ಜೂನ್ 05, 2025

World No Tobacco Day 2025: Unmasking the Appeal of the Tobacco Industry

-Dr Suvarna V. Biradar

Every year on May 31, the world observes World No Tobacco Day—a crucial initiative led by the World Health Organization (WHO) and its global partners to raise awareness about the devastating impact of tobacco use. The theme for 2025, “Unmasking the Appeal: Exposing Industry Tactics on Tobacco and Nicotine Products,” sheds light on the manipulative strategies employed by the tobacco and nicotine industries to lure young people and perpetuate addiction.

The Hidden Dangers Behind the Glitz

Modern marketing techniques mask the true dangers of tobacco products. The industry uses attractive packaging, flavored additives, social media campaigns, and glamorized imagery to draw in a new generation of users. Studies have shown that tobacco content has been viewed over 3.4 billion times on social media platforms, normalizing and promoting a harmful addiction.

Flavorings added to products such as e-cigarettes, heated tobacco products, and nicotine pouches reduce the harshness of tobacco, making it easier to start and harder to quit. These tactics trap users in a vicious cycle of dependence, often beginning in adolescence.

What Needs to Be Done?

To curb this growing threat, a multipronged approach is essential:

  • Ban flavorings in tobacco and nicotine products.
  • Regulate product design to make them less appealing and less harmful.
  • Implement plain packaging to reduce the allure of tobacco brands.
  • Prohibit advertising, promotion, and sponsorship of all tobacco products.
  • Ensure tobacco and nicotine-free public spaces.
  • Support cessation programs and raise awareness about the health impacts.
  • Increase taxation to make tobacco products less affordable and accessible.
  • Educate the public on industry manipulation tactics and promote the benefits of quitting. 

The Indian Context

In India, tobacco use remains a major public health concern. The Global Adult Tobacco Survey-2 revealed that over 28.6% of the population uses some form of tobacco—42.4% among males and 14.2% among females. Smokeless tobacco is particularly common, with khaini, gutka, and betel quid being widely used.

The Government of India has taken commendable steps, from signing the WHO Framework Convention on Tobacco Control (FCTC) to conducting national-level youth and adult tobacco surveys. Yet, the deep-rooted addiction continues to challenge public health efforts.

A Role for Health Professionals

Dental and oral health professionals play a critical role in tobacco cessation. Brief interventions using WHO-recommended 5A and 5R models should become standard practice in primary care settings.

Further, oral health education and behavioral change programs are vital to enhance public understanding of the severe consequences of tobacco use, which include:

  • Oral cancer
  • Oral submucous fibrosis
  • Smoker’s palate
  • Potentially malignant disorders like leukoplakia and erythroplakia

Severe impact on overall health 

World No Tobacco Day 2025 is a reminder that tobacco use is not just a personal habit—it’s a public health crisis fuelled by a powerful industry. It is time to unmask the appeal, reveal the truth, and protect the health of future generations.

__________________________________________________________________________________

Dr Suvarna V. Biradar


Dr Suvarna V. Biradar

Senior Lecturer, Department of Public Health Dentistry, HKE's S. Nijalingappa Institute of Dental Sciences and Research, Kalaburagi



ಸೆಪ್ಟೆಂಬರ್ 23, 2024

Srirangam R. Kannan: A Maestro of Carnatic Music

Srirangam R. Kannan was a distinguished vocalist and an eminent scholar of Carnatic music. His exceptional prowess as a performer and musicologist left an indelible mark on the world of Indian classical music. Teaching as a Professor at Banaras Hindu University, he was a beacon of Carnatic music in the Hindustani music belt, where he seamlessly blended different percussive styles into his performances. Known for his soulful renditions of "Bhakti Sangeet," Kannan captivated audiences across India, singing flawlessly in multiple languages.


Early Life


Born on June 15, 1924, in Thiruppappaliyur, Tamil Nadu, Srirangam R. Kannan was destined for a musical journey. Initiated into music at the tender age of eight by his illustrious father, Vidwan Rajam Iyengar, he chose a path of dedication and discipline over typical childhood pastimes. His rigorous training under legends like Sangeet Kalanidhi Kumbakonam Rajamanickem Pillai, Musiri Subramanya Iyer, and others at the prestigious Music Academy of Madras laid a strong foundation for his illustrious career. Supported by veteran violinists and mridangam maestros, Kannan gave his first stage performance at nineteen and never looked back.


Career


Although he established himself as a stellar performer, Srirangam R. Kannan's passion for teaching led him to Banaras Hindu University. Starting as a Lecturer and eventually becoming a Reader, he invigorated the spirit of Carnatic music among his students and peers. Kannan maintained the highest traditions of shruti (pitch) and laya (rhythm), earning admiration from experts and laymen alike. His humility and simplicity endeared him to many, making him a cherished figure in musical circles.


Kannan authored two significant works: "Tyagaraja Kruti Sangrah" and "Muthuswami Dikshita Kruti Sangrah," the latter being translated into Hindi with notations in the Bhatkhande system. A top-ranking artist of All India Radio since 1945, Kannan's radio programs and recordings like "Sangeet Vivechan" were highly popular. His contributions extended to advisory roles and numerous vocal concerts nationwide, showcasing his fluent and efficient Hindi.


Family


Srirangam R. Kannan hailed from a prestigious musical family. His father, Vidwan Rajam Iyengar, was a distinguished artist, and his mother, Smt. Rajalakshmi, was a patron of music. Married to Smt. K. Saroja, Kannan had two sons who followed in his musical footsteps. His elder son, Dr. R. K. Srinivasan, is a renowned flute artist, while his younger son, R. K. Govindrajan, is a celebrated vocalist and a leader in All India Radio's Commercial Broadcasting Service.


Awards and Recognitions


Srirangam R. Kannan's contributions to music earned him numerous accolades:


- Gold Medal in the open competition held by the Madras Music Academy in 1945.

- Best Junior Musician awarded by the Madras Sangeet Natak Academy.

- Certificate of Merit and TTK Memorial Award from the Music Academy, Madras.

- Top Rank by the Music Audition Board of All India Radio, New Delhi.

- *Cultural Scholarship from the Government of India in Carnatic Music.

- *Suswara Gana Mani Virudu awarded by His Holiness Jagatguru Kanchi Shankaracharya Swamy Jayendra Saraswati ji Maharaj.



Recordings on Media


- "Dasa-Sahitya" (1984) - Sangeetha Studio, Chennai.

- "Devi-Kriti Mala" (1986) - Sangeetha Studio, Chennai.


Srirangam R. Kannan's legacy as a maestro and a scholar of Carnatic music continues to inspire and enthrall music lovers around the world. His dedication to his craft and his ability to blend different musical traditions have left a lasting impact on the world of Indian classical music.




