ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ದೇಸಿ ಪ್ರತಿಭೆ
ತುಳಜಾರಾಂಸಿಂಗ್ ಠಾಕೂರ್. “ನಿನಾಸಂ ಠಾಕೂರ್” ಎಂದೇ ಕರೆಯಿಸಿಕೊಳ್ಳುವ ಈ ಕಲಬುರಗಿಯ ಯುವಕ
ಕಲ್ಯಾಣ ಕರ್ನಾಟಕದಿಂದ ೩ ರಂಗ ಪದವಿ ಪಡೆದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಲಬುರಗಿಯಲ್ಲಿ ೧೯೮೭ರಲ್ಲಿ ಜನಿಸಿದ ತುಳಜಾರಾಮ ಸಿಂಗ್
ಠಾಕೂರ್ ಓದಿದ್ದು ಪಿ.ಯು.ಸಿ. ಶಾಲಾ ದಿನಗಳಲ್ಲಿ ಕರಾಟೆ ಮತ್ತು ಹಾಡಿನ ಸ್ಪರ್ಧೆಗಳಲ್ಲಿ
ಭಾಗವಹಿಸುತ್ತಾ ಕಲಾ ಪ್ರಪಂಚದ ಹವ್ಯಾಸವನ್ನ ಅಂಟಿಸಿಕೊಂಡವರು.
ತಂದೆ ತಾಯಿ ಕಟ್ಟಡ ಕಾರ್ಮಿಕರು. ಶಾಲೆ ಹೊಗಿದ್ದು
ಕಡಿಮೆ ತಂದೆ ತಾಯಿಯೊಂದಿಗೆ ಕೆಲಸ ಮಾಡಿದ್ದೆ ಹೆಚ್ಚು. ಕೆಲಸ ಮಾಡುವಾಗ ಅಧಿಕಾರಿಯೊಬ್ಬರ
ಮಾರ್ಗದರ್ಶನದಂತೆ ನಾಟಕ ಪ್ರಪಂಚಕ್ಕೆ ಕಾಲಿಟ್ಟರು.
ನಂತರ ರಂಗ ಶಿಕ್ಷಣ ಡಿಪ್ಲೋಮಾವನ್ನು ನೀನಾಸಂ, ಸಾಣೆಹಳ್ಳಿ ಹಾಗೂ ಎನ್‌ಎಸ್‌ಡಿ ಬೆಂಗಳೂರು ಚಾಪ್ಟರ್ ರಂಗ ಶಾಲೆಗಳಲ್ಲಿ
ಸೇರಿ ಅಭಿನಯ ಮತ್ತು ರಂಗ ಪರಿಕರಗಳ ಎಲ್ಲಾ ವಿಭಾಗದ ತರಬೇತಿಯನ್ನೂ ಪಡೆದುಕೊಳ್ಳುತ್ತಾರೆ.
ನಾಟಕಗಳಲ್ಲಿ ಅಭಿನಯಿಸುತ್ತ ನಾಟಕ ನಿರ್ದೇಶಕನಾಗಿ, ತಂತ್ರಜ್ಞನಾಗಿ, ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟನಾಗಿ ಅಭಿನಯಿಸುತ್ತಿದ್ದಾರೆ. ಸುಮಾರು ೧೭ ವರ್ಷಗಳಿಂದ
ಹವ್ಯಾಸಿ ಮತ್ತು ರಂಗಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ನಟನೆಯೊಂದಿಗೆ ಕಳಾರಿ ಯುದ್ಧ ಕಲೆ, ಮಾರ್ಶ್ಯಲ್ ಆರ್ಟ್, ಕಂಸಾಳೆ, ಕೋಲಾಟ, ಸಂಗೀತ ನಿರ್ದೇಶನ, ನಾಟಕ ನಿರ್ದೇಶನ, ಬೆಳಕಿನ ವಿನ್ಯಾಸ, ಕಾರ್ಯಕ್ರಮ ಸಂಯೋಜನೆ ಕೂಡಾ ಕರಗತ ಮಾಡಿಕೊಂದಿದ್ದಾರೆ.
೨೦೦೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಬೆಂಗಳೂರು ಗುಲಬರ್ಗಾದಲ್ಲಿ ನಡೆಸಿದ ಜಾನಪದ ಸಮಾವೇಶ ೨೦೦೬ ಕಾರ್ಯಕ್ರಮದಲ್ಲಿ ಜಾನಪದ ಕಲೆ
ಪ್ರದರ್ಶನ.
