ಮೇ 21, 2021

ಕೋವಿಸೆಲ್ಫ್ ಕಿಟ್ ನಿಂದ ಕೋವಿಡ್ ಸ್ವಯಂ ಪರೀಕ್ಷೆ ಹೇಗೆ ?

ಕೊರೊನಾ ಎರಡನೇ ಅಲೆಯಿಂದ ದಿನೇ ದಿನೆ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲರಲ್ಲಿಯೂ ಭಯ ಮನೆ ಮಾಡಿದೆ. ಸಣ್ಣ ಜ್ವರ, ನೆಗಡಿ, ಗಂಟಲು ಕರಕರ ಅಂದರೆ ಸಾಕು ನನಗೂ ಕೊರೋನಾ ಬಂತನೋ ಎಂಬಂತೆ ನಡುಗಿ ಬಿಡುತ್ತೇವೆ. ಹಾಗಂತ ಪಟ್ಟಂತ ಹೋಗಿ ಕೋವಿಡ್ ಟೆಸ್ಟ್ ಮಾಡಿಕೊಳ್ಳಲೂ ಭಯಪಡುತ್ತೇವೆ. ಹೀಗಾಗಿ ಅದೇಷ್ಟೋ ಜನ ಟೆಸ್ಟ್ ಮಾಡಿಕೊಳ್ಳದೇ ಕೋವಿಡ್ ಇದೇಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಮಾನಸಿಕ ವೇದನೆಯಿಂದ ಒದ್ದಾಡುತ್ತಿದ್ದಾರೆ.

ಅಂಥವರಿಗೆ ಕೊರೋನಾ ಟೆಸ್ಟ್ ಮತ್ತೊಂದು ಗೇಮ್ ಚೇಂಜರ್ ಸಾಧನ ಈಗ ಮಾರುಕಟ್ಟೆಗೆ ಬಂದಿದೆ. ಅದನ್ನು ಮನೆಯಲ್ಲಿ ಸ್ವತಃ ತಾವೇ ಪರೀಕ್ಷೆ ಮಾಡಿಕೊಂಡು ತಮಗೆ ಕೊರೋನಾ ಸೋಂಕು ತಗುಲಿದನಾ ಇಲ್ಲವಾ ಎಂದು ತಿಳಿದುಕೊಳ್ಳಬಹುದಾಗಿದೆ. ಅದುವೆ ಹೋಂ ಟೆಸ್ಟಿಂಗ್ ರಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಕೋವಿಸೆಲ್ಫ್. ಇದಕ್ಕೆ ಐಸಿಎಂಆರ್ ಹಸಿರು ನಿಶಾನೆ ತೋರಿಸಿದೆ. ಸರಕಾರದ ಮಾನ್ಯತೆಯೂ ಲಭ್ಯವಾಗಿದೆ. ಈಗ ಬಿಡುಗಡೆಯಾಗಿದ್ದು ಇನ್ನನು ಎಲ್ಲರಿಗೂ ಸಿಗಲಿದೆ.

ಇದು ಪ್ರೆಗ್ನೆನ್ಸಿ ಪರೀಕ್ಷೆ ಮಾದರಿಯ ಹೋಂ ಕಿಟ್ ಆಗಿದ್ದು ಸರಳ ಮತ್ತು ಸುಲಭವಾಗಿದೆ. ಆದರೆ ಇದರ ಪ್ರತಿ ಆಗು ಹೋಗಿನ ಮೇಲೆ ಐಸಿಎಂಆರ್ ಆ್ಯಪ್ ಮೂಲಕ ನಮ್ಮ ಮೇಲೆ ನೇರ ನಿಗಾ ಇಟ್ಟಿರುತ್ತದೆ. ಕೊರೋನಾ ವೈರ ರೋಗದ ಲಕ್ಷಣಗಳನ್ನು ಹೊಂದಿರುವವರು ಮನೆಯಲ್ಲೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಸಹಾಯವಾಗುವಂಥ ಟೆಸ್ಟ್ ಕಿಟ್ ಮೆಡಿಕಲ್ ಸ್ಟೋರ್ಗಳಲ್ಲಿ ಈಗ ಲಭ್ಯವಿದೆ.


ಪುಣೆಯ ಮೈಲಾಬ್ ಡಿಸ್ಕವರಿ ಸಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಹೋಂ ಟೆಸ್ಟಿಂಗ್ ರಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಕೋವಿಸೆಲ್ಫ್ ಬಳಕೆಗೆ ಐಸಿಎಂಆರ್ ಅನುಮೋದನೆ ನೀಡಿದೆ. ಕಿಟ್ ಬಳಸಿ, 2 ನಿಮಿಷದಲ್ಲಿ ಜನರು ತಮ್ಮ ಗಂಟಲು ದ್ರವವನ್ನು ಸಂಗ್ರಹಿಸಿ, ಗರಿಷ್ಠ 15 ನಿಮಿಷಗಳಲ್ಲಿ ತಮ್ಮ ಫಲಿತಾಂಶವನ್ನು ತಾವೇ ನೋಡಿಕೊಳ್ಳಬಹುದಾಗಿದೆ.


ಕೋವಿಸೆಲ್ಫ್ ಕಿಟ್ನಿಂದ ಕೋವಿಡ್ ಟೆಸ್ಟ್ ಹೇಗೆ ಮಾಡುವುದು ಎಂಬುದನ್ನು ತೋರಿಸುವ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ.

ಕೋವಿಸೆಲ್ಫ್ ಕಿಟ್ನಿಂದ ಕೋವಿಡ್ ಟೆಸ್ಟ್ ಹೇಗೆ ಮಾಡುವುದು ?

  1. ಮೈ ಲ್ಯಾಬ್ ಆ್ಯಪ್ ಅನ್ನು ಗೂಗಲ್/ಆಪಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.
  2. ಆಪ್ ಅನ್ನು ಡೌನ್ಲೋಡ್ ಮಾಡಿದ ಬಳಿಕ ಹೆಸರು, ಮೊಬೈಲ್ ನಂಬರ್ ಇತ್ಯಾದಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು.
  3. ರಿಜಿಸ್ಟ್ರೇಷನ್ ಆದ ಬಳಿಕ ಫೋಟೋ ಅಪ್ಲೋಡ್ ಮಾಡಬೇಕುಆಪ್ನಲ್ಲಿ ರಿಜಿಸ್ಟ್ರೇಷನ್ ಮಾಡಿದ ಬಳಿಕ ಟೆಸ್ಟ್ ಕಿಟ್ನಲ್ಲಿರೋ ಫೋಟೋ ತೆಗೆದು ಕಳುಹಿಸಬೇಕು. ಅತಿ ಮುಖ್ಯವಾಗಿ ಸ್ಕ್ಯಾನಿಂಗ್ ಬಾರ್ ಕೋಡ್ ಫೋಟೋ ಕಳಿಸಬೇಕು.
  4. ಟೆಸ್ಟ್ ಕಿಟ್ ಓಪನ್ ಮಾಡಿದ ಬಳಿಕ ಟೆಸ್ಟ್ ಕಿಟ್ನಲ್ಲಿರೋ ಕಡ್ಡಿ ಮೂಲಕ ಮೂಗಿನಲ್ಲಿ ಹಾಕಿ ಸ್ವಾಬ್ ತೆಗೆಯಬೇಕು.
  5. ಟೆಸ್ಟ್ ಕಿಟ್ ಒಳಗಡೆ ಸ್ವಾಬ್ ಹಾಕಿ ಕಿಟ್ ಪ್ರತ್ಯೇಕವಾಗಿ ಇಡಬೇಕು.
  6. ಮೂಗಿನ ಸ್ವಾಬ್ ಅನ್ನು ಕಿಟ್ ಒಳಗಡೆ ಹಾಕಿದಾಗ ಸ್ಕ್ಯಾನ್ ಮಾಡಿ ಪಾಸಿಟಿವ್ ಆಥವಾ ನೆಗಟಿವ್ ಅಂತ ಐಸಿಎಂಆರ್ಗೆ ಹೋಗಲಿದೆ.
  7. ಸೆಲ್ಸ್ ಟೆಸ್ಟ್ ಕಿಟ್ನಲ್ಲಿ ಪಾಸಿಟಿವ್ ದೃಢಪಟ್ಟರೆ ಮೈ ಲ್ಯಾಬ್ ಆ್ಯಪ್ನಲ್ಲಿನ ನಿಮ್ಮ ಮಾಹಿತಿ ಐಸಿಎಂಆರ್ಗೆ ಹೋಗಲಿದೆ . ಐಸಿಎಂಆರ್ ರಾಜ್ಯದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಿದೆ ಅಂತ ಹೇಳಲಾಗಿದೆ.