ಸೆಪ್ಟೆಂಬರ್ 22, 2024

ಶ್ರೀರಂಗಂ ಆರ್. ಕಣ್ಣನ್: ಕರ್ನಾಟಕ ಸಂಗೀತದ ಸ್ವರ ಮಾಂತ್ರಿಕ - ಒಂದು ಸ್ಮರಣೆ

ಕರ್ನಾಟಕ ಸಂಗೀತದ ಪ್ರಸಿದ್ಧ ವಿದ್ವಾಂಸರು "ವಾಣಿವರದ ಸುಸ್ವರಗಾನಮಣಿ" ಶ್ರೀರಂಗಂ ಆರ್. ಕಣ್ಣನ್.  ಪ್ರಸಿದ್ಧ ಗಾಯಕರು ಮತ್ತು ಸಂಗೀತಶಾಸ್ತ್ರಜ್ಞರಾಗಿ, ಅವರ ಅಸಾಧಾರಣ ಸೇವೆ ಭಾರತೀಯ ಶಾಸ್ತ್ರೀಯ ಸಂಗೀತದ ಜಗತ್ತಿನಲ್ಲಿ ಅಳಿಸಲಾಗದ ಗುರುತಾಗಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಬೋಧಿಸುತ್ತಿದ್ದ ಅವರು ಹಿಂದೂಸ್ತಾನಿ ಸಂಗೀತ ವಲಯದಲ್ಲಿ ಕರ್ನಾಟಕ ಸಂಗೀತದ ದಾರಿದೀಪವಾಗಿದ್ದರು. ಅಲ್ಲಿ ಅವರು ತಮ್ಮ ಸಂಗೀತ ಕಛೇರಿಗಳಲ್ಲಿ ವಿವಿಧ ತಾಳವಾದ್ಯ ಶೈಲಿಗಳನ್ನು ಸಂಯೋಜಿಸಿದರು. "ಭಕ್ತಿ ಸಂಗೀತ"ದ ಭಾವಪೂರ್ಣ ನಿರೂಪಣೆಗೆ ಹೆಸರುವಾಸಿಯಾದ ಕಣ್ಣನ್ ಅವರು ಭಾರತೀಯ ಸಂಗೀತ ಆರಾಧಕರನ್ನು ಆಕರ್ಷಿಸಿ, ಬಹು ಭಾಷೆಗಳಲ್ಲಿ ಹಾಡಿ ದೇಶದಾದ್ಯಂತ ಪ್ರಸಿದ್ಧರಾಗಿದ್ದರು.

ಆರಂಭಿಕ ಜೀವನ:

ಜೂನ್ 15, 1924 ರಂದು ತಮಿಳುನಾಡಿನ ತಿರುಪ್ಪಪ್ಪಲಿಯೂರಿನಲ್ಲಿ ಜನಿಸಿದ ಶ್ರೀರಂಗಂ ಆರ್. ಕಣ್ಣನ್ ತಮ್ಮ ಎಂಟನೇ ವಯಸ್ಸಿನಲ್ಲಿ ತಂದೆ ಪ್ರಸಿದ್ಧ ವಿದ್ವಾನ್ ರಾಜಮ್ ಅಯ್ಯಂಗಾರ್ ಅವರಿಂದ ಸಂಗೀತ ಪಾಠ ಪ್ರಾರಂಭಿಸಿದರು. ಅವರು ತಮ್ಮ ಬಾಲ್ಯವನ್ನು ಸಮರ್ಪಣೆ ಮತ್ತು ಶಿಸ್ತಿನ ಮಾರ್ಗವನ್ನಾಗಿ ಆರಿಸಿಕೊಂಡರು. ಸಂಗೀತ ಕಲಾನಿಧಿ ಕುಂಭಕೋಣಂ ರಾಜಮಾಣಿಕಂ ಪಿಳ್ಳೈ, ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಮುಂತಾದ ದಿಗ್ಗಜರಿಂದ ಮದ್ರಾಸ್‌ನ ಪ್ರತಿಷ್ಠಿತ ಸಂಗೀತ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆದರು. ಇದರಿಂದ ಅವರು ತಮ್ಮ ಸಂಗೀತ ವೃತ್ತಿಜೀವನಕ್ಕೆ ಬಲವಾದ ಅಡಿಪಾಯವನ್ನು ಹಾಕಿದರು. ಹಿರಿಯ ಪಿಟೀಲು ವಾದಕರು ಮತ್ತು ಮೃದಂಗ ವಿದ್ವಾಂಸರ ಬೆಂಬಲದೊಂದಿಗೆ, ಶ್ರೀರಂಗಂ ಆರ್. ಕಣ್ಣನ್ ಹತ್ತೊಂಬತ್ತನೇ ವಯಸ್ಸಿನಲ್ಲಿ ಮೊದಲ ರಂಗ ಪ್ರದರ್ಶನವನ್ನು ನೀಡಿದರು.

ವೃತ್ತಿ ಜೀವನ:

ತಾರ ಪ್ರದರ್ಶಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದರೂ, ಶ್ರೀರಂಗಂ ಆರ್. ಕಣ್ಣನ್ ಅವರ ಬೋಧನೆಯ ಉತ್ಸಾಹವು ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕರೆದು ತಂದಿತು. ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿ, ತಮ್ಮ ವಿದ್ಯಾರ್ಥಿಗಳು ಮತ್ತು ಗೆಳೆಯರಲ್ಲಿ ಕರ್ನಾಟಕ ಸಂಗೀತದ ಉತ್ಸಾಹವನ್ನು ಉತ್ತೇಜಿಸಿದರು. ಕಣ್ಣನ್ ಅವರು ಶೃತಿ ಮತ್ತು ಲಯದ ಅತ್ಯುನ್ನತ ಸಂಪ್ರದಾಯಗಳನ್ನು ಉಳಿಸಿಕೊಂಡು, ತಜ್ಞರು ಮತ್ತು ಸಾಮಾನ್ಯರಿಂದ ಮೆಚ್ಚುಗೆಯನ್ನು ಗಳಿಸಿದರು. ಅವರ ನಮ್ರತೆ ಮತ್ತು ಸರಳತೆ ಎಲ್ಲರಿಗೂ ಅಪ್ಯಾಯಮಾನವಾಗಿತ್ತು, ಹೀಗಾಗಿ ಅವರು ಸಂಗೀತ ವಲಯದಲ್ಲಿ ಉನ್ನತ ವ್ಯಕ್ತಿಯಾಗಿದ್ದರು.

ಕೃತಿಗಳು:

ಕಣ್ಣನ್ ಅವರು ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ: "ತ್ಯಾಗರಾಜ ಕೃತಿ ಸಂಗ್ರಹ" ಮತ್ತು "ಮುತ್ತುಸ್ವಾಮಿ ದೀಕ್ಷಿತ ಕೃತಿ ಸಂಗ್ರಹ", ಎರಡನೆಯದು ಭಾತಖಂಡೆ ವ್ಯವಸ್ಥೆಯಲ್ಲಿ ಸಂಕೇತಗಳೊಂದಿಗೆ ಹಿಂದಿಗೆ ಅನುವಾದಿಸಲಾಗಿದೆ. 1945 ರಿಂದ ಆಲ್ ಇಂಡಿಯಾ ರೇಡಿಯೊದ ಉನ್ನತ ಶ್ರೇಣಿಯ ಕಲಾವಿದರಾದ ಕಣ್ಣನ್ ಅವರ ಅನೇಕ ರೇಡಿಯೊ ಕಾರ್ಯಕ್ರಮಗಳು ಮತ್ತು "ಸಂಗೀತ ವಿವೇಚನ್" ನಂತಹ ಧ್ವನಿಮುದ್ರಣಗಳು ಜನಪ್ರಿಯವಾಗಿದ್ದವು.

ಕುಟುಂಬ:

ಶ್ರೀರಂಗಂ ಆರ್. ಕಣ್ಣನ್ ಅವರು ಪ್ರತಿಷ್ಠಿತ ಸಂಗೀತ ಕುಟುಂಬದಿಂದ ಬಂದವರು. ಅವರ ತಂದೆ, ವಿದ್ವಾನ್ ರಾಜಮ್ ಅಯ್ಯಂಗಾರ್, ಒಬ್ಬ ವಿಶಿಷ್ಟ ಕಲಾವಿದರಾಗಿದ್ದರು ಮತ್ತು ಅವರ ತಾಯಿ ಶ್ರೀಮತಿ ರಾಜಲಕ್ಷ್ಮಿ, ಸಂಗೀತ ಪೋಷಕರಾಗಿದ್ದರು. ಶ್ರೀಮತಿ ಕೆ. ಸರೋಜಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರರು. ಹಿರಿಯ ಮಗ ಡಾ. ಆರ್. ಕೆ. ಶ್ರೀನಿವಾಸನ್ ಅವರು ಹೆಸರಾಂತ ಕೊಳಲು ಕಲಾವಿದರಾಗಿದ್ದು, ಕಿರಿಯ ಮಗ ಆರ್. ಕೆ. ಗೋವಿಂದರಾಜನ್ ಅವರು ಪ್ರಸಿದ್ಧ ಗಾಯಕ ಮತ್ತು ಆಲ್ ಇಂಡಿಯಾ ರೇಡಿಯೋದ ವಾಣಿಜ್ಯ ಪ್ರಸಾರ ಸೇವೆಯಲ್ಲಿ ನಿವೃತ್ತರಾಗಿದ್ದಾರೆ.

