ಇನ್ನು ಈ ಹೊಸ ರೂಪಾಂತರಿತ
ಕೊರೋನಾ ವೈರಸ್‍ನ ಪ್ರಸರಣ ಹಾಲಿ ವೈರಸ್‍ಗಿಂತ ಶೇ.70ರಷ್ಟು ಹೆಚ್ಚಿದೆ ಎಂಬ ತಜ್ಞರ ಎಚ್ಚರಿಕೆ ವಿಶ್ವಾದ್ಯಂತ ಭಾರಿ ಆತಂಕ
ಸೃಷ್ಟಿಸಿದೆ. ಅಲ್ಲದೆ ಸದ್ಯ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ನಿರುಪಯೋಗವಾಗಲಿವೆಯೇ ಎಂಬ ಆತಂಕ
ಕೂಡ ಎಲ್ಲರಿಗು ಕಾಡತೊಡಗಿದೆ. ಮುಂದಾಗುವ ಅನಾಹುತದ ಬಗ್ಗೆ ಊಹೆ ಮಾಡುವ ಮುಂಚೆ ಈ ರೂಪಾಂತರ ವೈರಸ್
ಬಗ್ಗೆ ಒಂದಿಷ್ಟು ಮಾಹಿತಿ ಮಾಡಿಕೊಳ್ಳೊಣ.
ಈಗಾಗಲೇ ಪತ್ತೆ ಮಾಡಿರುವ
ರೂಪಾಂತರಗೊಂಡ ಕೊರೋನಾ ವೈರಸ್‍ಗೆ ಬ್ರಿಟನ್‍ನ ವಿಜ್ಞಾನಿಗಳು “ವಿಯುಐ-202012/01” ಎಂದು ಹೆಸರಿಟ್ಟಿದ್ದಾರೆ. ಈ ರೂಪಾಂತರಿತ ವೈರಸ್ ಮಾನವ ಜೀವಕೋಶಗಳಿಗೆ ಸೊಂಕು ತಗುಲಲು SARS-coV-2 ಕೊರೋನಾ ವೈರಸ್ ಬಳಸುವ ಸ್ಪೈಕ್ ಪ್ರೋಟಿನ್‍ನಲ್ಲಿನ
ಅನುವಂಶಿಕ ರೂಪಾಂತರವನ್ನು ಒಳಗೊಂಡಿದೆ.
ರೂಪಾಂತರಿತ ವೈರಸ್ ಎಷ್ಟು
ಸಾಂಕ್ರಾಮಿಕವಾಗಿದೆ ?
“ವಿಯುಐ-202012/01”
(2020 ಡಿಸೆಂಬರ್‍ನಲ್ಲಿ
ಪತ್ತೆಯಾಗಿರುವ ಮೊದಲ ರೂಪಾಂತರ) ಎಂದು ಕರೆಯಲ್ಪಡುವ ಈ ಹೊಸ ವೈರಸ್‍ಗಿಂತ ಶೇ. 70 ರಷ್ಟು ಹೆಚ್ಚು ಸಾಂಕ್ರಾಮಿಕವಾಗಿದೆ.
ರೂಪಾಂತರಿತ ವೈರಸ್ ಕಂಡುಬಂದ
ನಂತರ ಉಂಟಾಗಿರುವ ಕಳವಳಕ್ಕೆ ಕಾರಣವೇನು ?
·
ಇದು ಈ ಹಿಂದಿನ ವೈರಸ್‍ಗಳನ್ನು
ವೇಗವಾಗಿ ಬದಲಾಯಿಸುತ್ತಿದೆ.
·
ಇದು ವೈರಸ್‍ನ ಪ್ರಮುಖ ಭಾಗದ
ಮೇಲೆ ಪರಿಣಾಮ ಬೀರುವ ರೂಪಾಂತರಗಳನ್ನು ಹೊಂದಿದೆ.
