ಎರಡು ದಶಕಗಳ ಹಿಂದೆ ಪ್ರಾರಂಭವಾದ ಸಂಸ್ಥೆಯೊಂದು ಇಂದು ತಂತ್ರಜ್ಞಾನ, ರೂರಲ್ ಮಾರ್ಕೇಟಿಂಗ್ ಮತ್ತು ಡಿಜಿಟಲ್ ಮೀಡಿಯಾ ಕ್ಷೇತ್ರಗಳಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಭಾರತದಲ್ಲೂ ಮತ್ತು ವಿದೇಶದಲ್ಲೂ ಬೆಳೆದು ನಿಂತಿದೆ. ಅದುವೇ ವೃತ್ತಿ ಸೊಲ್ಯೂಶನ್ಸ್ ಲಿಮಿಟೆಡ್. ಈ ಸಂಸ್ಥೆಗೀಗ ಇಪ್ಪತ್ತರ ಹರೆಯ.
ಚಿಕ್ಕ ಉದ್ಯಮಗಳಿಗೆ ತಾಂತ್ರಿಕ ನೆರವು ನೀಡಲು ಆರಂಭವಾದ ಈ ಸಂಸ್ಥೆ, ಕಾಲಕ್ರಮೇಣ ತನ್ನ ಕ್ಷೇತ್ರವನ್ನು ಅಗಲಿಸಿಕೊಂಡು ಈಗ ಮಧ್ಯಮ ಹಾಗೂ ಬೃಹತ್ ಉದ್ಯಮದ ಇಂಟಿಗ್ರೇಟೆಡ್ ಸಾಫ್ಟ್‌ವೇರ್ ಸೊಲ್ಯೂಶನ್ಸ್, ಗ್ರಾಮೀಣ ಜಾಹೀರಾತು ಮಾಧ್ಯಮ ಮತ್ತು ಬಾಹ್ಯ ಜಾಹೀರಾತು ವಲಯಗಳಲ್ಲಿ ವಿಶಿಷ್ಟ ಹೆಜ್ಜೆ ಇಡುವುದರ ಮೂಲಕ ವಿಶಾಲವಾಗಿ ಬೆಳೆದಿದೆ.
ವೃತ್ತಿ ಸೊಲ್ಯೂಶನ್ಸ್ ಲಿಮಿಟೆಡ್ ನ ಸಿಇಒ ಶ್ರೀ ವೀರೇಂದ್ರ ಜಮ್ದಡೆ, 30ಕ್ಕೂ ಹೆಚ್ಚು ವರ್ಷಗಳ ಅನುಭವದೊಂದಿಗೆ ಸಂಸ್ಥೆಯನ್ನು ಮುನ್ನಡೆಸುತ್ತ ನವೋದ್ಯಮಗಳಿಗೆ ಡಿಜಿಟಲ್ ಶಕ್ತಿ ನೀಡಿ ಸಂಸ್ಥೆಯನ್ನು ಯುಎಇ ಸೇರಿದಂತೆ ವಿದೇಶಿ ಮಾರುಕಟ್ಟೆಗೆ ಕರೆದೊಯ್ಯುವ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ನಿರ್ದೇಶಕಿಯಾಗಿರುವ ಶ್ರೀಮತಿ ಸಂಗೀತಾ ಜಮ್ದಾಡೆ ಅವರು, ವೃತ್ತಿ ಸಂಸ್ಥೆಯ ಮೊದಲ ಬಿಸಿನೆಸ್ ಡೆವಲಪ್ಮೆಂಟ್ ವ್ಯಕ್ತಿಯಾಗಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ವೃತ್ತಿ ಸೊಲ್ಯೂಶನ್ಸ್ ಲಿಮಿಟೇಡನ್ನು ವೃತ್ತಿ ಅನ್ ಲಿಮಿಟೆಡ್‌ಗೆ ಬದಲಾಯಿಸಿದ ಪ್ರಖರ ಬೆಳಕಾಗಿದ್ದಾರೆ.