ಪ್ರಶಸ್ತಿಗಳು ಮತ್ತು ಮನ್ನಣೆಗಳು:

* 1945 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನಡೆಸಿದ ಮುಕ್ತ ಸ್ಪರ್ಧೆಯಲ್ಲಿ ಚಿನ್ನದ ಪದಕ.

* ಮದ್ರಾಸ್ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಅತ್ಯುತ್ತಮ ಕಿರಿಯ ಸಂಗೀತಗಾರ ಪ್ರಶಸ್ತಿ.

* ಮದ್ರಾಸ್‌ನ ಸಂಗೀತ ಅಕಾಡೆಮಿಯಿಂದ ಮೆರಿಟ್ ಪ್ರಮಾಣಪತ್ರ ಮತ್ತು ಟಿಟಿಕೆ ಸ್ಮಾರಕ ಪ್ರಶಸ್ತಿ. 

* ನವದೆಹಲಿಯ ಆಲ್ ಇಂಡಿಯಾ ರೇಡಿಯೊದ ಸಂಗೀತ ಆಡಿಷನ್ ಬೋರ್ಡ್‌ನಿಂದ ಉನ್ನತ ಶ್ರೇಣಿ.

* ಕರ್ನಾಟಕ ಸಂಗೀತದಲ್ಲಿ ಭಾರತ ಸರ್ಕಾರದಿಂದ ಸಾಂಸ್ಕೃತಿಕ ವಿದ್ಯಾರ್ಥಿವೇತನ.

* ಪರಮಪೂಜ್ಯ ಜಗದ್ಗುರು ಕಂಚಿ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಜಿ ಮಹಾರಾಜರಿಂದ "ಸುಸ್ವರ ಗಾನಮಣಿ" ಬಿರುದು ಪ್ರದಾನ.

ಧ್ವನಿಸುರುಳಿಗಳು:

* ದಾಸ-ಸಾಹಿತ್ಯ (1984) - ಸಂಗೀತಾ ಸ್ಟುಡಿಯೋ, ಚೆನ್ನೈ.

* ದೇವಿ-ಕೃತಿ ಮಾಲಾ (1986) - ಸಂಗೀತಾ ಸ್ಟುಡಿಯೋ, ಚೆನ್ನೈ.

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಶ್ರೀರಂಗಂ ಆರ್. ಕಣ್ಣನ್ ಅವರ ಪರಂಪರೆಯೊಂದು ಬೆಳೆಯಿತು. ಅವರು ಕರ್ನಾಟಕ ಸಂಗೀತದ ವಿದ್ವಾಂಸರಾಗಿ ಪ್ರಪಂಚದಾದ್ಯಂತ ಅದೆಷ್ಟೋ ಸಂಗೀತ ಪ್ರೇಮಿಗಳನ್ನು ಪ್ರೇರೇಪಿಸುತ್ತದೆ ಮತ್ತು ಆಕರ್ಷಿಸುತ್ತಿದೆ. ಅವರ ಕಲೆ, ಸಮರ್ಪಣೆ ಮತ್ತು ವಿಭಿನ್ನ ಸಂಗೀತ ಸಂಪ್ರದಾಯಗಳನ್ನು ಸಂಯೋಜಿಸುವ ಅವರ ಸಾಮರ್ಥ್ಯವು ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಪಂಚದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದೆ.

ಸೆ. 23 ಅವರ ಪುಣ್ಯಸ್ಮರಣೆ. ಈ ಪ್ರಯುಕ್ತ ಈ ಮಹಾನ್ ಸಂಗೀತ ಮಾಂತ್ರಿಕನಿಗೆ ನಮ್ಮೆಲ್ಲ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ.


ಆಗಸ್ಟ್ 27, 2024

ಎಐ ಜಗತ್ತು: ಇಂದು ಮತ್ತು ನಾಳೆ

ಜಗತ್ತು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ ಮತ್ತು ತುಂಬಾ ವೇಗವಾಗಿ ಓಡುತ್ತಿದೆ. ಈ ವೇಗದ ಹಾದಿಯಲ್ಲಿ ನಾವೂ ಮುಂದೆ ಓಡಬೇಕೋ ಇಲ್ಲ ಹಿಂದೆ ಉಳಿಯಬೇಕೋ ಎಂಬ ಗೊಂದಲದಲ್ಲಿದ್ದೆವೆ. ಈ ಗೊಂದಲದ ಮೂಲವೇ "ಎಐ ಜಗತ್ತು". ಕೃತಕ ಬುದ್ಧಿಮತ್ತೆ (Artificial Intelligence) ಎಂಬ ಐತಿಹಾಸಿಕ ತಂತ್ರಜ್ಞಾನ. ಇದು ಮನುಷ್ಯ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಕ್ರಾಂತಿ ತಂದಿದೆ. ಈ ಕ್ರಾಂತಿ ಪ್ರಗತಿಗೋ ಇಲ್ಲ ಅವನತಿಗೋ ಎಂಬ ಶಂಕೆಯಂತೂ ಖಂಡಿತಾ ಮೂಡಿಸುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಎಐ ಈ ಜಗತ್ತಿನ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಚರ್ಚೆ ಮಾಡುವುದು ಅತೀ ಅಗತ್ಯವಾಗಿದೆ.

ಎಐ ನಮ್ಮ ಜೀವನದಲ್ಲಿ ತಂದ ಬದಲಾವಣೆ

ಎಐ ಬಂದ ನಂತರ, ಮನುಷ್ಯನು ಮಾಡಬೇಕಾದ ಎಲ್ಲಾ ಕೆಲಸವನ್ನು ಅಷ್ಟೇ ಅಲ್ಲ, ಮನುಷ್ಯನು ಮಾಡಲಾಗದ ಕೆಲಸವನ್ನೂ ಕ್ಷಣಾರ್ಧದಲ್ಲಿ ಮಾಡಿ ಬೀಸಾಕುತ್ತಿದೆ. ಉದಾಹರಣೆಗೆ, ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆಯು ಡಯಾಗ್ನೋಸಿಸ್‌ನಲ್ಲಿ ಅತ್ಯಂತ ಪ್ರಮಾಣ ಬದ್ಧತೆಯನ್ನು ತರುತ್ತದೆ. ಇದರಿಂದ ರೋಗಿಗಳ ಜೀವಿತಾವಧಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಎಐ ನಿಯಂತ್ರಣ ವ್ಯವಸ್ಥೆಗಳಲ್ಲಿಯೂ, ತಂತ್ರಜ್ಞಾನದಲ್ಲಿಯೂ ನಮ್ಮ ಬದುಕನ್ನು ಸುಲಭಗೊಳಿಸಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರಿಗೆ ವೈಯಕ್ತಿಕೀಕೃತ ಸೇವೆಗಳನ್ನು ನೀಡಲು, ಎಐ ಆಧಾರಿತ ಆನ್ಲೈನ್ ಶಾಪಿಂಗ್ ಪ್ರಕ್ರಿಯೆಯು ವೇಗವಾಗಿ ಬೆಳೆಯುತ್ತಿದೆ. ಸಿನಿಮಾ, ಕಿರುತೆರೆ, ದ್ವನಿ, ತದ್ರೂಪಿ, ಕಚೇರಿ ಕೆಲಸ, ವ್ಯವಹಾರ, ಬರವಣಿಗೆ, ಮಾರ್ಗದರ್ಶನ ಹೀಗೆ ನೀವು ಏನು ಬೇಕಾದರೂ ಊಹಿಸಬಹುದು. ಕೆಲವೊಮ್ಮೆ ಊಹಿಸಲಾಗದ ಕ್ಷೇತ್ರಕ್ಕೂ ಈ "ಎಐ" ದಾಳಿ ಇಟ್ಟಿದೆ. 