·
ಜೀವಕೋಶಗಳಿಗೆ ಸೊಂಕು ತಗುಲುವ
ವೈರಸ್ ಸಾಮರ್ಥ್ಯವನ್ನು ಹೆಚ್ಚಿಸುಂಥಹ ಕೆಲವು ರೂಪಾಂತರಗಳನ್ನು ಈಗಾಗಲೇ ಪ್ರಯೋಗಾಲಯದಲ್ಲಿ ತೋರಿಸಲಾಗಿದೆ.
ರೂಪಾಂತರಿತ ವೈರಸ್ ಏಕೆ
ಅಪಾಯಕಾರಿಯಾಗಿದೆ ?
ಇತ್ತಿಚಿನ ದಿನಗಳಲ್ಲಿ
ರೂಪಾಂತರಗೊಂಡ ವೈರಸ್ ಬ್ರಿಟನ್‍ನಲ್ಲಿ ಹೆಚ್ಚು ಪ್ರಬಲವಾಗುತ್ತಿದೆ. ಒಂದು ವೇಳೆ ಇದು ವೇಗವಾಗಿ
ಹರಡಲು ಪ್ರಾರಂಭಿಸಿದರೆ ವೈರಸನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.
ರೂಪಾಂತರಿತ ವೈರಸ್ ಎಲ್ಲಿ
ಮತ್ತು ಯಾವಾಗ ಕಂಡುಹಿಡಿಯಲಾಯಿತು ?
ಬ್ರಿಟನ್‍ನಲ್ಲಿ ಕಳೆದ
ಸೆಪ್ಟೆಂಬರ್‍ನಲ್ಲಿ ಮೊದಲ ಬಾರಿಗೆ ಈ ರೂಪಾಂತರಿತ ವೈರಸ್ಸನ್ನು ಕಂಡು ಹಿಡಿಯಲಾಯಿತು. ನವೆಂಬರ್
ತಿಂಗಳ ವೇಳೆಗೆ ಲಂಡನ್‍ನಲ್ಲಿ ದಾಖಲಾದ ಕಾಲು ಭಾಗದಷ್ಟು ಪ್ರಕರಣಗಳು ಈ ಹೊಸ ರೂಪಾಂತರಕ್ಕೆ
ಸಂಬಂಧಿಸಿವೆ ಎಂಬುದು ಗಮನಾರ್ಹವಾಗಿದೆ.
ರೂಪಾಂತರಗೊಂಡ ವೈರಸ್
ಮಾರಕವಾಗಿದೆಯೇ ?
ರೂಪಾಂತರಗೊಂಡ ಕೊರೋನಾ ವೈರಸ್
ತೀರ್ವ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಸದ್ಯ ಯಾವುದೇ ಪುರಾವೆಗಳಿಲ್ಲ. ಆದರೆ ಇದು
ವೈರಸ್‍ನ ಮೂಲ ಆವೃತಿಗಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಹೆಳಲಾಗುತ್ತಿದೆ.
ರೂಪಾಂತರಿತ ವೈರಸ್ ಹೊಸ
ಸೊಂಕುಗಳು
ಬ್ರಿಟನ್ ಆರೋಗ್ಯ
ಕಾರ್ಯದರ್ಶಿ ಮ್ಯಾಟ್ ಹನಾಕ್ ಅವರನ್ನು ಉಲ್ಲೇಖಿಸಿರುವ ವರದಿಗಳ ಪ್ರಕಾರ ರೂಪಾಂತರಗೊಂಡ ವೈರಸ್ 60 ಸ್ಥಳೀಯ ಪ್ರಾಧಿಕಾರ ಪ್ರದೇಶಗಳಲ್ಲಿ 1,100 ಹೊಸ ಸೊಂಕುಗಳಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಯಾವ ದೇಶಗಳಲ್ಲಿ
ರೂಪಾಂತರಗೊಂಡ ವೈರಸ್ ದೃಢವಾಗಿ
·
ಬ್ರಿಟನ್
·
ಡೆನ್ಮಾರ್ಕ್
·
ಆಸ್ಟ್ರೇಲಿಯಾ
·
ನೆದಲ್ರ್ಯಾಂಡ್ಸ್
·
ಇಟಲಿ
ರೂಪಾಂತರಗೊಂಡ ವೈರಸ್
ಭಾರತದಲ್ಲೂ ಕಂಡುಬಂದಿದೆಯೇ ?
