ಯುಗಾದಿಯ ಮಂದಾನಿಲ ಬೀಸುತ್ತಿದೆ
ಮರಗಿಡ ಬಳ್ಳಿಗಳಿಂದ
ಹಸಿರು ಚೇತನವಾಗಿ
ಪುಷ್ಪದುಸಿರು ಹೇಳುತ್ತಿದೆ
ಆವಣಿಯ ಆಲಂಗಿಸಿ ಆಗಮಿಸಿದೆ ಯುಗಾದಿ...
ಯುಗಾದಿಯ ಮಂದಾನಿಲ ಬೀಸುತ್ತಿದೆ
ಇಂಚರದ ಕೊರಳಿಂದ
ಆಹ್ಲಾದದ ಆಹ್ವಾನವಿತ್ತು
ಮಯೂರ ಸಾಂಗತ್ಯದ
ಸಾಂವತ್ಸರ 'ಸಂಗೀತ ಸಂಜೆ' ಸವಿಯುವ...
ಯುಗಾದಿಯ ಮಂದಾನಿಲ ಬೀಸುತ್ತಿದೆ
ಬೇವುಬೆಲ್ಲ ಸಿಹಿಕಹಿ
ಸುಖದುಖಃ ಸಮರಸದಲಿ
ಜೀವನ ಸಾಗುತಲಿರಲಿ
ಯುಗಾಂತ ಯುಗಾಂತರ ಯುಗಾದಿ ಚಕ್ರದಲ್ಲಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