ಎಐಯಿಂದ ಎದುರಾಗುವ ಸವಾಲುಗಳು

ಈ ಎಲ್ಲಾ ಸುಧಾರಣೆಗಳ ಜೊತೆಗೆ ಎಐ ಹಲವು ಸವಾಲುಗಳನ್ನು ನಮ್ಮೆದುರು ತರುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ಎಐ ತಾಂತ್ರಿಕತೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಇದರಿಂದ ಪರಂಪರಾಗತ ಉದ್ಯೋಗಗಳು ಅಪಾಯಕ್ಕೆ ಈಗಾಗಲೇ ಒಳಗಾಗಿವೆ. ಒಂದು ಬದಿಯಲ್ಲಿ ಎಐ ಉತ್ಪಾದಕತೆ, ಪ್ರಕ್ರಿಯೆ, ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತಿದೆ. ಮತ್ತೊಂದು ಬದಿಯಲ್ಲಿ, ಕೃತಕ ಬುದ್ಧಿಮತ್ತೆಯು ಮನುಷ್ಯರ ಅಗತ್ಯವನ್ನು ಕಡಿಮೆಮಾಡುತ್ತಿದೆ. ಮನುಷ್ಯನಿಗೆ ಇದ್ದ ಜ್ಞಾನ, ಅನುಭವ ಮತ್ತು ಶ್ರಮಕ್ಕೆ ತಕ್ಕ ಪ್ರಮಾಣದಲ್ಲಿ ಮೌಲ್ಯ ಇಲ್ಲವಾಗಬಹುದೇ ಎಂಬ ಅನುಮಾನ ಮೂಡಿಸುತ್ತಿದೆ.

ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಹಲವರು, ಎಐ ಬಂದು ತಮ್ಮ ಸ್ಥಾನವನ್ನು ಕಬಳಿಸಿಕೊಳ್ಳಲಿದೆ ಎಂಬ ಆತಂಕದಲ್ಲಿದ್ದಾರೆ. ಈ ಆತಂಕವು ಸ್ವಾಭಾವಿಕವಾದರೂ, ನಮಗೆ ಹೊಸ ಕಾಲಘಟ್ಟದಲ್ಲಿ ಹೆಜ್ಜೆಯಿಡಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಬೇಕಾಗಿದೆ ಎನ್ನುವುದು ಗಮನಿಸಬೇಕಾದ ಅಂಶ ಎನ್ನುವವರೂ ಇದ್ದಾರೆ. ಹೊಸ ರೀತಿಯ ಉದ್ಯೋಗಗಳು, ಅವುಗಳಲ್ಲಿರುವ ಹೊಸ ಸವಾಲುಗಳು, ಮತ್ತು ಕೌಶಲ್ಯಗಳ ಅಗತ್ಯವನ್ನು ಅರಿತುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ನಮ್ಮನ್ನು ನಾವು ತಯಾರು ಮಾಡಿಕೊಳ್ಳುವುದು, ಮುಂದಿನ ಪೀಳಿಗೆಗೆ ಶ್ರೇಯಸ್ಕರ ಎಂದೂ ಹೇಳಲಾಗುತ್ತಿದೆ..

ಭವಿಷ್ಯದಲ್ಲಿ ಏನಾಗಬಹುದು?

ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಏನಾಗಬಹುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ಪ್ರಕ್ರಿಯೆ ಮುಂದುವರಿದರೆ, ಮನುಷ್ಯರು ಕೇವಲ ತಂತ್ರಜ್ಞಾನದ ಸೇವಕರು ಮಾತ್ರ ಆಗಿ ಬಾಳಬಹುದು. ಆದರೆ, ಇದು ಅಪಾಯಕಾರಿಯೂ ಆಗಬಹುದು. ಮಾನವೀಯ ಹೃದಯ ಬುದ್ದಿಯು ಕಡಿಮೆಗೊಳ್ಳುವ ಭೀತಿ ಕೂಡ ಇದೆ. ತಂತ್ರಜ್ಞಾನದಲ್ಲಿ ಜ್ಞಾನವಿದೆ, ಆದರೆ ಮಾನವೀಯತೆ, ಮಾನವೀಯ ಹೃದಯಬುದ್ದಿ ಎಂಬುದು ಅಲ್ಲಿ ಇಲ್ಲ. ಆದ್ದರಿಂದ, ಎಐ ಮನುಷ್ಯರನ್ನು ಸಂಪೂರ್ಣವಾಗಿ ಪ್ರತಿಸ್ಪರ್ಧಿಸಲಾಗದು. ಆದರೆ, ಈ ಕ್ಷಿಪ್ರಗತಿಯ ಪಥದಲ್ಲಿ ನಾವೆಲ್ಲರೂ ಎಐಯನ್ನು ಸರಿಯಾಗಿ ಬಳಸಿಕೊಂಡು, ಮನುಷ್ಯತ್ವವನ್ನು ಉಳಿಸಿಕೊಳ್ಳಲು ಯತ್ನಿಸಬೇಕಾದ ಗುರುತರ ಜವಾಬ್ದಾರಿ ಹೋರಬೇಕಾಗಿದೆ.

ಎಐ ಪ್ರಬಲವಾಗಿ ನಮ್ಮ ಆರ್ಥಿಕ, ಸಾಮಾಜಿಕ, ಮತ್ತು ಆಧ್ಯಾತ್ಮಿಕ ಬೌದ್ಧಿಕತೆಯನ್ನು ರೂಪಿಸುತ್ತಿರುವುದರಿಂದ, ಮುಂದಿನ ಹತ್ತು ವರ್ಷಗಳಲ್ಲಿ ನಾವು ಹೇಗೆ ಬದುಕಬೇಕು ಎಂಬುದರ ಬಗೆಗೆ ಹೆಚ್ಚು ಯೋಚನೆ ಮಾಡಬೇಕಾಗಿದೆ. ಎಐಯು ನಮ್ಮ ಸಾಧನೆಗಳನ್ನು ಎತ್ತರಕ್ಕೆ ಎತ್ತುವ ಸಾಮರ್ಥ್ಯವಿದ್ದರೂ, ನಾವು ಎಐಯನ್ನು ಎಂತಹ ಮಿತಿಯಲ್ಲಿ ಬಳಸಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ.

ಎಐ ಭಾವಿ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ

ಎಐ ಮುಂದಿನ ತಲೆಮಾರಿನ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಕೇವಲ ಊಹಿಸಬಹುದು. ಶಾಲಾ ಶಿಕ್ಷಣದಿಂದ ಹಿಡಿದು ಉದ್ಯೋಗ ಪ್ರಾಪ್ತಿಯವರೆಗೆ, ಕೌಟುಂಬಿಕ ಸಂಬಂಧಗಳಿಂದ ಹಿಡಿದು ಸಾಮಾಜಿಕ ಜೀವನದವರೆಗೆ, ಎಲ್ಲವನ್ನೂ ಎಐ ಆವರಿಸಿಕೊಳ್ಳಲಿದೆ. ಬಹುಶಃ ನಮ್ಮ ಚಿಂತನೆಗಳು, ನಮ್ಮ ತೀರ್ಮಾನಗಳು, ಮತ್ತು ನಮ್ಮ ಅಭಿಪ್ರಾಯಗಳನ್ನೂ ಸಹ ಎಐ ರೂಪಿಸುತ್ತದೆ‌ಯೋ ಎಂಬ ಆತಂಕವಂತೂ ಇದೆ. ಆ ದಿನಗಳು ಬಹಳ ದೂರವೇನಿಲ್ಲ ಎಂಬ ಭಯ ಈಗಲೇ ಆವರಿಸುತ್ತಿದೆ. 

ಆದರೆ, ನಾವು ಎಐಯನ್ನು ಹಿತಕರವಾಗಿ ಬಳಸಿದರೆ, ಇದು ಮುಂಚಿನ ಯಾವುದೇ ತಂತ್ರಜ್ಞಾನದಂತೆ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ನಾವು ಎಐಯನ್ನು ನಿಯಂತ್ರಣದಲ್ಲಿ ಬಳಸದೆ ಹೋದರೆ, ನಾವು ತಂತ್ರಜ್ಞಾನದ ಬಲೆಗೆ ಸಿಲುಕುವ ಅಪಾಯವಿದೆ ಎನ್ನುವುದನ್ನೂ ತಳ್ಳಿ ಹಾಕುವಂತಿಲ್ಲ. 

ಅಂತಿಮವಾಗಿ...

ಎಐ ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಸುಧಾರಿಸುತ್ತದೆ, ಮತ್ತು ಪರಿಣಾಮಕಾರಿಯಾಗಿಸುತ್ತದೆ ನಿಜ. ಆದರೆ ಅದರೊಂದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೇ ಮುಖ್ಯ. ಎಐಯನ್ನು ನಮ್ಮ ನೆರವಿಗೆ ಬಳಸಿಕೊಂಡು, ನಮ್ಮ ಸೃಜನಶೀಲತೆ, ಮಾನವೀಯ ಮೌಲ್ಯಗಳು, ಮತ್ತು ನೆನೆಪಿನ ಶಕ್ತಿ ಉಳಿಸಿಕೊಂಡು ಮುಂದುವರಿಯುವುದು ಜಾಣತನವಾಗಿದೆ. ಅತಿ ಹೆಚ್ಚು ಆಧರಿಸದೆ, ಸಮತೋಲನದಿಂದ ಎಐಯನ್ನು ಬಳಸಿದರೆ, ಈ ತಂತ್ರಜ್ಞಾನವು ನಮ್ಮ ಜೀವನದಲ್ಲಿ ನಿಜವಾದ ಪ್ರಗತಿಯನ್ನು ತರುತ್ತದೆ. 

ಈ ಎಐ ಜಗತ್ತಿನಲ್ಲಿ, ನಾವು ಪಶ್ಚಾತ್ತಾಪದಿಂದ ಬದುಕಬೇಕೋ ಅಥವಾ ಪ್ರಗತಿಯಲ್ಲಿ ಮುನ್ನುಗ್ಗಬೇಕೋ ಎಂಬ ನಿರ್ಧಾರ ನಮ್ಮ ಕೈಯಲ್ಲಿದೆ. ನಾವು ಈ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡುತ್ತೇವೆ ಎಂಬುದು ಮಾತ್ರವೇ ಈ ತಂತ್ರಜ್ಞಾನ ನಮಗೆ ಆನಂದವನ್ನೇ ತರಬಲ್ಲದೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.


ಆಗಸ್ಟ್ 25, 2024

ಅರಳಗುಂಡಗಿಯ ಸಂತ ಶ್ರೀ ಶರಣಬಸವ


ಶರಣರ ಬೀಡು, ದೈವತ್ವದ ಪೂಣ್ಯಭೂಮಿ ಈ ಕಲ್ಯಾಣ ಕರ್ನಾಟಕ. ಈ ಕರುನಾಡಿನ ನೆಲದಲ್ಲಿ ಜನಿಸಿದ ಅಸಂಖ್ಯ ಮಹಾತ್ಮರು ಇಡೀ ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಅಂಥವರಲ್ಲಿ ಒಬ್ಬರು "ಅರಳಗುಂಡಗಿಯ ಸಂತ ಶ್ರೀ ಶರಣಬಸವ."

ಶ್ರೀ ಶರಣಬಸವೇಶ್ವರರು, ಕ್ರಿ.ಶ 1746ರಲ್ಲಿ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಮಲಕಪ್ಪಾ ಮತ್ತು ತಾಯಿ ಸಂಗಮ್ಮ, ಜ್ಞಾನ ಮತ್ತು ಭಕ್ತಿ ತುಂಬಿದ ಪಿತೃಗಳು.

ಶರಣಬಸವೇಶ್ವರರ ದಾಸೋಹ ಕಾಯಕ:

ಶರಣಬಸವೇಶ್ವರರು ಕಾಯಕ, ದಾಸೋಹ, ಮತ್ತು ಲಿಂಗಾಯತ ತತ್ವಗಳ ಬೋಧನೆ ಮಾಡಿ, ಜನತೆಗೆ ಹೊಸ ಬದುಕಿನ ದಾರಿ ತೋರಿಸಿದರು. ಅಧ್ಯಾತ್ಮದ ಕಡೆಗೆ ಅವರ ಒಲವು ಬಾಲ್ಯದಿಂದಲೇ ಸ್ಪಷ್ಟವಾಗಿದ್ದು, ಕಲಿಕೆಯ ಹಾದಿಯಲ್ಲಿ, ಓಂ ಕಾರದ ಮಹಾತತ್ವದ ಪ್ರಶ್ನೆಯಿಂದ ಆರಂಭಿಸಿದ ಇವರ ಜೀವನ, ಅಧ್ಯಾತ್ಮಿಕ ಶೋಧನೆಯಾದರು.

ಶರಣಬಸವೇಶ್ವರರು ಹಾಗೂ ಅವರ ಗೃಹಸ್ಥ ಜೀವನ:

ಶರಣಬಸವೇಶ್ವರರು ಮಹಾದೇವಿ ಎಂಬವರನ್ನು ಮದುವೆಯಾಗಿದ್ದು, ಸಾಂಸಾರಿಕ ಜೀವನದಲ್ಲಿಯೂ ದಾಸೋಹ, ಲಿಂಗಪೂಜೆ, ಬಡವರಿಗೆ ಸೇವೆಗಳಲ್ಲಿ ತೊಡಗಿದರು. ಅವರದು ಅವಿಭಕ್ತ ಕುಟುಂಬವಾಗಿದ್ದು, ಶರಣಬಸವೇಶ್ವರರ ದಾಸೋಹ ಕಾಯಕಕ್ಕಾಗಿ, ಅವರು ಆಸ್ತಿಯಿಂದ ದೂರವಿದ್ದು, ತಮ್ಮ ಮಾರ್ಗದಲ್ಲಿ ಮುಂದುವರಿದರು.

ಪ್ರಕೃತಿಯನ್ನು ಪ್ರೀತಿಸಿ, ಬದುಕನ್ನು ಸುಧಾರಿಸಿದ ದಾರಿಹೋಕ:

ಶರಣಬಸವೇಶ್ವರರು ಕಾಯಕದಲ್ಲಿ ಹಕ್ಕಿಗಳನ್ನು ಕಾಡದಂತೆ ಬೆಳೆಗಳಿಗೆ ಅವುಗಳಿಂದಲೇ ಇಳುವರಿ ಹೆಚ್ಚಿಸಿದರು. ಗಿಡದಿಂದ ಉದುರಿ ಬಿದ್ದ ಹೂವುಗಳು, ಎಲೆಗಳು ಮತ್ತು ಹಕ್ಕಿಗಳ ಸಹಾಯದಿಂದ ತಮ್ಮ ಕೃಷಿಯನ್ನು ಯಶಸ್ವಿಯಾಗಿ ನಡೆಸಿದರು. ಅವರ ಈ ಕಾಯಕವು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತದೆ.

