ಜುಲೈ 19, 2020

ಕುತೂಹಲ ಕೆರಳಿಸುವ ಅಪೂರ್ಣ ಭವ್ಯ ಭೋಜಪುರ ಶಿವಲಿಂಗ ಮಂದಿರ



ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಶಿವ ತಾಂಡವ ಸ್ತೋತ್ರವನ್ನು ಅದ್ಭುತವಾಗಿ ಹಾಡಿದ ವಿಡಿಯೋ ಒಂದು ಹರಿದಾಡಿರುವುದನ್ನು ನೀವೆಲ್ಲ ನೋಡಿದ್ದಿರಿ. ವಿಡಿಯೋ ಎಷ್ಟು ಜನರಿಗೆ ಮುಟ್ಟಿದೆ ಎಷ್ಟು ಜನ ಅದನ್ನು ವೀಕ್ಷಿಸಿ ಮೂಕವಿಸ್ಮಿತರಾಗಿದ್ದಾರೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಅನುಪಮ್ ಖೇರ್ ಅವರಿಂದ ಹಿಡಿದು ಝೀ ನ್ಯೂಸ್ ವರೆಗೆ ಚರ್ಚೆಗೆ ಗ್ರಾಸವಾಗಿದೆ. ಅದರ ಜೊತೆಗೆ ಹಲವರ ತಲೆಯಲ್ಲಿ ಕುತೂಹಲ ಕೂಡ ಮೂಡಿಸಿದ್ದು ನಿಜ. ಪೊಸ್ಟ್ ನನ್ನ ಫೇಸ್ಬುಕ್ ಪೇಜಿನಲ್ಲಿ 25 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆಫೇಸ್ ಬುಕ್ನಲ್ಲಿ ವೈರಲ್ ಆಗಿರುವ ವಿಡಿಯೋ ಅಲ್ಲದೆ ಶಿವ ತಾಂಡವ ಸ್ತೋತ್ರವನ್ನು ಹಾಡಿದ ವ್ಯಕ್ತಿ ಯಾರು ? ದೇವಸ್ಥಾನ ಎಲ್ಲಿದೆ ? ಸ್ಥಳದ ಮಹಿಮೆ ಏನೂ ? ಎಂಬ ಹಲವು ಪ್ರಶ್ನೆಗಳನ್ನೂ ಕೇಳಿದ್ದಾರೆ.  ಒಂದಿಷ್ಟು ಜನರಿಗೆ ಅಲ್ಲಿಯೇ ಚಿಕ್ಕದಾಗಿ ಉತ್ತರ ನೀಡಿದ್ದೇನೆ. ಆದರೆ ಅಷ್ಟೆ ಮಾಹಿತಿ ಸಾಕಾಗಲ್ಲ. ಯಾಕಂದರೆ ವಿಡಿಯೋ ಹಿನ್ನೆಲೆಯ ಬಗ್ಗೆ ತಿಳಿಯಬಹುದಾದ ಸಾಕಷ್ಟು ಸಂಗತಿಗಳಿವೆ. ಹಾಗಾಗಿ ಲೇಖನ.

ಮಧ್ಯಪ್ರದೇಶದ ರಾಜಧಾನಿ ಭೋಪಾಲನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಭೋಜಪುರದಲ್ಲಿ ದೇವಸ್ಥಾನ ಇದೆ. ಇದನ್ನು ಭೋಜಪುರ ಮಂದಿರ, ಭೋಜೇಶ್ವರ ಮಂದಿರ ಎಂದೆಲ್ಲ ಕರೆಯುತ್ತಾರೆ. ತುಂಬಾ ವಿಶಾಲವಾದ ದೇವಾಲಯ ಮತ್ತು ಶಿವಲಿಂಗ ಇದಾಗಿರುವುದರಿಂದ ಇಲ್ಲಿನ ಭಕ್ತಾದಿಗಳ ಪಾಲಿಗೆ ಇದು ಭಾಗದ ಸೋಮನಾಥ ಮಂದಿರ ಎಂದೇ ಪ್ರಸಿದ್ಧವಾಗಿದೆ. ಇದೇ ದೇವಸ್ಥಾನದಲ್ಲಿ ನಿಂತು ಭಕ್ತಿ ಪರವಶರಾಗಿ ಶಿವತಾಂಡವ ಸ್ತೋತ್ರವನ್ನು ಕಾಲಿಚರಣ ಮಹಾರಾಜ ಅವರು ಹಾಡುತ್ತಾರೆ.

