ಜನವರಿ 30, 2021

ಅಮ್ಮ ನಾ ಬಂದೆ

 ಇದು ಪುಟ್ಟ ಬಾಲಕನೊಬ್ಬನ ಒಂದು ದಿನದ ದುಡಿಮೆಯ ಕಥೆ.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆಯುವ ಮಕ್ಕಳ ಕಥೆ ಇದು. ಸರಕಾರಿ ಶಾಲೆಯಲ್ಲಿ ಓದುತ್ತ ದಿನಗೂಲಿ ಮಾಡಿ ಅಪ್ಪ ಅಮ್ಮನ ಒಂದು ದಿನದ ಬಡತನ ನೀಗಿಸೊ ಪುಟಾಣಿಗಳ ಅತ್ಯದ್ಭುತ ನೋಟವೊಂದು ನಾನು ಗಮನಿಸಿದೆ. ಅದನ್ನು ನಿಮ್ಮ ಗಮನಕ್ಕೂ ತರುಲೆಂದು ಹೊರಟಿರುವ ನನ್ನದೊಂದು ಸಣ್ಣ ಪ್ರಯತ್ನ ಲೇಖನ.

ಮಕ್ಕಳು ದೇವರ ಸಮವೆಂದೇ ಹೇಳುವ ನಮ್ಮ ಸಮಾಜ ಮಕ್ಕಳು ಸರಿ ಇಲ್ಲ ಎಂದು ಕೂಡಾ ಹೇಳುತ್ತದೆ. ಯಾವ ಮಗುವಿಗು ತಾನು ಬೆಳೆಯುತಿರುವ ರೀತಿಯ ಬಗ್ಗೆ ಅರಿವು ಇರುವುದಿಲ್ಲ. ಬೆಳಿತಾ ಹೋದಂತೆ ತಪ್ಪು ಸರಿಗಳ ಅರಿವಾಗತೊಡಗುವುದು. ಆದರೆ ಅಲ್ಲಿಯ ತನಕ ತಾನು ಬೆಳೆಯುವ ರೀತಿಯೇ ಬದಲಾಗಿರುತ್ತದೆ. ಮತ್ತೊಬ್ಬರ ಬದುಕು ನೋಡಿ ನಾನ್ಯಾಕೆ ಹೀಗಿಲ್ಲ, ನನ್ನ ಬದುಕು ಏಕೆ ಅವರಂತಿಲ್ಲ, ನನ್ನ ಅಪ್ಪ ಅಮ್ಮ ನನಗ್ಯಾಕೆ ಏನು ಕೊಡಿಸೊದಿಲ್ಲ ಅನ್ನೊ ಆಲೋಚನೆಗೆ ಮಕ್ಕಳು ಒಳಗಾಗುತ್ತಾರೆ.

ಆಗ ಮಕ್ಕಳು ಪ್ರಶ್ನಿಸತೊಡಗುತ್ತಾರೆ ಅಮ್ಮ ನಾವ್ಯಾಕ್ ಹೀಗೆ ಅವರೆಲ್ಲಾ ಎಷ್ಟು ಚೆನ್ನಾಗಿರುವರಲ್ಲ ನಮ್ಮಲ್ಲಿ ಏನು ಕೊರತೆ ಇದೆ ಎಂದು ಕೇಳಿದಾಗ ಬಹಳಷ್ಟು ತಂದೆ ತಾಯಿಂದರು ಮಕ್ಕಳಿಗೆ ಸರಿಯಾದ ಉತ್ತರವೇ ನೀಡುವುದಿಲ್ಲ. ಬದಲಿಗೆ ಮಕ್ಕಳನ್ನು ನಿರಾಶರನ್ನಾಗಿಸುವರು. ಹೀಗಾಗಿ ತುಂಬಾ ಮಕ್ಕಳು ದುಡ್ಡೆ ಜೀವನ ಎಂದು ತಪ್ಪು ದಾರಿಯಲಿ ನಡೆಯುದು ಸಹಜ. ಕಳ್ಳತನ, ದರೋಡೆ, ಜೂಜಾಟ ಇತರೆ ಹಲವು ಚಟಕ್ಕೆ ಒಳಗಾಗುವರು.

ನಿಮ್ಮ ಮಕ್ಕಳು ನಿಮ್ಮವರಾಗಿ ಉಳಿದು ನಿಮ್ಮ ಕಷ್ಟ ಸುಖದಲ್ಲಿ ಜೊತೆ ನಿಲ್ಲಬೇಕೆಂದರೆ ಒಳ್ಳೆಯ ಸಂಸ್ಕಾರ ಕೊಡಿ. ಬಡತನ ಸಿರಿತನ ಇದೆಲ್ಲ ಕಾಲಕ್ಕೆ ತಕ್ಕಹಾಗೆ ಬದಲಾಗುವುದು. ಆದರೆ ನೀವು ಬೆಳೆಸುವ ನಿಮ್ಮ ಮಕ್ಕಳು ನಿಮಗೆ ವಿರುದ್ಧವಾಗಿ ನಿಲ್ಲದೆ ನಿಮ್ಮ ಜೊತೆ ನಿಲ್ಲುವಂತೆ ಮಾಡಲು ನಿಮಗೆ ಮಾತ್ರ ಸಾಧ್ಯ.