ಹಸಿವಿನಿಂದ ಬಳಲಿದ ಹಸಿದ ಜನರಿಗೆ ದಾಸೋಹ:

ಶರಣಬಸವೇಶ್ವರರು, ಹಸಿವಿನಿಂದ ಬಳಲಿದ ಜನರಿಗೆ ಅನ್ನ ದಾಸೋಹ, ಆರೋಗ್ಯ ಸಮಸ್ಯೆಗಳಿಂದ ಬಳಲಿದವರಿಗೆ ಔಷಧ ಮತ್ತು ದೈವಿಕ ಶಕ್ತಿ ನೀಡಿದರು. ಅವರ ದಾಸೋಹ ಪರಂಪರೆ, ಶಿವಾನುಭವ ಮತ್ತು ಬೋಧನೆಗಳಿಂದ, ಕಳ್ಳರು ಮತ್ತು ವಂಚಕರು ಸಹ ತಮ್ಮ ದುರಾಚರಣೆಗಳಿಂದ ಹೊರಬಂದು ಶರಣರಾದರು.

ಮಹಾದಾಸೋಹಿ ಶರಣಬಸವೇಶ್ವರರ ಪಯಣ:

ಅವರ ಮಡದಿ ಮತ್ತು ಮಗನ ಅಕಾಲಿಕ ಸಾವು ಬಳಿಕ, ಶರಣಬಸವೇಶ್ವರರು ಕಲಬುರಗಿಗೆ ಪಯಣ ಬೆಳೆಸಿದರು. ಬಡವರಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಅವರು, ದಾರಿಯಲ್ಲಿದ್ದ ಹಳ್ಳಿಗಳಲ್ಲಿ ಜನರಿಗೆ ಆಹಾರ, ನೀರು, ಮತ್ತು ಆಶ್ರಯವನ್ನು ಒದಗಿಸಿದರು.

ಶರಣಬಸವೇಶ್ವರರ ಶಿವಾನುಭವದ ಗೋಷ್ಟಿ:

ಕಲಬುರಗಿಯಲ್ಲಿ, ದೊಡ್ಡಪ್ಪಗೌಡರು ಶರಣಬಸವೇಶ್ವರರಿಗೆ ಆಶ್ರಯ ನೀಡಿದ್ದು, ಅವರು ನಿರಂತರವಾಗಿ ಶಿವಾನುಭವದ ಗೋಷ್ಟಿಗಳನ್ನು ನಡೆಸಿ, ಲಿಂಗಾಯತ ತತ್ವಗಳನ್ನು ಪ್ರಸಾರ ಮಾಡಿದರು. ಶಿವಾನುಭವದ ಮೂಲಕ ಜನರಲ್ಲಿ ಜ್ಞಾನವನ್ನೂ, ಆಧ್ಯಾತ್ಮಶಕ್ತಿಯನ್ನೂ ತುಂಬಿದರು.

ಶರಣಬಸವೇಶ್ವರರ ಲಿಂಗೈಕ್ಯ:

1822ರ ಮಾರ್ಚ್ ಹನ್ನೊಂದನೇ ತಾರೀಖು ಸೋಮವಾರದಂದು, ಶ್ರೀ ಶರಣಬಸವೇಶ್ವರರು ಲಿಂಗೈಕ್ಯರಾದರು. ಅವರ ಸಮಾಧಿಯ ಮೇಲೆ ನಿರ್ಮಿತ ಗೋಪುರ, ಇಂದಿನ ಶರಣಬಸವೇಶ್ವರ ದೇವಸ್ತಾನವಾಗಿ, ಹಲವಾರು ಭಕ್ತರಿಗೆ ಆಧ್ಯಾತ್ಮಿಕ ಶ್ರದ್ಧೆಯ ಕೇಂದ್ರವಾಗಿದೆ. 

ಶರಣಬಸವೇಶ್ವರರ ಮಹತ್ವ:

ಶರಣಬಸವೇಶ್ವರರು, ಕಾಯಕ ಮತ್ತು ದಾಸೋಹದ ಮೂಲಕ, ತಮ್ಮ ಜೀವನವನ್ನು ಸಮಾಜದ ಶ್ರೇಯಸ್ಸಿಗಾಗಿ ತೊಡಗಿಸಿ, ಮೌನವಾಗಿ ತಮ್ಮ ಜೀವನತತ್ವವನ್ನು ಅನುಸರಿಸಿ ತೋರಿಸಿದರು. ಅವರು ಹೇಗೆ ಶಿವನನ್ನು ಕಂಡುಕೊಳ್ಳಬೇಕು ಎಂಬ ಸಂದೇಶವನ್ನು, ನಿಸ್ವಾರ್ಥವಾಗಿ ಬೋಧಿಸಿದರು. 

ಶರಣಬಸವೇಶ್ವರ ರತೋತ್ಸವ:

ಪ್ರತಿವರ್ಷ, ಶರಣಬಸವೇಶ್ವರರ ಲಿಂಗೈಕ್ಯ ದಿನದಂದು, ಅವರ ದಾಸೋಹವನ್ನು ನೆನಪಿಸಲು ರತೋತ್ಸವ ಬಹು ವಿಜೃಂಭಣೆಯಿಂದ ನಡೆಸಲಾಗುತ್ತದೆ. 

ಅಪಾರ ಪ್ರೇರಣೆ:

ಶರಣಬಸವೇಶ್ವರರ ಜೀವನದ ಪ್ರಸಂಗಗಳು, ಮೌಲಿಕ ತತ್ವಗಳು, ಅವರ ದಾಸೋಹ ಕಾರ್ಯಗಳು, ಇಂದಿಗೂ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿವೆ. ಮಹಾದಾಸೋಹಿ ಶ್ರೀ ಶರಣಬಸವೇಶ್ವರರು, ತಮ್ಮ ಜೀವನ ಮತ್ತು ಕಾಯಕದ ಮೂಲಕ, ಸಮಾಜದ ಬದಲಾವಣೆಗೆ ಮತ್ತು ಆಧ್ಯಾತ್ಮಿಕ ಶ್ರೇಯಸ್ಸಿಗೆ ಮಾಡಿದ ಕೊಡುಗೆ, ನಮ್ಮೆಲ್ಲರಿಗೂ ಅಪಾರ ಪ್ರೇರಣೆಯ ಮೂಲವಾಗಿದೆ.

ಅರಳಗುಂಡಗಿಯ ಸಂತ ಶ್ರೀ ಶರಣಬಸವ ಕುರಿತು ಸಾಕ್ಷ್ಯಚಿತ್ರ ನೋಡಲಿ ಕ್ಲಿಕ್ಕಿಸಿ.

ಜೂನ್ 30, 2022

ದಕ್ಷ ಪಿ.ಎಸ್.ಐ. ಅಧಿಕಾರಿ ಚಿತ್ರಶೇಖರ್ ಎಸ್. ಹೆಬ್ಬಾಳ

 

ದೇಶ ಸೇವೆ, ಜನ ಸೇವೆ ಮಾಡುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕರೂ ಉಪಯೋಗಕ್ಕಿಂತ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವವರೇ ಹೆಚ್ಚು. ಆದರೆ ಪುಣ್ಯವಂತರು ಮಾತ್ರ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಕೆಲಸಕ್ಕೆ, ಇಲಾಖೆಗೆ, ತಮ್ಮ ಕುಟುಂಬಕ್ಕೇ ಮೇಲಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ.

ಸೇವಾ ನಿಷ್ಠೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಸಾಕ್ಷಿಯಾಗಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿ ಇಂದು ಗೌರವಪೂರ್ವಕವಾಗಿ ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ ಪಿಎಸ್ ಅಧಿಕಾರಿ ಚಿತ್ರಶೇಖರ್ ಎಸ್. ಹೆಬ್ಬಾಳ.

ಚಿತ್ರಶೇಖರ್ ಎಸ್. ಹೆಬ್ಬಾಳ ಇವರು 1962  ಜೂನ್ 5ರಂದು, ಸಿದ್ದಣ್ಣಾ ಎಸ್. ನಂಜಾಗೋಳ ಮತ್ತು ಅಣವೀರಮ್ಮ ಎಸ್. ನಂಜಾಗೋಳ ದಂಪತಿಗಳ ಹಿರಿಯ ಮಗನಾಗಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಜನಿಸಿದರು. ಇವರ ನಂತರ  ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ಕು ಜನ ಹೆಣ್ಣುಮಕ್ಕಳು ಜನಿಸುತ್ತಾರೆ. 

