ಸೆಪ್ಟೆಂಬರ್ 22, 2020

ಇಂದಿನ ಚಲನಚಿತ್ರಗಳು ಭಾರತಿಯ ಸಂಸ್ಕೃತಿಯ ಮೇಲೆ ವಿಕೃತ ಪರಿಣಾಮ ಬೀರುತ್ತಿವೆಯೆ ?

ಹೌದು ಬೀರುತ್ತಿವೆ ಎಂದು ಬೇಸರದಿಂದಲೇ ಹೇಳಬಹುದೇನೋ? ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಒಂದು ಕಡೆಯಾದರೆ; ಅಂಡರ್ ವರ್ಲ್ಡ ಕಥಾವಸ್ತುವಿನ ಚಲನಚಿತ್ರಗಳಲ್ಲಿ ಡಾನ್ ಗಳನ್ನು ವೈಭವೀಕರಿಸುವುದು, ಪುರಾಣ ಪ್ರಸಿದ್ಧ ಮತ್ತು ಇತಿಹಾಸದ ನೆಗೆಟಿವ್ ಪಾತ್ರಗಳನ್ನೆ ಕೇಂದ್ರವಾಗಿಟ್ಟುಕೊಂಡು ಕೆಟ್ಟತನವನ್ನೆ ವೈಭವೀಕರಿಸಿ ತೋರಿಸುವುದರಿಂದ ಪ್ರೇಕ್ಷಕರ ಮೇಲೆ ಆ ಪಾತ್ರಗಳು ಪರಿಣಾಮ ಬೀರದೆ ಇರಲಾರವು.

ಅತ್ಯುತ್ತಮ ಕಥಾವಸ್ತುವುಳ್ಳ ಚಲನಚಿತ್ರಗಳು ಬಂದರು ಇಂಥ ಚಿತ್ರಗಳೇ ಜಯಭೇರಿ ಬಾರಿಸಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಕಮರ್ಷಿಯಲ್ ಮತ್ತು ಮಾಸ್ ಸಿನಿಮಾಗಳು ಎಂಬ ಪದ್ದತಿಗಳಲ್ಲಿ ಪ್ರೇಕ್ಷಕ ಸುತ್ತುವರೆದುಕೊಂಡಿದ್ದಾನೆ.

ಉತ್ತಮ ಕಥಾವಸ್ತುವುಳ್ಳ, ಈ ನೆಲದ ಈ ಸಂಸ್ಕೃತಿ  ಬಿಂಬಿಸುವ ಸಿನಿಮಾ ಎಂದಾಗ ಅದಕ್ಕೆ ಕಲಾತ್ಮಕ ಚಿತ್ರ ಎನ್ನುವ ಹಣೆಪಟ್ಟಿ ಅಂಟಿಸಿ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಹೀಗಾಗಿ ಇಂಥ ಅತ್ಯುತ್ತಮ ಕಥಾಹಂದರದ, ಈ ಸಂಸ್ಕೃತಿಯ ಚಲನಚಿತ್ರಗಳು ಎಲ್ಲಾ ಪ್ರೇಕ್ಷಕರಿಗೆ ಮುಟ್ಟದೆ, ತನ್ನ ಉದ್ದೇಶ ಸಾಕಾರಗೊಳಿಸದೆ ಸೋಲೊಪ್ಪಿಕೋಳ್ಳುತ್ತದೆ.

ಆದರೆ ಕಮರ್ಷಿಯಲ್ ಮತ್ತು ಮಾಸ್ ಚಲನಚಿತ್ರ ಎನ್ನುವ ಹಣೆಪಟ್ಟಿಯಲ್ಲಿ ಬರುವ ನೆಗೆಟಿವ್ ಕಥೆ ಇರುವ ಚಿತ್ರಗಳೇ ಜಯಭೇರಿ ಬಾರಿಸುತ್ತವೆ. ನಿಜಕ್ಕೂ ಇದು ವಿಪರ್ಯಾಸವೆ ಸರಿ. ಹೀಗಾದಾಗ ಅಂಥ ಚಲನಚಿತ್ರಗಳು ನಮ್ಮ ಬಾರತೀಯ ಸಂಸ್ಕೃತಿಯ ಮೇಲೆ ವಿಕೃತ ಪರಿಣಾಮ ಬೀರದೆ ಇರಲು ಸಾಧ್ಯವೇ ? 

ಈ ನಿಟ್ಟಿನಲ್ಲಿ ನಮ್ಮ ಚಿತ್ರೋದ್ಯಮ, ನಾಯಕ ನಟರು ಮತ್ತು ಪ್ರೇಕ್ಷಕರು ಯೋಚಿಸುವ ಅನಿವಾರ್ಯತೆ ಇದೆ. ನಾಯಕನನ್ನೆ ಆರಾಧಿಸುವ ಪ್ರೇಕ್ಷಕನನ್ನು ನಾಯಕ ಅಥವಾ ಖಳನಾಯಕನನ್ನಾಗಿ ರೂಪಿಸಬಲ್ಲ ಶಕ್ತಿ ಈ ಚಲನಚಿತ್ರಗಳಿಗಿದೆ. ಬದಲಾವಣೆ ಬರಬೇಕಷ್ಟೆ.

ಈ ಲೇಖನ ಹಿಂದಿ ಮ್ಯಾಗಜೀನ್ "ಮೂವಿ ಮೂವ್ಮೆಂಟ್" ಸೆಪ್ಟೆಂಬರ್ ಆವೃತಿಯಲ್ಲಿ ಪ್ರಕಟಗೊಂಡಿದ್ದು, ಅದನ್ನು ಆತ್ಮೀಯ ಗೆಳೆಯ ಗೋವಿಂದರಾವ್ ಎನ್. ರಾಠೋರ್ ಹಿಂದಿಗೆ ತುರ್ಜುಮೆಗೊಳಿಸಿದ್ದಾರೆ.


ಹಿಂದಿ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