ನಾನು ಇವತ್ತು ಕಂಡ ಒಂದು ಅದ್ಭುತ ನೋಟ ಪುಟ್ಟ ಬಾಲಕನೊಬ್ಬ ಸರಕಾರಿ ಶ್ಯಾಲೆಯಲ್ಲಿ ಒದುತ್ತ ಅಪ್ಪನ ಜೊತೆ ಆಗಾಗ ಇಟ್ಟಿಗೆ ಇಳಿಸುವ ಕೆಲಸಕ್ಕೆ ಹೋಗಿ ಅಪ್ಪ ಅಮ್ಮನನ್ನು ಸಹಾಯ ಮಾಡುತಿರುವ ದೃಶ್ಯ. ಅದು ನಿಜಕ್ಕೂ ಮನಕಲಕುವ ನೋಟವಾಗಿತ್ತು.

ತಾನು ಚೆನ್ನಾಗಿ ಒದಿ ಒಳ್ಳೆಯ ಹುದ್ದೆಗೆ ಸೇರಿಕೊಂಡು ಅಪ್ಪ ಅಮ್ಮನನ್ನು ಮುಂದೊಂದಿನ ತನ್ನದೆಯಾದ ಮನೆಯಲ್ಲಿರಿಸಿ ಖುಷಿಯಿಂದ ನೋಡಿಕೊಳ್ಳುವ ಪುಟ್ಟ ಬಾಲಕನದು ಒಂದು ಕನಸು. ಹೀಗೆ ಹಲವಾರು ಮಕ್ಕಳು ತಮ್ಮದೆಯಾದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಸರಿಯಾದ ಮಾರ್ಗದರ್ಶನ ಸಿಗದೆ ಕುಗ್ಗಿಹೊಗುತ್ತಾರೆ. ಬಡತನವೆ ನಮ್ಮ ಸ್ವತ್ತು ಅಂತ ತಿಳಿದು ತಂದೆ ತಾಯಿ ಮಕ್ಕಳ ಭವಿಷ್ಯವನ್ನೆ ಮರೆತು ಬಿಡುತ್ತಾರೆ. ಇದು ಒಂದು ಅಂಥದ್ದೆ ಕಥೆಯಾಗಿದೆ.

ಪುಟ್ಟ ಬಾಲಕ ಅಪ್ಪನ ಜೊತೆ ಶಾಲೆಗೆ ರಜೆ ಇದ್ದ ಕಾರಣ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿದ್ದ. ಅಪ್ಪ ಕೆಲಸ ಮಾಡುವುದನ್ನು ನೋಡಿ ತಾನು ಕೆಲಸಮಾಡತೊಡಗಿದ. ದಿನವಿಡಿ ಇಟ್ಟಿಗೆ ಇಳಿಸುವ ಕೆಲಸ ಮಾಡಿ ಸಾಯಂಕಾಲ ಮನೆಗೆ ಹೋದ ಕೂಡಲೆ ಖುಷಿಯಿಂದ "ಅಮ್ಮ ನಾನು ಬಂದೆ" ಎಂದು ತನ್ನ ದಿನಗೂಲಿಯನ್ನು ಅಮ್ಮನ ಕೈಯಲಿಟ್ಟ.

ಪುಟ್ಟ ಬಾಲಕನ ತಾಯಿ ಒಂದುಕ್ಷಣ ಮೌನಳಾಗಿ ಆನಂದಭಾಸ್ಪ ಸುರಿಸಿದಳು.

ಆದರೆ ಮುಂದೆ...

ದುಡ್ದಿನ ಹಂಬಲಕ್ಕೆ ಬಿದ್ದು ದುಡ್ಡು ಬೇಕಾದಗೆಲ್ಲ ಬಾಲಕನ ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸತೊಡಗಿದರು. ಹೀಗೆ ತುಂಬಾ ತಂದೆ ತಾಯಂದಿರು ಮಾಡುವ ತಪ್ಪುಗಳು ಮಕ್ಕಳ ಭವಿಷ್ಶಕ್ಕೆ ಮಾರಕಾವಗುವುದು. ಕಷ್ಟದ ದಿನಗಳನ್ನು ಸಹಿಸಿಕೊಂಡು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದರಿಂದ ಮಕ್ಕಳ ಉಜ್ವಲ ಭವಿಷ್ಶದ ಜೊತೆಗೆ ನಿಮ್ಮ ಮುಂದಿನ ಬದುಕು ಸರಳವಾಗಿರುವುದು ಎನ್ನುವುದು ನನ್ನ ಅಭಿಮತ. ನೀವೇನಂತಿರಿ ?

 

ಅಶ್ವಿನಿ ಎನ್. ಕೆಸರಟ್ಟಿ

1 ಕಾಮೆಂಟ್‌: