ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ.
ತಮ್ಮ ಅದ್ಭುತ ಅಭಿನಯದಿಂದ ಬಹಳ ಬೇಗನೆ ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ ಖಾಸಗಿ ವಾಹಿನಿಯ ಅತ್ಯಂತ ಜನಪರೀಯಗೊಂಡ “ಪವಿತ್ರ ರಿಶ್ತಾ” ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ದೊಡ್ಡ ಮಟ್ಟದ ಜನಪ್ರೀಯತೆ ಗಳಿಸಿದ್ದರು. “ಕೈ ಪೋ ಚೇ” ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು.
ತದನಂತರ ಬಿಡುಗಡೆಯಾಗಿದ್ದ “ಶುದ್ಧ್ ದೇಶಿ ರೊಮ್ಯಾನ್ಸ್” ಚಿತ್ರದಲ್ಲಿನ ನಟನೆ ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರ ವಾಗಿತ್ತು. ಇದಾದ ಮೇಲೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧರಿತ ಚಲನಚಿತ್ರ “ಧೋನಿ ದಿ ಅನ್‍ಟೊಲ್ಡ್ ಸ್ಟೋರಿ”ಯÀಲ್ಲಿ ಧೋನಿ ಪಾತ್ರ ಮಾಡಿದರು. ಈ ಸಿನಿಮಾ ಸುಶಾಂತ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.
ಆದರೆ ಚಿತ್ರರಂಗದಲ್ಲಿ ಇನ್ನು ಬೆಳೆಯಬೇಕಾದ ಸಮಯದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ವಿಷಾದನೀಯ. ಆ ದೇವರು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಕ್ಕೆ ಶಾಂತಿ ನೀಡಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