7 ಜನ ಮಕ್ಕಳನ್ನು ಪಡೆದ ಚಿತ್ರಶೇಖರ್ ಅವರ ತಂದೆ ಸಿದ್ದಣ್ಣಾ ಎಸ್. ನಂಜಾಗೋಳ ಅವರು ಸಮಯದಲ್ಲಿ ಹೆಬ್ಬಾಳ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ,  ತಾಯಿ ಅಣವೀರಮ್ಮ ಅವರು ಗ್ರಹಿಣಿಯಾಗಿದ್ದು, ದೊಡ್ಡ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತು ಮನೆ ಕೆಲಸದ ಜೊತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಮುಖ್ಯವಾಗಿ ಉತ್ತಮ ಸಂಸ್ಕಾರವನ್ನು ನೀಡಿದರು.

ಇಂಥ ಸುಂದರ ಸುಸಂಸ್ಕೃತ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಚಿತ್ರಶೇಖರ್ ಅವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಹೆಬ್ಬಾಳ ಗ್ರಾಮದಲ್ಲಿ ಪೂರೈಸಿದರು.   ನಂತರ ಪಿಯುಸಿ ಶಿಕ್ಷಣಕ್ಕಾಗಿ ಕಲ್ಬುರ್ಗಿ ನಗರಕ್ಕೆ ಆಗಮಿಸುತ್ತಾರೆ. ಇಲ್ಲಿನ ಪ್ರತಿಷ್ಠಿತ ಎಸ್.ಬಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದರು.

ಇದಾದ ನಂತರ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಶಂಕ್ರಪ್ಪ ಮತ್ತು ಈರಮ್ಮ ನಾಗೂರ್ ದಂಪತಿಗಳ ಪುತ್ರಿಯಾದ ಇಂದುಮತಿಯನ್ನು 1986 ಜುಲೈ 16ರಂದು ಮದುವೆಯಾದರು. ಆಗ ಸಂಸಾರದ ಬಂಡಿ ಸಾಗಿಸಲು ಚಿತ್ರಶೇಖರ್ ಅವರು ಒಂದು ಟ್ರಾನ್ಸ್ಪೋರ್ಟ್ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.

ಚಿತ್ರಶೇಖರ್ ಮತ್ತು ಇಂದುಮತಿ ದಂಪತಿಗಳಿಗೆ ವಾಣಿಶ್ರೀ ಹಾಗೂ ವೀಣಾಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳು ಮತ್ತು ಶಶಿಕುಮಾರ ಹಾಗೂ ಕಿರಣಕುಮಾರ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ.  ಮಕ್ಕಳಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ತೋರದೆ ಸರ್ಕಾರಿ ಹುದ್ದೆಯಿಂದ  ಬರುವ  ಸಂಬಳದಲ್ಲಿಯೇ ಮನೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದರೊಂದಿಗೆ  ನಾಲ್ಕು ಜನ ಮಕ್ಕಳಿಗೂ ಇಂಜಿನಿಯರಿಂಗ ಶಿಕ್ಷಣ ನೀಡಿದರು. ಇವರ ಎಲ್ಲ ಮಕ್ಕಳು ಇಂದು ಉನ್ನತ ಹುದ್ದೆಯಲ್ಲಿ ಇದ್ದು, ಚಿತ್ರಶೇಖರ ಹಾಗೂ ಇಂದುಮತಿ ಹೆಬ್ಬಾಳ ದಂಪತಿಗಳ ಕೀರ್ತಿಗೆ ಪಾತ್ರರಾಗಿದ್ದಾರೆ.

ಹೆಣ್ಣು ಮಕ್ಕಳಾದ ವಾಣಿಶ್ರೀ ಅವರನ್ನು ಮಂಜುಕುಮಾರ್ ಇಂಡಿ ಅವರಿಗೆ ಹಾಗೂ ವೀಣಾಶ್ರೀ ಅವರನ್ನು ಹರೀಶ ಅವರಿಗೆ ಮದುವೆ ಮಾಡಿಕೊಟ್ಟಿದ್ದು, ಅಲೋಕ್, ಅನ್ವಿತಾ, ಅದಿತಿ ಹಾಗೂ ಅದ್ವಿಕ್ ಎಂಬ ನಾಲ್ಕು ಜನ ಮೊಮ್ಮಕ್ಕಳಿದ್ದಾರೆ.

ಮದುವೆಯಾದ ಎರಡು ವರ್ಷದ ನಂತರ ಚಿತ್ರಶೇಖರ್ ಅವರು ಪೊಲೀಸ್ ಇಲಾಖೆಯ ಪೇದೆ ಹುದ್ದೆಗೆ ಅರ್ಜಿ ಸಲ್ಲಿಸಿದರು. 1988 ರಲ್ಲಿ  ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿ, ಒಂದು ವರ್ಷ ಕಾಲ ಚನ್ನಪಟ್ಟಣದಲ್ಲಿ ತರಬೇತಿ ಪಡೆದರು. ನಂತರ ತಮ್ಮ ಪೊಲೀಸ್ ಕಾನ್ಸ್ಟೇಬಲ್ ವೃತ್ತಿಯನ್ನು ಈಗಿನ ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಪ್ರಾರಂಭಿಸಿದರು.

ಶಹಾಪೂರ ಪೊಲೀಸ್ ಠಾಣೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಇವರು ಶೋರಾಪೂರ ತಾಲೂಕಿಗೆ ವರ್ಗವಾಗಿ ಅಲ್ಲಿಯೂ ನಾಲ್ಕು ವರ್ಷಗಳನ್ನು ಪೂರೈಸಿ,  ಗುರುಮಠಕಲ್ ಗ್ರಾಮಕ್ಕೆ ವರ್ಗಾವಣೆಗೊಂಡರು. ಅಲ್ಲಿ 7 ವರ್ಷ ಸೇವೆ ಸಲ್ಲಿಸಿ ಶಹಾಪೂರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳನ್ನು ಪೂರೈಸಿದರು.

ಸೇವಾನಿಷ್ಠೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಪೋಲಿಸ್ ಪೇದೆಯಾಗಿ 18 ವರ್ಷಗಳನ್ನು ಪೂರ್ಣಗೊಳಿಸಿದ ನಂತರ 2006ರಲ್ಲಿ ಮುಖ್ಯ ಪೇದೆ ಹುದ್ದೆಗೆ ಬಡ್ತಿ ಹೊಂದುತ್ತಾರೆ. ಶಹಾಪೂರ ಪಟ್ಟಣ ಹಾಗೂ ವಡಗೇರಿ ಗ್ರಾಮದ ಪೋಲಿಸ್ ಠಾಣೆಗಳಲ್ಲಿ ಮುಖ್ಯಪೇದೆ ಯಾಗಿ 11 ವರ್ಷ ಸೇವೆ ಸಲ್ಲಿಸಿದರು.

ತದನಂತರ 2017ರಲ್ಲಿ .ಎಸ್. ಹುದ್ದೆಗೇರಿ ಗುರುಮಠಕಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. .ಎಸ್..  ಹುದ್ದೆಯಲ್ಲಿರುವಾಗಲೇ ಚಿತ್ರಶೇಖರ್ ಅವರು ಪಿ.ಎಸ್. ಹುದ್ದೆಗೆ ಪರೀಕ್ಷೆ ಬರೆದರು. ಮುಂದೆ . ಎಸ್.. ಹುದ್ದೆಯನ್ನು 5 ವರ್ಷ ಪೂರ್ಣಗೊಳಿಸಿದ ಬಳಿಕ ಕಳೆದ ವರ್ಷ ಅಂದರೆ 2021ರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಿ ಬಡ್ತಿ ಹೊಂದಿದರು. ಮೈಸೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಒಂದು ತಿಂಗಳ ತರಬೇತಿ ಪಡೆದು, ಶೋರಾಪೂರ ಪಟ್ಟಣದ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಪಿ. ಎಸ್.. ಹುದ್ದೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.