ರೂಪಾಂತರಗೊಂಡ ಕೊರೋನಾ ವೈರಸ್
ಈವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್
ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಡಿಸೆಂಬರ್ 22ರ ವರದಿಯಂತೆ, ರೂಪಾಂತರಗೊಂಡ ಕೊರೋನಾ ವೈರಸ್
ಕಂಡು ಬಂದಿರುವ ಬ್ರಿಟನ್ ದೇಶದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ 266 ಪ್ರಯಾಣಿಕರಲ್ಲಿ 5 ಜನರಿಗೆ ಪಾಸಿಟಿವ್ ಬಂದಿದೆ. (ವರದಿಗಳನ್ನು ನಿರೀಕ್ಷಿಸಲಾಗಿದೆ)
ಬ್ರಿಟನ್‍ಗೆ ವಿಮಾನ ಸೇವೆ
ಸ್ಥಗಿತ
ಭಾರತ ಸೇರಿದಂತೆ ಪಾಕಿಸ್ಥಾನ,
ಪೋಲೆಂಡ್, ಸ್ಪೇನ್, ಸ್ವಿಟ್ಜರ್ಲೆಂಡ್, ಸ್ವೀಡನ್, ರಷ್ಯಾ, ಜೋರ್ಡಾನ್ ಮತ್ತು ಹಾಂಗ್‍ಕಾಂಗ್
ದೇಶಗಳು ಬ್ರಿಟನ್‍ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿವೆ. ಸೌದಿ ಅರೇಬಿಯಾ, ಕುವೈತ್ ಮತ್ತು ಒಮಾನ್ ದೇಶಗಳು ತಮ್ಮ ಗಡಿಗಳನ್ನು
ಸಂಪೂರ್ಣವಾಗಿ ಬಂದ್ ಮಾಡಿವೆ.
ಇತರ ರೂಪಾಂತರಗೊಂಡ ವೈರಸ್‍ಗಳು
ಕೂಡಾ ಇವೆಯೇ ?
ಕಳೆದ ಏಪ್ರಿಲ್‍ನಲ್ಲಿ
ಸ್ವೀಡನ್‍ನ ಸಂಶೋಧಕರು ಎರಡು ಅನುವಂಶಿಕ ಬದಲಾವಣೆಗಳನ್ನು ಹೊಂದಿದ ವೈರಸನ್ನು ಕಂಡುಹಿಡಿದಿದ್ದರು.
ಇದು ಸರಿಸುಮಾರು ಎರಡು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ನಂಬಲಾಗಿದೆ.
2020ರ ಆರಂಭದಲ್ಲಿ ವಿಶ್ವಕ್ಕೆ ಕಾಲಿಟ್ಟ ಮಹಾಮಾರಿ ಕೊರೋನಾ ಈ ವರ್ಷದ ಅಂತ್ಯದಲ್ಲಿ ಅದು ಸಹ ಅಂತ್ಯವಾಗಬಹುದು ಎಂದುಕೊಂಡವರಿಗೆ ಮತ್ತೆ ಭಯ ಶುರುವಾಗಿದೆ. ಮತ್ತದೇ ಆತಂಕದಲ್ಲಿಯೇ 2021ನ್ನು ಆಹ್ವಾನಿಸಬೇಕೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರ 2021ನೇ ವರ್ಷವೇ ನೀಡಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