ಶಿವಲಿಂಗ ಮಂದಿರದ ವಿಶೇಷತೆ ಎಂದರೆ ಇದು ಏಕಶಿಲಾ ಮಂದಿರ. ಇದರಲ್ಲಿರುವ ಭವ್ಯ ಮತ್ತು ವಿಶಾಲ ಶಿವಲಿಂಗ ನಮ್ಮ ದೇಶದ ಅತ್ಯಂತ ವಿಶಾಲ ಮತ್ತು ಅತ್ಯಂತ ಪ್ರಾಚೀನದ್ದಾಗಿದೆ. ದಿನ ಪೂಜೆ ಮಾಡಲು ಹೂವು ಏರಿಸಲು ಉದ್ದನೆಯ ಏಣಿ ಹತ್ತಬೇಕಾಗುತ್ತದೆ. ವಿಶಾಲ ಪ್ರಾಂಗಣ, ಭವ್ಯ ಕಂಬಗಳು ಮತ್ತು ಅದ್ಭುತವಾದ ಶಿಲ್ಪ ಕೆತ್ತನೆ ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತದೆಆದರೆ ಇಷ್ಟೆಲ್ಲ ವಿಶೇಷತೆಗಳನ್ನು ಒಳಗೊಂಡಿರುವ ದೇವಾಲಯ ತನ್ನೊಳಗೆ ಅನೇಕ ಬಿಡಿಸಲಾಗದ ರಹಸ್ಯಗಳನ್ನು ಹುದುಗಿಸಿಕೊಂಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಯಾವುದು ರಹಸ್ಯ ? ಏನೆಲ್ಲ ಸಂಗತಿಗಳಿವೆ ? ಮುಂದೆ ಓದಿ. 

ಭೋಜಪುರದಲ್ಲಿರುವ ಭವ್ಯ ಶಿವ ಮಂದಿರ ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟದ್ದು. ಹೌದು ಇದು ಅಪೂರ್ಣ ದೇವಾಲಯ. ದೇವಸ್ಥಾನವನ್ನು ನೋಡಿದಾಗ ಒಮ್ಮೆಲೆ ಇದರ ಕಟ್ಟಡ ಕಾಮಗಾರಿಯನ್ನು ಕೊನೆಗಳಿಗೆಯಲ್ಲಿ ಪೂರ್ಣಗೊಳಿಸದೆ ನಿಲ್ಲಿಸದಂತೆ ಕಾಣಿಸುತ್ತದೆ. ಆದರೆ ಯಾವ ಕಾರಣಕ್ಕಾಗಿ ಇದನ್ನು ಪೂರ್ಣಗೊಳಿಸದೇ ಉಳಿಸದರು ಎಂಬ ಬಗ್ಗೆ ಇತಿಹಾಸವನ್ನು ಕೆದಕಿ ನೋಡಿದಾಗ ಉತ್ತರ ನಿಖರವಾಗಿ ತಿಳಿದು ಬರುವುದಿಲ್ಲ. ಆದರೆ ಕೆಲವರ ಪ್ರಕಾರ ಶಿವಲಿಂಗ ಮಂದಿರದ ನಿರ್ಮಾಣ ಒಂದೇ ರಾತ್ರಿಯಲ್ಲಿ ಪೂರ್ಣಗೊಳಿಸುವ ಅನಿವಾರ್ಯತೆ ಇತ್ತು ಹೀಗಾಗಿ ಪೂರ್ಣವಾಗುವ ಮುಂಚೆ ಅಂದರೆ ದೇವಸ್ಥಾನದ ಮೇಲ್ಛಾವಣಿ ಕೆಲಸ ಶುರುಮಾಡುವ ಮುಂಚೆಯೆ ಬೆಳಗಾಗಿದ್ದರಿಂದ, ಕೆಲಸ ಎಲ್ಲಿವರೆಗೆ ಇತ್ತೋ ಅಲ್ಲಿಗೆ ಮುಗಿಸಿ ಬಿಡಲಾಯಿತು ಎನ್ನಲಾಗುತ್ತದೆ.

ಕೆಲವು ಇತಿಹಾಸಕಾರರ ಅನುಮಾನದ ಪ್ರಕಾರ ದೇವಾಲಯ ಪೂರ್ಣಗೊಳಿಸಲು ಬೇಕಾದ ಅಗತ್ಯ ಸರಕು ಸಾಮಗ್ರಿಗಳು ಅಭಾವ ಆಗಿರಬೇಕು ಅಥವಾ ನೈಸರ್ಗಿಕ ಆಪತ್ತು ಎದುರಾಗಿರಬೇಕು ಇಲ್ಲವೆ ಸಮಯ ರಾಜ್ಯದಲ್ಲಿ ಯುದ್ಧ ಆರಂಭವಾಗಿರಬೇಕು. ಹೀಗಾಗಿ ಕಾರ್ಯ ಪೂರ್ಣಗೊಳ್ಳಲಿಲ್ಲ. ಅಥವಾ ಸಮಯ ರಾಜ್ಯದ ಅಧಿಪತಿ ನಿಧನವಾಗಿರಬಹುದು ಹೀಗಾಗಿ ಕೆಲಸ ಅಲ್ಲಿಗೆ ನಿಲ್ಲಿಸಿರಬಹುದು ಎನ್ನುತ್ತಾರೆ.