ಚಿತ್ರಶೇಖರ್ ಅವರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ರೀತಿಯ ಆಸೆ ಆಕಾಂಕ್ಷೆಗಳಿಗೆ ಮನಸ್ಸನ್ನು ಕೇಂದ್ರೀಕರಿಸದೆ, ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕವಾಗಿ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ.

ಸಣ್ಣಪುಟ್ಟ ಜಗಳಗಳಿಗಾಗಲಿ, ಮನೆಯ ಹಲವಾರು ಸಮಸ್ಯೆಗಳಿಗಾಗಲಿ ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಸಹಜ. ಚಿತ್ರಶೇಖರ್ ಅವರು ಕರ್ತವ್ಯದಲ್ಲಿದ್ದಾಗ ತಮ್ಮ ಬಳಿ ಅಣ್ಣ-ತಮ್ಮಂದಿರು, ಸೋದರ ಸಂಬಂಧಿಗಳು, ಕುಟುಂಬದ ಕಲಹ, ನೆರೆಹೊರೆಯವರ ಜಗಳ ಹೀಗೆ ಸಣ್ಣ ಪುಟ್ಟ ಜಗಳಗಳನ್ನು ಮಾಡಿಕೊಂಡು ಪೊಲೀಸ್ ಠಾಣೆಗೆ ಧಾವೆ ಹೂಡಲು ಬರುವ ಜನರನ್ನು ಸಮಾಧಾನಪಡಿಸಿ, ಅವರ ವಿರುದ್ಧ ಎಫ್..ಆರ್ ದಾಖಲಿಸದೆ, ವಾದ ಪ್ರತಿವಾದಿಗಳನ್ನು ಠಾಣೆಗೆ ಕರೆಯಿಸಿ, ತಿಳುವಳಿಕೆ ಹೇಳಿ, ರಾಜಿ ಸಂಧಾನ ಮಾಡಿಸಿ ಕಳುಹಿಸುತ್ತಿದ್ದರು. 

ಕೆಲವೊಂದು ಸಂದರ್ಭಗಳಲ್ಲಿ ಬಡವರು, ದೀನ ದಲಿತರು, ನಿರ್ಗತಿಕರು ಪೊಲೀಸ್ ಠಾಣೆಗೆ ಬಂದು, ಊಟಕ್ಕಾಗಿ ಅಥವಾ ತಮ್ಮ ಊರಿಗೆ ಮರಳಿ ಹೋಗಲು ಹಣವಿಲ್ಲದೆ ಪರದಾಡುತ್ತಿದ್ದರೆ, ಅಂಥವರನ್ನು ಕಂಡು ತಮ್ಮ ಜೇಬಿನಿಂದ ಹಣ ತೆಗೆದು, ಊಟೋಪಚಾರ ಮಾಡಿಸಿ, ಊರಿಗೆ ಹೋಗಲು ಬಸ್ಸಿನ ಖರ್ಚನ್ನು ಭರಿಸಿ, ಕಳುಹಿಸುತ್ತಿದ್ದರು.

ಕರೋನಾದ 2ನೇ ಅಲೆಯಿಂದ 2021ರಲ್ಲಿ ದೇಶದಲ್ಲಿ ಎರಡನೇ ಸಲ ಲಾಕ್ಡೌನ್ ಘೋಷಿಸಲ್ಪಟ್ಟಾಗ ಚಿತ್ರಶೇಖರ್ ಅವರು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ .ಎಸ್. ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಂದರ್ಭದಲ್ಲಿ ಇಟಕಲ ಕ್ರಾಸ್ ಸಮೀಪದ, ಗುರುಮಠಕಲ್ ಹೈದರಾಬಾದ್ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ನಿಲ್ಲಿಸಿ ಹಣ್ಣು-ಹಂಪಲುಗಳನ್ನು ನೀಡಿ, ಮಾಸ್ಕ್ ವಿತರಿಸಿ, ಅನಗತ್ಯವಾಗಿ ರಸ್ತೆ ಮೇಲೆ ಸಂಚರಿಸಿದೆ ಮನೆಯಲ್ಲಿ  ಸುರಕ್ಷಿತವಾಗಿರಿ ಎಂದು ಬುದ್ಧಿ ಮಾತು ಹೇಳಿ ಕಳುಹಿಸಿದ ಘಟನೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಇಂಥ ಪ್ರಾಮಾಣಿಕ, ದಕ್ಷ, ಮಾನವೀಯ ಗುಣವುಳ್ಳ ಪೊಲೀಸ್ ಅಧಿಕಾರಿಯಾದ ಶ್ರೀ ಚಿತ್ರಶೇಖರ್ ಎಸ್. ಹೆಬ್ಬಾಳ ಅವರು ಪೊಲೀಸ್ ಇಲಾಖೆಯಲ್ಲಿ ತಮ್ಮ ಸುದೀರ್ಘವಾದ 34 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿಯಾಗಿದ್ದಾರೆ. ಅವರ ಸೇವೆಗೆ ಇಂದು ನಿವೃತ್ತಿಯಾಗಿರಬಹುದು. ಆದರೆ ಅವರ ಸೇವಾ ಅವಧಿಯಲ್ಲಿ ಮಾಡಿದ ಎಲ್ಲಾ ಕೆಲಸ ಕಾರ್ಯಗಳು ನಮ್ಮೆಲ್ಲರಿಗೆ ಪಾಠವಾಗುತ್ತದೆ. ಚಿತ್ರಶೇಖರ್ ಎಸ್. ಹೆಬ್ಬಾಳ ಎಂಬ ಹೆಸರು ಕೇಳಿದ ಕೂಡಲೆ ನಾವೆಲ್ಲ ಹೆಮ್ಮೆಯಿಂದ ಬೀಗುತ್ತೇವೆ. ಅವರಂತೆ ನಾವೂ ಆಗಬೇಕೆಂಬ ಪ್ರೇರಣೆ ಸಿಗುತ್ತದೆ. ಅವರಂತಹ ಮಾನವೀಯ ಗುಣ ನಮ್ಮಲ್ಲೂ ಮೂಡುತ್ತದೆ. ಇದೇ ಅಲ್ಲವೇ ಸಾರ್ಥಕ ಬದುಕು. ಸಾಧನೆ ಬದುಕು.

ಇಂಥ ಬದುಕು ನಡೆಸಿ ಸಜ್ಜನಿಕೆ, ಪ್ರಾಮಾಣಿಕತೆ, ಪ್ರೀತಿ, ಮಾನವೀಯತೆಗೆ ಹೆಸರಾದ ಪಿ.ಎಸ್. ಅಧಿಕಾರಿ ಚಿತ್ರಶೇಖರ್ ಎಸ್. ಹೆಬ್ಬಾಳ ಅವರ ಮುಂದಿನ ನಿವೃತ್ತಿಯ ಜೀವನ ಸುಖ ಸಂತೋಷ ಸಮೃದ್ಧಿಯಿಂದ ಕೂಡಿರಲಿ. ದೇವರು ಅವರಿಗೆ ಆಯುರಾರೋಗ್ಯವನ್ನು ಕರುಣಿಸಿ ಕಾಪಾಡಲಿ ಎಂದು ನಾವು ನೀವೆಲ್ಲ ಸೇರಿ ದೇವರಲ್ಲಿ ಪ್ರಾರ್ಥಿಸೋಣ ಮತ್ತು ಹೃದಯಾಂತರಾಳದಿಂದ ಶುಭ ಹಾರೈಸೋಣ.

                                                                                    -ಗೋವಿಂದರಾವ್ ಎನ್. ರಾಥೋರ್