೨೦೦೭-೦೮, ೨೦೦೮-೦೯ನೇ ಸಾಲಿನಲ್ಲಿ ಸತತವಾಗಿ ೨ ವರ್ಷಗಳ ಕಾಲ ಸಮುದಾಯ ಸಾಂಸ್ಕöÈತಿಕ ಸಂಘಟನೆ ಏರ್ಪಡಿಸಿದ “ಚಿಣ್ಣರ ಚಿನ್ಮೇಳ” ಮಕ್ಕಳ ಬೇಸಿಗೆ
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ.
೨೦೦೭ರಲ್ಲಿ ಭಾರತ ಸರಕಾರದ ಧ್ವನಿ ಮತ್ತು ಬೆಳಕು
ವಿಭಾಗದ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಿದ “ಕರ್ನಾಟಕ ವೈಭವ” ಕಾರ್ಯಕ್ರಮದಲ್ಲಿ ೮ ಪ್ರಮುಖ
ಪಾತ್ರಗಳಲ್ಲಿ ಅಭಿನಯ.
೨೦೦೮ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ರಂಗಾಯಣ
ಧಾರವಾಡ ಘಟಕ ಆಯೋಜಿಸಿದ “ಯುವರಂಗ ಸಾಂಸ್ಕöÈತಿಕ ಕಾರ್ಯಾಗಾರ”ದಲ್ಲಿ “ತಾಜಮಹಲ್ ಟೆಂಡರ್” ನಾಟಕದಲ್ಲಿ ಅಭಿನಯ.
೨೦೦೮ರಲ್ಲಿ ಕರ್ನಾಟಕ ಸರಕಾರ ವಾರ್ತಾ ಇಲಾಖೆ ಬೆಂಗಳೂರು
ನಡೆಸಿದ “ಮನುಷ್ಯ ಜಾತಿ ತಾನೊಂದೇ ವಲಂ”ನ ಧ್ವನಿ-ಬೆಳಕು ದೃಶ್ಯ ವೈಭವ ಕಾರ್ಯಕ್ರಮದಲ್ಲಿ ಕೆಲಸ
ನಿರ್ವಹಣೆ
೨೦೦೮ರಲ್ಲಿ ಬೆಳಗಾವಿಯಲ್ಲಿ ನಡೆದ “ಮಳೆಬಿಲ್ಲು
ಫೆಸ್ಟಿವಲ್”ನಲ್ಲಿ ನಾಟಕಗಳಿಗೆ ಬೆಳಕಿನ ನಿರ್ವಹಣೆ.
೨೦೧೦ರಲ್ಲಿ ಪಾಂಡಿಚರಿಯಲ್ಲಿ ಇರುವ ಆದಿ ಶಕ್ತಿಯಲ್ಲಿ
ನಡೆಸಿದ ವಿಶೇಷ ನಟನಾ ತರಬೇತಿ ಕಾರ್ಯಾಗಾರದಲ್ಲಿ ವೀಣಾ ಪಾಣಿಚಾಲ್ವಾರಿಂದ ಒಂದು ವಾರ ತರಬೇತಿ
೨೦೧೦ರಲ್ಲಿ ಶ್ರೀ ಶಿವಕುಮಾರ ಕಲಾ ಸಂಘ (ರಿ) ಮತ್ತು
ರಂಗ ಪ್ರಯೋಗಶಾಲೆ ಸಾನಿಹಳ್ಳಿ ವತಿಯಿಂದ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಸಂಪನ್ಮೂಲ
ವ್ಯಕ್ತಿ ಮತ್ತು ಬೆಳಕಿನ ವಿನ್ಯಾಸ ಕಾರ್ಯನಿರ್ವಹಿಸಿದ್ದೇನೆ.
೨೦೧೦ರಲ್ಲಿ ೨೨-೨೭ ಜೂನ್ ರಾಷ್ಟ್ರೀಯ ನಾಟಕ ಶಾಲೆ
ಬೆಂಗಳೂರು ಮತ್ತು ಸಂಚಯ ಬೆಂಗಳೂರು ವತಿಯಿಂದ ನಡೆದ ಬೆಳಕಿನ ವಿನ್ಯಾಸ ತರಬೇತಿ ಶಿಬಿರದಲ್ಲಿ
ತರಬೇತಿ
೨೦೧೦ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು
ಚಾಪ್ಟರ್ ವತಿಯಿಂದ ನಡೆದ ೩ ತಿಂಗಳವರೆಗಿನ ರಂಗ ತರಬೇತಿ (ಅಭಿನಯ) ಶಿಬಿರದಲ್ಲಿ
ಭಾಗವಹಿಸಿರುತ್ತೇನೆ.