ಸಹ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷರಾಗಿರುವ ಶ್ರೀ ರಾಜೇಶ್ ರಾಧಾಕೃಷ್ಣನ್ ಅವರು ಗ್ರಾಮೀಣ ಜಾಹೀರಾತು ಕ್ಷೇತ್ರದಲ್ಲಿ ಕ್ರಾಂತಿಕಾರಿ ದೃಷ್ಟಿಕೋನದಿಂದ ಹಲವು ಬ್ರ್ಯಾಂಡ್ಗಳಿಗೆ ವೆಚ್ಚ ಕೇವಲ 1 ಪೈಸೆ ಒಬ್ಬ ವ್ಯಕ್ತಿಗೆ ಮಾತ್ರ ಎಂಬ ತಂತ್ರ ರೂಪಿಸಿ ಫೋರ್ಬ್ಸ್ ಇಂಡಿಯಾದಿಂದ 2023ರಲ್ಲಿ ಗ್ಲೋಬಲ್ ಗ್ರೋಥ್ ಕಂಪನಿಯ ಮಾನ್ಯತೆ ಲಭಿಸುವಂತೆ ಮಾಡಿದರು.
ಗ್ರಾಮೀಣ ಜಾಹೀರಾತು ಮತ್ತು ಮಾರ್ಕೆಟಿಂಗ್‌ನಲ್ಲಿ 18 ವರ್ಷಗಳ ಅನುಭವಿ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿರುವ ಶ್ರೀ ಶಿವಾಜಿ ಬೇದ್ರೆ ಅವರು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ LED ಆಧಾರಿತ ಜಾಹೀರಾತು ವ್ಯವಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು.
ಇವರೊಂದಿಗೆ ಇನ್ನೊರ್ವ ಉಪಾಧ್ಯಕ್ಷರಾಗಿರುವ ಶ್ರೀ ಜೀವನ್ ಪವಾರ್ ಅವರು ದಕ್ಷಿಣ ಭಾರತದ ಎಲ್ಲಾ ಯೋಜನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಾ, "ಆಡಿಯೋವಾಲಾ ಬಸ್ ನಿಲ್ದಾಣ’" ಎಂಬ ಪರಿಕಲ್ಪನೆಯಲ್ಲಿ ವಿಶಿಷ್ಟ ಆಡಿಯೋ-ವೀಡಿಯೋ ಜಾಹೀರಾತು ಮಾದರಿಯನ್ನು ರೂಪಿಸಿ ಈಗ ಕರ್ನಾಟಕದ 237ಕ್ಕೂ ಅಧಿಕ ಬಸ್ ನಿಲ್ದಾಣಗಳಲ್ಲಿ LED ಪರದೆಗಳ ಮೂಲಕ ಜಾಹಿರಾತು ಮತ್ತು ಮಾರ್ಕೆಟಿಂಗ್‌ನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಈ ಐದು ಆಧಾರ ಸ್ಥಂಬಗಳ ಸುಭದ್ರ ಬುನಾದಿಯಲ್ಲಿ 500 ಕ್ಕೂ ಹೆಚ್ಚಿನ ಸಿಬ್ಬಂದಿಗಳ ಶಕ್ತಿಯೊಂದಿಗೆ ವೃತ್ತಿ ಸೊಲ್ಯೂಶನ್ಸ್ ಲಿಮಿಟೆಡ್ ಈಗ ಅನ್ ಲಿಮಿಟೆಡ್ ಆಗಿ ಸಾಗುತ್ತಿದೆ.
ವೃತ್ತಿ ಸೊಲ್ಯೂಶನ್ಸ್ ಲಿಮಿಟೆಡ್ ನ ವ್ಯವಹಾರದ ಮುಖ್ಯ ಅಂಗಗಳಾಗಿರುವ Ekatm ERP, Vritti iMedia, Simplify Practice ಉತ್ಪನ್ನಗಳ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಧಾಪುಗಾಲಿಟ್ಟಿದೆ.
ವೃತ್ತಿ ಸೊಲ್ಯೂಶನ್ಸ್ ಲಿಮಿಟೆಡ್ ಈಗ ಇಪ್ಪತ್ತು ಸಂವತ್ಸರಗಳನ್ನು ಯಶಸ್ವಿಯಾಗಿ ಮುಗಿಸಿ ಮುನ್ನುಗ್ಗುತ್ತಿದೆ. ಈ ಯಶಸ್ಸಿನಲ್ಲಿ ಪಾಲುದಾರರಾಗಿರುವ ವೃತ್ತಿ ಕುಟುಂಬದ ಎಲ್ಲಾ ಸದಸ್ಯರು, ಅಮೂಲ್ಯ ಗ್ರಾಹಕರು ಮತ್ತು ಸಾರಿಗೆ ನಿಗಮದ ಸಮಸ್ತರಿಗೂ ತುಂಬು ಹೃದಯದ ಧನ್ಯವಾದಗಳು.
-ರಾಘವೇಂದ್ರ ಎಂ. ಬೊಗಲೆ