ಕೋವಿಸೆಲ್ಫ್ ಕಿಟ್ನಲ್ಲಿ ಸೆಲ್ಫ್ ಟೆಸ್ಟ್ ಮಾಡಿದ ಮೇಲೆ ಟೆಸ್ಟ್ ವಿಷಯದಲ್ಲಿ ಕಳ್ಳಾಟ ನಡೆಯಲ್ಲ. ನಿಮ್ಮ ರಿಪೋರ್ಟ್ ಏನೇ ಬರಲಿ ಅದರ ಫಲಿತಾಂಶ ಮುಚ್ಚಿಡಲು ಆಗಲ್ಲ. ಯಾಕಂದರೆ ನಿಮ್ಮ ರಿಪೋರ್ಟ್ ಬಾರ್ಕೋಡ್ ಆಗಲೇಬೇಕು. ಬಾರ್ಕೋಡ್ ಆದ ಮೇಲೆ ನೀವು ಎಲ್ಲೇ ಇದ್ದರೂ ನಿಮ್ಮನ್ನು ಹುಡುಕಿಕೊಂಡು ಸಂಬಂಧಿತ ಅಧಿಕಾರಿಗಳು, ಸಿಬ್ಬಂದಿ ಬರುತ್ತಾರೆ.

ಕೋವಿಸೆಲ್ಫ್ ಕಿಟ್ನಿಂದ ಕೋವಿಡ್ ಪಾಸಿಟಿವ್/ನೆಗೆಟಿವ್ ಗೊತ್ತಾಗುವುದು ಹೇಗೆ ?

  • ಮೂಗಿನ ಸ್ವಾಬ್ ಆಧರಿಸಿ ಪಾಸಿಟಿವ್/ನೆಗೆಟಿವ್ ಗೊತ್ತಾಗಲಿದೆ
  • ಟೆಸ್ಟ್ ಕಾರ್ಡ್ನ ಕ್ವಾಲಿಟಿ ಕಂಟ್ರೋಲ್ ಮೇಲೆ ಗೊತ್ತಾಗಲಿದೆ
  • 'ಸಿ' ಬಳಿ 1 ಗೆರೆ ಬಿದ್ದರೆ ನೆಗೆಟಿವ್ ಎಂದರ್ಥ
  • 'ಸಿ' ಮತ್ತು ' ಟಿ ' ಅಕ್ಷರದ ಪಕ್ಕ 2 ಗೆರೆ ಬಂದರೆ ಪಾಸಿಟಿವ್ ಇದೆ ಎಂದರ್ಥ
  •  ಸೆಲ್ಫ್ ಟೆಸ್ಟ್ ಕಿಟ್ ಬೆಲೆ 250 ರೂ . ಮಾತ್ರ
  • ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ ಕಿಟ್ ಸಿಗಲಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