೨೦೧೧ರಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು
ಚಾಪ್ಟರ್ ವತಿಯಿಂದ ನಡೆದ ೩ ತಿಂಗಳವರೆಗಿನ ರಂಗ ತರಬೇತಿ (ರಂಗ ತಂತ್ರ) ಶಿಬಿರದಲ್ಲಿ
ಭಾಗವಹಿಸಿರುತ್ತೇನೆ.
೦೭-೧೩ ಅಕ್ಟೋಬರ್ ೨೦೧೨ರಲ್ಲಿ ನೀನಾಸಂ ಸಾಂಸ್ಕöÈತಿಕ ಶಿಬಿರದಲ್ಲಿ ಭಾಗಿ.
೨೦೧೨-೧೩ರಲ್ಲಿ ಬುದ್ಧ ವಿಹಾರ ಗುಲಬರ್ಗಾದ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿನ ಎರಡು ನಾಟಕಗಳಿಗೆ ಬೆಳಕಿನ ವಿನ್ಯಾಸ ಮತ್ತು
ನಿರ್ವಹಣೆ.
೨೦೧೩-೧೪ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದ
ಕಾರ್ಯಕ್ರಮಗಳಾದ ಶಾಲೆ ಬಿಟ್ಟ ಮಕ್ಕಳಿಗೆ ಶಾಲೆಗೆ ಸೇರಿಸಿ, ವಿಶೇಷ ದಾಖಲಾತಿ ಆಂದೋಲನದಂತಹ ಕಾರ್ಯಕ್ರಮಗಳಿಗೆ ಬೀದಿ ನಾಟಕಗಳ ಮುಖಾಂತರ ಜನತೆಯಲ್ಲಿ ಅರಿವು
ಮೂಡಿಸಲಾಯಿತು.
೨೦೧೩-೧೪ನೇ ಜಿಲ್ಲಾ ವಿಜ್ಞಾನ ಕೇಂದ್ರ ಮತ್ತು ಡೈಯಟ್
ಕಮಲಾಪೂರ (ಗುಲಬರ್ಗಾ)ದ ಸಹಯೋಗದಲ್ಲಿ ನಡೆದ ಶಾಲಾ ಮಕ್ಕಳಿಗಾಗಿ “ವಿಜ್ಞಾನ ನಾಟಕ ಸ್ಪರ್ಧೆ”
ಏರ್ಪಡಿಸಲಾಗಿತ್ತು. ತಾಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಮುಖ್ಯ ತೀರ್ಪುಗಾರನಾಗಿ
ಕಾರ್ಯ ನಿರ್ವಹಣೆ.
ನಟನಾಗಿ ಅಭಿನಯಿಸಿದ ಪ್ರಮುಖ ನಾಟಕಗಳು:
೧. “ಭಾರತ ಯಾತ್ರೆ” ನಿರ್ದೇಶಕರು: ಕೆ. ವಿ. ಅಕ್ಷರ
(ಎನ್. ಎಸ್. ಡಿ)
೨. “ಉತ್ತರಾಮ ಚರಿತ್ರೆ” ನಿರ್ದೇಶಕರು: ಚಿದಂಬರ್ ರಾವ್
ಜಂಬೇ (ಎನ್. ಎಸ್. ಡಿ.)
೩. “ಕತ್ತಲೆಗೆ ಹತ್ತು ತಲೆ” ನಿರ್ದೇಶಕರು: ಚಿದಂಬರ್
ರಾವ್ ಜಂಬೇ (ಎನ್. ಎಸ್. ಡಿ.)
೪. “ಈ ಕೆಳಗಿನವರು” ನಿರ್ದೇಶಕರು: ಬಿ. ಆರ್.
ವೆಂಕಟರಮಣ ಐತಾಳ
೫. “ತಾಜ್ ಮಹಲ್ ಟೆಂಡರ್” ನಿರ್ದೇಶಕರು: ಸಿ.
ಬಸವಲಿಂಗಯ್ಯ (ಎನ್. ಎಸ್. ಡಿ.)
೬. “ವಿಜಯ ನರಸಿಂಹ” ನಿರ್ದೇಶಕರು: ಮಂಜು ಕೊಡಗು
೭. “ಹರೀಶ ಚಂದ್ರ ಕಾವ್ಯ” ನಿರ್ದೇಶಕರು: ಮಹಾಬಲೇಶ್ವರ
(ಕೆ. ಜಿ. ಎಂ.)
೮. “ಚರಿ ಹಣ್ಣಿನ ತೋಟ” ನಿರ್ದೇಶಕರು: ಭಾರುಲ್ ಇಸ್ಲಾಂ
(ಎನ್. ಎಸ್. ಡಿ.)
೯. “ಅಗ್ನಿ ಮತ್ತು ಮಳೆ” ನಿರ್ದೇಶಕರು: ಸುರೇಶ
ಆನಗಳ್ಳಿ (ಎನ್. ಎಸ್. ಡಿ.)
೧೦. “ಸೀತಾ ಸ್ವಯಂವರ” ನಿರ್ದೇಶಕರು: ಮಂಜು ಬಡಿಗೇರ
೧೧. “ಶೇಕ್ಸ್ಪಿಯರ್‌ನ ಪುಟಗಳು” ನಿರ್ದೇಶಕರು: ದೇಶಿಕ್ ವಾನ್ಸಾದಿಯಾ (ಗುಜರಾತ)
೧೨. “ಮನುಷ್ಯನ ನೆರಳು” ನಿರ್ದೇಶಕರು: ತಲೇಕಾಡು
ಗುರುರಾಜ
೧೩. “ಕ್ರಮ-ವಿಕ್ರಮ” ನಿರ್ದೇಶಕರು: ನಟರಾಜ ಹೊನ್ನಳಿ
೧೪. “ರಾವಿ ನದಿಯ ದಂಡೆಯಲ್ಲಿ” ನಿರ್ದೇಶಕರು:
ಶಂಕ್ರಯ್ಯ ಆರ್. ಘಂಟಿ
೧೫. “ಸುಲ್ತಾನ್ ಟಿಪುö್ಪ” ನಿರ್ದೇಶಕರು: ವಾಸುದೇವ ಗಂಗೇರ
೧೬. “ಗಾಂಧಿ ಪಾರ್ಕ್” ನಿರ್ದೇಶಕರು: ಸುಷ್ಮಾ
ಬೆಂಗಳೂರು
೧೭. “ಅಲೆಗಳಲ್ಲಿ ರಾಜಹಂಸ” ನಿರ್ದೇಶಕರು: ಮಹಾದೇವ
ಹಡಪದ
೧೮. “ಏಕಲವ್ಯ” ನಿರ್ದೇಶಕರು: ಶಿವಶಂಕರ
೧೯. ಭೋಳೆಶಂಕರಯ್ಯ ನಿರ್ದೇಶಕರು: ಶಿವಶಂಕರ
೧. ಏಕಲವ್ಯ (ನೀನಾಸಂ ಠಾಕೋರ)
೨. ಬೆಪ್ಪುತಕ್ಕಡಿ ಭೋಳೆಶಂಕರ (ನೀನಾಸಂ ಠಾಕೋರ)
೩. ಸಾಕ್ರಟೆಸ್ (ನೀನಾಸಂ ಠಾಕೋರ)
೪. ಓಥೇಲೊ (ನೀನಾಸಂ ಠಾಕೋರ)
೫. ಸತ್ರು ಅಂದ್ರೆ ಸಾಯ್ತಾರ? (ನೀನಾಸಂ ಠಾಕೋರ)
೬. ಪ್ರೀತಿಯ ಕಾಳು (ನೀನಾಸಂ ಠಾಕೋರ)
ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಮಾಡಿದ ಪ್ರಮುಖ ನಾಟಕಗಳು:
೧. ಹುಟ್ಟುದ್ದು ಹೋಲೆಯುರು
೨. ಕುಲಂ
೩. ಸೀತಾ ಸ್ವಯಂವರ
೪. ಸುಜಾತಾ ಕೀ ಖೀರ್
೫. ಅಹಿಂಸಕ
೬. ಪದ್ಮಪಾಣಿ
೭. ಮಾಂಟೋನ ಕಥೆಗಳು
೮. ಏಕಲವ್ಯ
೯. ಭೋಳೆಶಂಕರ
೧೦. ಸಾಕ್ರೇಟಿಸ್
೧೧. ಸನ್ಮಾನ್ಯ ಸಚಿವರ ಸಾವು
೧೨. ಒಥೇಲೊ
೧೩. ಯುಗಾಂತರ
೧೪. ಸತ್ರು ಅಂದ್ರೆ ಸಾಯ್ತಾರ?
