂಗ ಇಟ್ಟ ಸ್ಥಳವನ್ನು ಅಗೆಯಲು ಪ್ರಾರಂಭಿಸುತ್ತಾರೆ. ಆಗಲಾದರು ಶಿವಲಿಂಗವನ್ನು ಎತ್ತಿಕೊಳ್ಳಬಹುದು ಎಂದು. ಆದರೆÀ ಹೇಗೆ ಇವರು ಅಗೆಯುತ್ತಾರೋ ಹಾಗೆ ಶಿವಲಿಂಗವು ಸಹ ಆಳಕ್ಕೆ ಇಳಿಯುತ್ತಲೆ ಹೊಗುತ್ತದೆ. ಮೇಲೆತ್ತಲು ಹೋದರೆ ಸ್ವಲ್ಪವೂ ಕದಲುತಿಲ್ಲ. ಹೀಗೆ ಐವತ್ತು ಅಡಿಗಳ ವರೆಗೆ ಅಗೆದು ಎಲ್ಲರು ಸುಸ್ತಾಗಿ ಕುಳಿತುಬಿಟ್ಟರು. ಕೊನೆಗೆ ಸಾಧುಗಳು ಒಂದು ನಿರ್ಧಾರಕ್ಕೆ ಬರುತ್ತಾರೆ. ಶಿವನ ಇಚ್ಛೆ ಇಲ್ಲೆ ಇರಬೇಕೆಂದಿದೆ. ಗ್ವಾಲಿಯರ್ಗೆ ಒಯ್ಯುವುದು ಬೇಡ ಎಂದು.

ನೋಡಿ ಗ್ವಾಲಿಯರ್ನಲ್ಲಿ ಇರಬೇಕಿದ್ದ ಶಿವಲಿಂಗ ತನ್ನ ಇಚ್ಛೆಯಂತೆ ಇಲ್ಲೆ ಅಚಲವಾಗಿ ಉಳಿದಿಬಿಟ್ಟಿತು. ಹೀಗಾಗಿ ತನ್ನ ಅಚಲ ನಿರ್ಧಾರದಿಂದ ಇಲ್ಲಿ ಉಳಿದ ಮತ್ತು ಸ್ಥಾಪನೆಗೊಂಡ ಶಿವಲಿಂಗಕ್ಕೆ ಅಚಲೇಶ್ವರ ಶಿವಲಿಂಗ ದೇವಸ್ಥಾನವೆಂದು ಕರೆಯಲಾಯಿತು.ರಾಜಸ್ಥಾನದ ಧೋಲ್ಪುರದಲ್ಲಿನ ಶಿವಲಿಂಗದ ಬಗ್ಗೆ ಮಾಹಿತಿ ಕಲೆ ಹಾಕುವಾಗ ಇಂಥದ್ದೆ ವಿಶೇಷತೆಯ ಇನ್ನೊಂದು ಶಿವಲಿಂಗದ ಬಗ್ಗೆಯು ಮಾಹಿತಿ ಲಭ್ಯವಾಯಿತು. ಅದು ದೇಶದ ರಾಜಧಾನಿ ದೆಹಲಿಯಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿ ಅಂದರೆ ಉತ್ತರ ಪ್ರದೇಶದ ಹಾಪು ಜಿಲ್ಲೆಯ ಧನತೊಲಾ ಗ್ರಾಮದಲ್ಲಿ ದಿನಕ್ಕೆ 3 ಬಣ್ಣದಲ್ಲಿ ಬದಲಾಗುವು ಇನ್ನೊಂದು ಶಿವಲಿಂಗವಿದೆ. ಇದು ಪ್ರರಂಭದಲ್ಲಿ 4 ಸೆ.ಮೀ. ಮಾತ್ರ ಇದ್ದದ್ದು ಈಗ ದಿನೆ ದಿನೇ ಬೇಳೆಯುತ್ತಿದೆಯಂತೆ.

ನಮ್ಮ ದೇಶದಲ್ಲಿ ಇಂಥ ಅದೇಷ್ಟು ರಹಸ್ಯಗಳು ಅಡಗಿವೆಯೋ ಗೊತ್ತಿಲ್ಲ. ಹುಡುಕುತ್ತ ಹೋದಂತೆಲ್ಲ ಲೆಕ್ಕವಿಲ್ಲದಷ್ಟು ರಹಸ್ಯ ಸಂಗತಿಗಳು ಎದುರಾಗುತ್ತವೆ. ಆದರೆ ಅದರ ಹಿಂದಿನ ಸತ್ಯ ಮಾತ್ರ ನಮ್ಮ ಬುದ್ಧಿಗೆ ಅಗೋಚರ.

ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಚಂಬಲ್ ಕಣಿವೆಯಲ್ಲಿರುವ ಈ ಅಚಲೇಶ್ವರ ಶಿವಲಿಂಗ ದೇವಸ್ಥಾನದ ದರ್ಶನ ಪಡೆಯಲು ಇಲ್ಲಿ ಕ್ಲಿಕ್ಕಿಸಿ

ಇಂಥ ಇನ್ನಷ್ಟು ಸ್ವಾರಸ್ಯಕರ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