ಇನ್ನು ಕೆಲವು ಪುರಾತತ್ವ ಇಲಾಖೆಯವರು ಹೇಳುವಂತೆ ದೇವಾಲಯದ ನಿರ್ಮಾಣದಲ್ಲಿ ವಾಸ್ತು-ಲೆಕ್ಕಾಚಾರ ಏರುಪೇರಾಗಿನೋ ಇಲ್ಲ ಕಾಮಗಾರಿಯಲ್ಲಿ ದೋಷ ಕಂಡುಬಂದಿದ್ದರಿಂದಲೋ ಪುನರ್ನಿರ್ಮಾಣ ಮಾಡದೆ ಅದನ್ನು ಅಲ್ಲಿಗೇ ಸ್ಥಗಿತಗೊಳಿಸಿರಲು ಬಹುದು. ಆದರೆ ಎಲ್ಲಾ ಸಂಗತಿಗಳ ಬಗ್ಗೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ. ಹೀಗಾಗಿ ನಂಬಲು ಕಷ್ಟ.

ಆದರೆ ಇಲ್ಲಿನ ಸ್ಥಳೀಯರು ಮತ್ತು ದೇವಸ್ಥಾನದ ನಿಕಟವರ್ತಿಗಳು ಹೇಳುವ ಮಾಹಿತಿಗಳೇ ಬೇರೆ. ಕುರಿತು ಎರಡು ದಂತ ಕತೆಗಳು ಇಲ್ಲಿ ಜನಜನಿತ. ಅದರಲ್ಲಿ ಒಂದು ದೇವಾಲಯವನ್ನು ಪಾಂಡವರು ತಮ್ಮ ವನವಾಸದ ಸಮಯದಲ್ಲಿ ನಿರ್ಮಿಸುತ್ತಾರೆ. ಭವ್ಯವಾದ ಶಿವಲಿಂಗದ ಮುಂದೆ ವಿಶಾಲ ಕಾಯದ ಭೀಮ ಮಂಡಿಯೂರಿ ಕುಳಿತು ಪುಷ್ಪಾರ್ಚನೆ ಮಾಡುತ್ತಿದ್ದನಂತೆ. ಪಂಚ ಪಾಂಡವರು ಮಾತೆ ಕುಂತಿಯ ಪೂಜೆಗಾಗಿ ವಿಶಾಲ ಶಿವಮಂದಿರವನ್ನು ಕೇವಲ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡುತ್ತಾರೆ. ಬೆಳಗಾಗುವವರೆಗೆ ಮಂದಿರವನ್ನು ನಿರ್ಮಿಸಿ ಬೆಳಗಾಗುತ್ತಿದ್ದಂತೆ ಎಲ್ಲಿವರೆಗೆ ಆಗಿತ್ತೋ ಅಲ್ಲಿಗೆ ಬಿಟ್ಟು ಹೊರಟುಹೋದರಂತೆ. ಹೀಗಾಗಿ ಶಿವಲಿಂಗ ಮಂದಿರ ಅಪೂರ್ಣವಾಗಿಯೇ ಉಳಿಯಿತು ಎನ್ನುವ ಪ್ರತೀತಿ ಇದೆ. ಇನ್ನೊಂದು ದಂತಕಥೆಯ ಪ್ರಕಾರ ಮಧ್ಯ ಭಾರತದ ರಾಜಾ ಭೋಜರಾಜ ಹನ್ನೊಂದನೇ ಶತಮಾನದಲ್ಲಿ ದೇವಾಲಯವನ್ನು ಕಟ್ಟಿಸದನಂತೆಈ ದೇವಸ್ಥಾನದ ವಿಡಿಯೋ ವೀಕ್ಷಿಸಿ


ಎಲ್ಲಾ ನಂಬಿಕೆ, ಊಹಾಪೋಹ, ಪ್ರತೀತಿ, ಕಾಲ್ಪನಿಕ ಕಥೆಗಳ ಮಧ್ಯೆ ವಿಶಾಲ ಮತ್ತು ಭವ್ಯ ಶಿವಲಿಂಗ ಮಂದಿರವಂತು ಈಗಲೂ ಗತಕಾಲದ ಕುರುಹಾಗಿ, ಐತಿಹಾಸಿಕ ಸ್ಮಾರಕವಾಗಿ ಎಲ್ಲರ ಆಕರ್ಷಣೀಯ ಕೇಂದ್ರವಾಗಿರುವುದಂತೂ ನಿಜ. ಅದರಲ್ಲೂ ಕಾಲಿಚರಣ್ ಮಹಾರಾಜ ಅವರು ಶಿವಲಿಂಗದ ಎದುರು ಭಕ್ತಿಪರವಶರಾಗಿ ಶಿವತಾಂಡವ ಸ್ತೋತ್ರವನ್ನು ಪ್ರಸ್ತುತಪಡಿಸುವ ಮೂಲಕ ಇಡೀ ದೇಶದ ತುಂಬಾ ಸ್ಥಳದ ಮಹಿಮೆಯನ್ನು ಅದರ ಇರುವಿಕೆಯನ್ನು ತಿಳಿಸಿದ್ದಾರೆ.

                                                                                         -ಕಾವ್ಯಾನುರಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