೧೫. ಪ್ರೀತಿಯ ಕಾಳು
೧೬. ಬೋಧಿ ಜ್ಞಾನಾಮೃತ
೧೭. ಪುಷ್ಪರಾಣಿ
೧೮. ಬೆಟ್ಟಗಳು ನಡೆದಾವ
ಕಿರುತೆರೆಯಲ್ಲಿ ಅಭಿನಯಿಸಿದ ಪ್ರಮುಖ ಧಾರಾವಾಹಿಗಳು:
೧. “ಸ್ವಾತಿ ಮುತ್ತು” ನಿರ್ದೇಶಕರು: ದಿನೇಶಬಾಬು
೨. “ರಾಘವೇಂದ್ರ ವೈಭವ” ನಿರ್ದೇಶಕರು: ಬಾಲಾ ಸುರೇಶ್
೩. ಸೀತೆ
೪. “ಸಾಯಿ ಬಾಬಾ” ನಿರ್ದೇಶಕರು: ವಾಸು
ಬೆಳ್ಳಿತೆರೆಯಲ್ಲಿ ಅಭಿನಯಿಸಿದ ಪ್ರಮುಖ ಚಲನಚಿತ್ರಗಳು:
೧. "ರಣಚಂಡಿ" ನಿರ್ದೇಶಕರು: ಆನಂದ ಪಿ. ರಾಜು
೨. "ಜ್ವಲತಂ" ನಿರ್ದೇಶಕರು: ಅಂಬ್ರೀಶ
೩. "ಜೀವನ" ನಿರ್ದೇಶಕರು: ಪ್ರವೀಣ ರಾಜ
೪. "ಶಿವಕಾಶಿ" ನಿರ್ದೇಶಕರು: ರಾಜು
೫. "ಪ್ರೇಮಂ ಚಿರಂ" ನಿರ್ದೇಶಕರು:
ಶ್ರೀನಿವಾಸ
ರಣಚಂಡಿ, ಜ್ವಲತಂ, ಜೀವನ, ಶಿವಕಾಶಿ ಚಿತ್ರಗಳಲ್ಲಿ ಖಲನಟನಾಗಿ ಮತ್ತು ಪ್ರೇಮಂ ಚಿರಂ ಚಿತ್ರದಲ್ಲಿ ನಾಯಕ ನಟನಾಗಿ
ಅಭಿನಯಿಸಿದ್ದಾರೆ.
ತಮ್ಮ ತಂದೆ-ತಾಯಿಯರನ್ನು ದೊಡ್ಡ ವೇದಿಕೆಯಲ್ಲಿ
ನಿಲ್ಲಿಸಬೇಕೆನ್ನುವುದು ಇವರ ದೊಡ್ಡ ಆಸೆ. ಆದರೆ ತಂದೆ ಅಗಲಿ ಎರಡುವರೆ ವರ್ಷ ಆಯಿತು.
ತಾಯಿಯನ್ನಾದರೂ ದೊಡ್ಡ ವೇದಿಕೆಗೆ ಕರೆದುಕೊಂಡು ಹೋಗಬೇಕೆಂಬ ಮಹಾದಾಸೆಯಿಟ್ಟಕೊಂಡು ಬಿಗ್‌ಬಾಸ್
ಸೀಸನ್ ೯ರಲ್ಲಿ ಸ್ಪರ್ಧಿಯಾಗಿ ಹೋಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟನೆ, ನಿರ್ದೇಶನ ಮತ್ತು ವಿವಿಧ ಪ್ರಕಾರಗಳಲ್ಲಿ ಕಲಾ ಸೇವೆ ಮಾಡುತ್ತ ಕಲಿಯುತ್ತಿರುವ ವಿದ್ಯಾರ್ಥಿ
ನಾನು. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಮತ್ತು ಆಶೀರ್ವಾದ
ಸದಾ ಹೀಗೆ ಇರಲಿ ಎಂದು ವಿನಮ್ರತೆಯಿಂದ ಹೇಳುತ್ತಾರೆ. ಇಂಥ ಅಪರೂಪದ ಕಲ್ಯಾಣ ಕರ್ನಾಟಕದ
ಪ್ರತಿಭೆಗೆ ನಾವೆಲ್ಲರೂ ಬೆಂಬಲಿಸೋಣ. ಅವರ ಆಸೆ ಕನಸುಗಳು ಈಡೇರಲಿ ಎಂದು ಹಾರೈಸೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