| ಕತ್ತಲೆಯ ದಾರಿಯನ್ನು |
| ಹಿತ್ತಲ ಬಾಗಿಲಲ್ಲಿ ನಿಂತು ನೋಡುವ ಕಣ್ಣುಗಳಿಗೆ |
| ರೆಪ್ಪೆಗಳೇಕಿವೆ ಎನ್ನುವ ಬೇಸರ ! |
| ಯಾವಾಗ ಬರುವನೋ ಇನಿಯ…. |
| ಕೈ ಹಿಡಿದು ಬರಸೆಳೆದು |
| ಅಪ್ಪಿ ಮುದ್ದಾಡಿ ಕಪ್ಪ ಕಾಣಿಕೆ ಬೇಡವೆಂದರೂ ಕೊಟ್ಟ ! |
| ಅದನ್ನೀಗ ಇಟ್ಟುಕೊಳ್ಳಲಾಗದೆ ಹಂಚುಕೊಳ್ಳೋಣವೆಂದರೆ |
| ಯಾವಾಗ ಬರುವನೋ ಇನಿಯ…. |
| ಕಣ್ಣಲ್ಲಿ ಕನಸು ಬಿತ್ತಿ, ತುಟಿ ಮೇಲೆ ಜೇನು ಸುರಿಸಿ |
| ಸಿಹಿಯ ಆರಲು ಬಿಡದೆ ಮಲ್ಲಿಗೆ ಮುಡಿಸಿ |
| ನಾ ದುಂಬಿ, ನೀ ಮಕರಂದವೆಂದು ಹೇಳಿ ಹೋದ |
| ಯಾವಾಗ ಬರುವನೋ ಇನಿಯ…. |
| ಹೃದಯದ ಬದಿಗೀಗ ಕಡ್ಡಿ ಗೀರಿಟ್ಟರೂ |
| ಅವನಪ್ಪುಗೆಯಲ್ಲಿ ಕಂಡಂತೆ ಬಿಸಿಯ ಅನುಭವಿಸಿ |
| ಕಾಯುತಿವೆ ಕಣ್ಣು ದೂರದ ದಾರಿಯಲಿ ನೆರಳನೊಂದು |
| ಅದು ಇನಿಯನದಾಗಿರಲಿ ಎಂದು…. |
ಜನವರಿ 30, 2011
ಓ ಇನಿಯಾ...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